Guest Lecturer’s Recruitment 2025:4689 ಪಿಯು ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ (Guest Lecturer’s) ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
Guest Lecturer’s Recruitment 2025:ಸರ್ಕಾರಿ ಪದವಿ ಪೂರ್ವ ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಮಂಜೂರಾತಿ ಹುದ್ದೆಗಳಿಗೆ ಅನುಗುಣವಾಗಿ 2025-26ನೇ ಶೈಕ್ಷಣಿಕ ಸಾಲಿಗೆ 4,689 ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಆದೇಶಿಸಿದೆ.
ಅತಿಥಿ ಉಪನ್ಯಾಸಕರಿಗೆ(Guest Lecturer’s) ಮಾಸಿಕ ₹14 ಸಾವಿರ ವೇತನ ನಿಗದಿಪಡಿಸಲಾಗಿದೆ. ಅತಿಥಿ ಉಪನ್ಯಾಸಕರಿಗೆ 1ವಾರದಲ್ಲಿ 10 ಗಂಟೆಗಳ ಕಾರ್ಯಭಾರ ನಿರ್ವಹಿಸಲು ಮಾತ್ರ ಅನುಮತಿ ನೀಡಬೇಕು. ಯಾವುದೇ ಕಾಲೇಜಿನಲ್ಲಿ 10/12 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ಇದ್ದಲ್ಲಿ ಮಾತ್ರ ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬಹುದು. ವಿಷಯದಲ್ಲಿ ಬೋಧನೆಗೆ ಒಬ್ಬರಿಗಿಂತ ಹೆಚ್ಚು ಅಭ್ಯ ರ್ಥಿಗಳು ಮುಂದೆ ಬಂದರೆ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಕಾಲೇಜಿನ ಪ್ರಾಚಾರ್ಯರು ಮತ್ತು ಹಿರಿಯಉಪನ್ಯಾಸಕರ ಸಮಿತಿ ಆಯ್ಕೆ ಮಾಡಬೇಕು ಎಂದು ಸೂಚಿಸಲಾಗಿದೆ.
ಆಯಾ ಜಿಲ್ಲಾ ವ್ಯಾಪ್ತಿಯ ಪಿಯು ಪದವಿ ಪೂರ್ವ ಕಾಲೇಜುಗಳಲ್ಲಿ ಕಡಿಮೆ ಕಾರ್ಯ ಭಾರ ಹೊಂದಿರುವ ವಿಷಯಗಳಿಗೆ ಉಪನ್ಯಾಸಕರನ್ನು ಜಿಲ್ಲೆಯ ಇತರೆ ಕಾಲೇ ಜುಗಳಲ್ಲಿ ಖಾಲಿ ಹುದ್ದೆಗಳಿಗೆ ನಿಯೋಜಿಸಿದ ನಂತರ ಅತಿಥಿ ಉಪ ನ್ಯಾಸಕರನ್ನು ನೇಮಿಸಿ ಕೊಳ್ಳಬೇಕು ಎಂದು ಈ ಆದೇಶದಲ್ಲಿ ತಿಳಿಸಿದೆ.
- Read more…