Govt Employees DA Hike: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(DA Hike) ಜುಲೈನಿಂದ ಶೇಕಡಾ 3ರಷ್ಟು ಹೆಚ್ಚಳ | ನೌಕರರು,ಪಿಂಚಣಿದಾರರ ವೇತನ ಏರಿಕೆ | ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Govt Employees DA Hike:ಇದೇ ಜುಲೈ ತಿಂಗಳಿನಿಂದ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ(Govt Employees DA Hike) ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಸಾವಿರಾರು ನೌಕರರ ಸಂಬಳ ಕೂಡ ಏರಿಕೆಯಾಗಲಿದ್ದು; ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಈ ಬರುವ ಜುಲೈ ತಿಂಗಳಲ್ಲಿ ಶುಭ ಸುದ್ದಿ ಸಿಗುವ ಸಾಧ್ಯತೆ ಹೆಚ್ಚಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, 2025ರ ಪ್ರಕಾರ ಜುಲೈ ತಿಂಗಳಲ್ಲಿ ತುಟ್ಟಿಭತ್ಯೆ (Dearness Allowance- DA) ಶೇಕಡಾ 3% ಹೆಚ್ಚಳ ಆಗಬಹುದೆಂಬ ನಿರೀಕ್ಷೆ ಇದೆ.
ಇದರಿಂದ ಡಿಎ(DA Hike) ಶೇಕಡಾ 55 ರಿಂದ 58ಕ್ಕೆ ಏರಿಕೆಯಾಗಬಹುದು. ಈ ಏರಿಕೆಯೂ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅಡಿಯಲ್ಲಿ ಜಾರಿಗೆ ಬರುವ ಕೊನೆಯ ಡಿಎ(DA Hike) ಪರಿಷ್ಕರಣೆ ಎನ್ನಲಾಗುತ್ತಿದೆ.
ಡಿಎ(DA Hike) ಏಕೆ ಹೆಚ್ಚಳವಾಗುತ್ತಿದೆ?
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ – ಕೈಗಾರಿಕಾ ಕಾರ್ಮಿಕರಿಗಾಗಿ (AICPI-IW) ಅಂಕಿಅಂಶಗಳ ಆಧಾರದ ಮೇಲೆ ಡಿಎ(DA Hike) ಪರಿಷ್ಕರಣೆ ಜರುಗುತ್ತದೆ. ಈ ಸೂಚ್ಯಂಕವು ದೇಶದ ಕಾರ್ಮಿಕರ ದಿನನಿತ್ಯದ ಜೀವನ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.
2025ರ ಏಪ್ರಿಲ್ನಲ್ಲಿ AICPI-IW ಸೂಚ್ಯಂಕ 143.5ಕ್ಕೆ ತಲುಪಿದ್ದು, ಜನವರಿಯಲ್ಲಿ ಇದು 143.2 ಇತ್ತು. ಆದರೆ ನಿರಂತರವಾಗಿ ಸೂಚ್ಯಂಕ ಏರುತ್ತಿರುವುದು ಡಿಎ(DA Hike) ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತಿದೆ.
ಡಿಎ(DA Hike) ಲೆಕ್ಕಾಚಾರ ಯಾವ ರೀತಿ ನಡೆಯುತ್ತದೆ?
• ಪ್ರತಿ ಆರು ತಿಂಗಳಿಗೊಮ್ಮೆ ಜನವರಿ ಮತ್ತು ಜುಲೈ ತಿಂಗಳಲ್ಲಿ ಡಿಎ(DA Hike) ಪರಿಷ್ಕರಣೆ ನಡೆಯುತ್ತದೆ.
• 2025ರ ಜನವರಿಯಲ್ಲಿ ಡಿಎ(DA) ಶೇಕಡಾ 2ರಷ್ಟು ಹೆಚ್ಚಳವಾಗಿ ಶೇಕಡಾ 55ರಷ್ಟು ಆಗಿತ್ತು.
• ಇದೀಗ, ಎಪ್ರಿಲ್ವರೆಗಿನ ಸೂಚ್ಯಂಕ ಸರಾಸರಿಯೂ ಶೇಕಡಾ 3ರಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ತಜ್ಞರು ನಿರ್ಧರಿಸಿದ್ದಾರೆ.
ಡಿಎ(DA Hike) ಹೆಚ್ಚಳದಿಂದ ಎಷ್ಟು ನೌಕರರಿಗೆ ಲಾಭವಾಗಲಿದೆ?
ಈ DA Hike ಹೆಚ್ಚಳದಿಂದ ಸರಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರು ನೇರ ಲಾಭ ಪಡೆಯಲಿದ್ದಾರೆ. ಡಿಎ(DA) ನೌಕರರ ಸಂಬಳ ಅಥವಾ ಪಿಂಚಣಿಗೆ ಲಗತ್ತಿಸಲಾಗುತ್ತದೆ. ಹೀಗಾಗಿ ಈ ಹೆಚ್ಚಳ ವಾರ್ಷಿಕ ಆದಾಯವನ್ನು ಕೂಡ ಹೆಚ್ಚಿಸುತ್ತದೆ.
DA Hike ಅಧಿಕೃತ ಘೋಷಣೆ ಯಾವಾಗ?
ಪ್ರತಿ ವರ್ಷದಂತೆ, ಈ ವರ್ಷವು ಸಹ ಡಿಎ(DA Hike) ಹೆಚ್ಚಳದ ಅಧಿಕೃತ ಪ್ರಕಟಣೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ದೀಪಾವಳಿ ಸಮಯದಲ್ಲಿ ಪ್ರಕಟವಾಗಲಿದೆ.ಆದರೆ ಪರಿಷ್ಕರಣೆ ಜುಲೈ 1, 2025ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ.
8ನೇ ವೇತನ ಆಯೋಗದ ನಿರೀಕ್ಷೆಯಲ್ಲಿ ನೌಕರರು…
2026ರ ಆರಂಭದಲ್ಲಿ 8ನೇ ವೇತನ ಆಯೋಗವನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಈ ಡಿಎ(DA Hike) ಪರಿಷ್ಕರಣೆ 7ನೇ ವೇತನ ಆಯೋಗದ ಕೊನೆಯ ಬದಲಾವಣೆ ಎನ್ನಿಸಲಿದೆ.
ಡಿಎ(DA Hike) ಹೆಚ್ಚಳ ನೌಕರರ ಮತ್ತು ಪಿಂಚಣಿದಾರರ ಆರ್ಥಿಕ ಸ್ಥಿತಿಗೆ ನೇರವಾಗಿ ಸಹಾಯ ಮಾಡುವ ತೀರ್ಮಾನವಾಗಿದೆ. ಅಧಿಕೃತ ಘೋಷಣೆಯಾದ ನಂತರವೇ ಈ ಪರಿಷ್ಕರಣೆ ಅಂತಿಮವಾಗುತ್ತದೆ. ಈ ಹಿನ್ನಲೆಯಲ್ಲಿ ನೌಕರರು ಸರ್ಕಾರದ ಅಧಿಕೃತ ಪ್ರಕಟಣೆಯ ನಿರೀಕ್ಷೆಯಲ್ಲಿದ್ದಾರೆ.