KSEAB Karnataka SSLC 2 Supply Results 2025:SSLC ಪರೀಕ್ಷೆ 2ರ ಫಲಿತಾಂಶ KSEAB ಮಹತ್ವದ ಮಾಹಿತಿ ಇಲ್ಲಿದೆ.
KSEAB Karnataka SSLC 2 Supply Results 2025:ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ SSLC-2 (Supplementary Exam 2025) ಫಲಿತಾಂಶ ಪ್ರಕಟಣೆಗೆ ಕೆಲವು ದಿನಗಳಿಂದ ಮೌಲ್ಯಮಾಪನ ಶುರುವಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ 3.16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.
ಕಳೆದ ಮೇ 26ರಿಂದ 31ರ ವರೆಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ-2 ಅನ್ನು ನಡೆಸಲಾಗಿತ್ತು. ಇದೀಗ, ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶ ನಿರೀಕ್ಷೆಯಲ್ಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮೂಲಗಳಿಂದ ಪೂರಕ ಪರೀಕ್ಷೆ-2ರ ಫಲಿತಾಂಶ ಪ್ರಕಟಣೆ ಕುರಿತ ನಿಖರ ಮಾಹಿತಿ ಲಭ್ಯವಾಗಿದೆ.
KSEAB Karnataka SSLC 2 Supply Results 2025:ಅನುತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ.
2025ರ SSLC ಮುಖ್ಯ ಪರೀಕ್ಷೆ ಬರೆದ 8.42 ಲಕ್ಷ ವಿದ್ಯಾರ್ಥಿಗಳಲ್ಲಿ 5.24 ಲಕ್ಷ ಜನ ಮಾತ್ರ ಉತ್ತೀರ್ಣರಾಗಿದ್ದು, ಒಟ್ಟಾರೆ ಪಾಸ್ ಶೇಕಡಾವಾರು + 62.34%
SSLC ಮುಖ್ಯ ಪರೀಕ್ಷೆಯಲ್ಲಿ ಒಂದು ಹಾಗೂ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವ ಉದ್ದೇಶದಿಂದ ಪೂರಕ ಪರೀಕ್ಷೆ-2 ಅನ್ನು ನಡೆಸಲಾಗಿದೆ.
ಈ ಬಾರಿ ಗ್ರೇಸ್ ಮಾರ್ಕ್ಸ್ ಪದ್ಧತಿಯನ್ನು ರದ್ದುಗೊಳಿಸಿರುವುದರಿಂದ ಅನುತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಪೂರಕ ಪರೀಕ್ಷೆ-2 ಅನ್ನು ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
KSEAB Karnataka SSLC 2 Supply Results 2025: ಜೂನ್ 20ರೊಳಗೆ ಪರೀಕ್ಷೆ 2ರ ಫಲಿತಾಂಶ?
ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಾಹಿತಿ ಪ್ರಕಾರ ಕಳೆದ ಜೂನ್ 6ರಿಂದ ಪರೀಕ್ಷೆ-2ರ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದೆ.
ಪರೀಕ್ಷೆಯ ಮುಕ್ತಾಯದ ಬಳಿಕ ಒಂದು ವಾರದೊಳಗೆ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಫಲಿತಾಂಶ ಪ್ರಕಟಣೆ ಕಾರ್ಯ ಭರದಿಂದ ಸಾಗುತ್ತಿದೆ.
ಶೀಘ್ರದಲ್ಲೇ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 2(KSEAB Karnataka SSLC 2 Supply Results 2025)ರ ಫಲಿತಾಂಶವನ್ನು ಪ್ರಕಟಿಸುವ ನಿರೀಕ್ಷೆ ಇದ್ದು; ಫಲಿತಾಂಶಗಳ ಬಿಡುಗಡೆಯ ಅಧಿಕೃತ ದಿನಾಂಕ ಮತ್ತು ಸಮಯವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಇದೇ ಜೂನ್ 20ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂಬ ನಿರೀಕ್ಷೆಯಿದೆ.
KSEAB Karnataka SSLC 2 Supply Results 2025: ಕಳೆದ ವರ್ಷಗಳ ಫಲಿತಾಂಶ ಪ್ರಕಟಣೆ ದಿನಾಂಕಗಳು.
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 2(KSEAB Karnataka SSLC 2 Supply Results 2025) ಫಲಿತಾಂಶಗಳನ್ನು ಸಾಮಾನ್ಯವಾಗಿ ಪರೀಕ್ಷೆಗಳು ಮುಗಿದ ಒಂದು ತಿಂಗಳ ಒಳಗಡೆ ಬಿಡುಗಡೆ ಮಾಡಲಾಗುತ್ತದೆ. ಕಳೆದ ವರ್ಷ (2024), ಜೂನ್ 14ರಿಂದ ಜೂನ್ 21ರ ವರೆಗೆ ಪರೀಕ್ಷೆ ನಡೆಸಲಾಗಿತ್ತು. ಆನಂತರ ಜುಲೈ 10 ರಂದು ಅದರ ಫಲಿತಾಂಶವನ್ನು ಪ್ರಕಟಿಸಲಾಗಿತ್ತು.
2023ರಲ್ಲಿ ಜೂನ್ 12 ರಿಂದ ಜೂನ್ 19ರ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ 2(KSEAB Karnataka SSLC 2 Supply Results 2025) ಪರೀಕ್ಷೆ ನಡೆಸಲಾಗಿತ್ತು. ಜೂನ್ 30 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗಿತ್ತು. ಅದೇ ರೀತಿ, 2022ರಲ್ಲಿ ಜೂನ್ 27 ರಿಂದ ಜುಲೈ 4ರ ವರೆಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ 2ರ(KSEAB Karnataka SSLC 2 Supply Results 2025) ಫಲಿತಾಂಶ ಜುಲೈ 21 ರಂದು ಪ್ರಕಟವಾಗಿತ್ತು.
KSEAB Karnataka SSLC 2 Supply Results 2025: ಪ್ರಸ್ತುತ ಈ ವರ್ಷದ ಫಲಿತಾಂಶವನ್ನು ಯಾವಾಗ ಪ್ರಕಟಿಸಲಾಗುವುದು?
ಕಳೆದ ಜೂನ್ 6ರಿಂದ SSLC ಪೂರಕ ಪರೀಕ್ಷೆ-2( KSEAB Karnataka SSLC 2 Supply Results 2025)2025 ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಹಿಂದಿನ ವರ್ಷಗಳ ಫಲಿತಾಂಶ ಪ್ರಕಟಣೆಯ ದಿನಾಂಕವನ್ನು ಗಮನಿಸಿದೆ, ಬಹುಶಃ ಜೂನ್ ತಿಂಗಳ 3ನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.
ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ತಮ್ಮ Registration Number ಬಳಸಿ ಅಧಿಕೃತ ವೆಬ್ಸೈಟ್ karresults.nic.inನಲ್ಲಿ ಫಲಿತಾಂಶ ವೀಕ್ಷಿಸಬಹುದು. ಎಸ್ಎಸ್ಎಲ್ಸಿ ಪರೀಕ್ಷೆ-2 ಫಲಿತಾಂಶದ ಇತ್ತೀಚಿನ ನವೀಕರಣಗಳಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಮತ್ತು ಮಾಹಿತಿ ಮನೆ ಪುಟವನ್ನು ನಿಯಮಿತವಾಗಿ ಪರಿಶೀಲಿಸಬಹುದು.