Karnataka SSLC-2: ಎಸ್.ಎಸ್.ಎಲ್.ಸಿ ಪರೀಕ್ಷೆ-3 ಗೆ ವೇಳಾಪಟ್ಟಿ ಬಿಡುಗಡೆ.
Karnataka SSLC-2:ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-2(Karnataka SSLC-2)ರ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದ 3,15,564 ವಿದ್ಯಾರ್ಥಿಗಳ ಪೈಕಿ 87,330 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.27.67ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಯ ಪರೀಕ್ಷೆ 2 ಫಲಿತಾಂಶಕ್ಕೆ (ಶೇ.31.2) ಹೋಲಿಸಿದರೆ ಶೇ.4.35ರಷ್ಟು ಕುಸಿತವಾಗಿದೆ. ಈ ಫಲಿತಾಂಶವನ್ನು ಉತ್ತಮಗೊಳಿಸಿಕೊಳ್ಳಲು ಮತ್ತೆ ಪರೀಕ್ಷೆ ಬರೆದಿದ್ದ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ -1 ಮತ್ತು 2 ಎರಡೂ ಪರೀಕ್ಷೆಗಳ ಸಂಯೋಜಿತ ಒಟ್ಟಾರೆ ಫಲಿತಾಂಶ ಶೇ.71.43 ರಷ್ಟಾಗಿದೆ. ವಿದ್ಯಾರ್ಥಿಗಳು ಫಲಿತಾಂಶ ನೋಡಲು ಇಲಾಖೆ ವೆಬ್ ಸೈಟ್ https://karresults.nic.in ವೀಕ್ಷಿಸಬಹುದು ಎಂದು ತಿಳಿಸಲಾಗಿದೆ.
Karnataka SSLC-2:ಜು.5-12ರವರೆಗೆ ಪರೀಕ್ಷೆ-3: ಫೇಲ್ ಆದವರಿಗೆ ಶುಲ್ಕ ಇಲ್ಲ.
ಜು.5ರಿಂದ 12ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-3 ನಡೆಯಲಿದೆ. ಪರೀಕ್ಷೆ 1 ಮತ್ತು 2ರಲ್ಲಿ ಫೇಲಾದವರಿಗೆ ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ.
ಪರೀಕ್ಷೆ 3ರ ವೇಳಾಪಟ್ಟಿ: ಜು.5-ಪ್ರಥಮ ಭಾಷೆ, ಜು.7- ವಿಜ್ಞಾನ, ರಾಜ್ಯ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಜು.8- ದ್ವಿತೀಯ ಭಾಷೆ, ಜು.9 – ಗಣಿತ, ಸಮಾಜ ಶಾಸ್ತ್ರ, ಜು.10-ತೃತೀಯ ಭಾಷೆ ಎನ್ಎಸ್ಕ್ಯೂಎಫ್ ವಿಷ ಯಗಳು, ಜು.11-ಸಮಾಜ ವಿಜ್ಞಾನ, ಜು.12 – ಜೆಟಿಎಸ್ ವಿಷಯಗಳು.