Teachers: ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ.
Teachers:ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ.ಮಾನ್ಯ ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರ ಆದೇಶ ಸಂಖ್ಯೆ:ಜಿ):ಶಾಶಿಆ: ಹುತು:ಆನು30::2017-18/4820 05:08.03.2018 2) 21:::5:30:2017-18/178 0:23.04.2025 ಆಧೀನದಲ್ಲಿ ನಡೆಯುತ್ತೀರುವ ಬನಹಟ್ಟಿಯ ಎಸ್.ಆರ್.ಎ. ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಖಾಲಿ ಇರುವ ಅನುದಾನಿತ ಸಹ ಶಿಕ್ಷಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸದರಿ ಹುದ್ದೆಗೆ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ರೂ. 54175-99400 ಸರಕಾರದ ನಿಯಮಾನುಸಾರ ಆಗಿರುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ಸ್ವಂತ ಕೈ ಬರಹದ ಅರ್ಜಿಯೊಂದಿಗೆ ಸಂಬಂಧಿಸಿದ ಶೈಕ್ಷಣಿಕ ಮತ್ತು ಮೀಸಲಾತಿ ದೃಢೀಕೃತ ಪ್ರಮಾಣ ಪತ್ರಗಳೊಂದಿಗೆ ರೂ. 1000/- ಗಳ ಬ್ಯಾಂಕ ಡಿ.ಡಿ. ಯನ್ನು ಚೇರಮನ್ನರು ಜನತಾ ಶಿಕ್ಷಣ ಸಂಘ ಬನಹಟ್ಟಿ, ಇವರ ಹೆಸರಿನಲ್ಲಿ ಪಡೆದು ಈ ಜಾಹೀರಾತು ಪ್ರಕಟಣೆಯ ದಿನಾಂಕದಿಂದ 21 ದಿನಗಳೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೆಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ. ಬಾಗಲಕೋಟೆ ಇವರಿಗೆ ಸಲ್ಲಿಸಬೇಕು. ಸಂದರ್ಶನಕ್ಕೆ ಕರೆ ಬಂದಾಗ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.