Crude oil price: ತೈಲ ಬೆಲೆ(Crude oil price)ಗರಿಷ್ಠ ಮಟ್ಟಕ್ಕೆ, ಏಷ್ಯಾ ಷೇರು ಮಾರುಕಟ್ಟೆ ಕುಸಿತ; ನಷ್ಟಕ್ಕೆ ಕಾರಣವಾಗುತ್ತೆ ಇಸ್ಲೆಟ್ ಮತ್ತು ಇರಾನ ಯುದ್ಧ.
Crude oil price:ಇಸ್ರೇಲ್ ಮತ್ತು ಇರಾನ್ ಸಂಘರ್ಷ ಮತ್ತು ಇರಾನ್ ಮೇಲೆ ಅಮೆರಿಕದ ವೈಮಾನಿಕ ದಾಳಿ ಬಳಿಕ, ಏಷ್ಯಾ ಮಾರುಕಟ್ಟೆ ಇದೀಗ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲಾರಂಭಿಸಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಯುದ್ಧದ ಪರಿಣಾಮವಾಗಿ ಕಚ್ಛಾ ತೈಲ ಬೆಲೆ(Crude oil price)ಗಳಲ್ಲಿ ಏರಿಕೆಯನ್ನು ಕಂಡುಬಂದಿದ್ದು, ಏಷ್ಯಾ ಮಾರುಕಟ್ಟೆ ಕುಸಿತದ ಹಾದಿ ಹಿಡಿದಿದೆ. ತೈಲ ಬೆಲೆಗಳು ಶೇ. 2ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಜನವರಿಯ ನಂತರದ ಗರಿಷ್ಠ ಮಟ್ಟವನ್ನು ತಲುಪಿದೆ. ಪರಿಣಾಮವಾಗಿ ಏಷ್ಯಾ-ಪೆಸಿಫಿಕ್ ಷೇರುಗಳ ವಿಶಾಲ ಸೂಚ್ಯಂಕ, ಶೇ. 0.5 ರಷ್ಟು ಕುಸಿತ ಕಂಡಿವೆ.ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇರಾನ್ನ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡುವ ಇಸ್ರೇಲ್ ಪ್ರಯತ್ನಗಳಿಗೆ ಅಮೆರಿಕ ಅಧಿಕೃತವಾಗಿ ಕೈಜೋಡಿಸಿದ ಕಾರಣ. ಇದರಿಂದ ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರವಾಗಿ ಉಲ್ಬಣಗೊಂಡಿದ್ದು, ಜಾಗತಿಕ ಪೂರೈಕೆ ಸರಪಣಿ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನ ಬೀರುತ್ತಿದೆ. ಪ್ರಮುಖವಾಗಿ ಕಚ್ಚಾತೈಲ ಬೆಲೆ(Crude oil price) ಏರಿಕೆಯನ್ನು ಕಂಡಿದ್ದು, ಹೂಡಿಕೆದಾರರ ನಿರಾಸಕ್ತಿ ಏಷ್ಯಾ ಮಾರುಕಟ್ಟೆಯನ್ನು ಹಿಂದಕ್ಕೆ ತಳ್ಳುತ್ತಿದೆ.
ಜಾಗತಿಕ ಹೂಡಿಕೆದಾರರು ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್ನ ಮುಂದಿನ ಸಂಭಾವ್ಯ ಪ್ರತೀಕಾರದ ಕ್ರಮದ ಪರಿಣಾಮಗಳ ಬಗ್ಗೆ ಚಿಂತಿಸುತ್ತಿದ್ದಾರೆ. ಇದರಿಂದಾಗಿ ಹೂಡಿಕೆಗೆ ಹಿಂದೇಟು ಹಾಕುತ್ತಿದ್ದು, ಇಂದು ಜೂನ್ 23- ಸೋಮವಾರ ಏಷ್ಯಾದ ಷೇರು ಮಾರುಕಟ್ಟೆಗಳು ಬಹು ದೊಡ್ಡ ಕುಸಿತ ಕಂಡಿವೆ. ಮಧ್ಯಪ್ರಾಚ್ಯದ ಯುದ್ಧದ ಬಿಕ್ಕಟ್ಟು ಭಾರತದ ಮೇಲೂ ಸಹ ಪರಿಣಾಮ ಬೀರಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆ(Crude oil price)ಗಳು 5 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ತೈಲ ಬೆಲೆಗಳು ಶೇ. 2ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಜನವರಿಯ ನಂತರದ ಗರಿಷ್ಠ ಮಟ್ಟವನ್ನು ತಲುಪಿದೆ. ಇರಾನ್ನ ಪರಮಾಣು ತಾಣಗಳ ಮೇಲಿನ ಅಮೆರಿಕದ ಕ್ಷಿಪಣಿದಾಳಿಗಳು, ಜಾಗತಿಕ ಚಟುವಟಿಕೆ ಹಾಗೂ ಹಣದುಬ್ಬರಕ್ಕೆ ಅಪಾಯವನ್ನು ಉಂಟುಮಾಡಿವೆ.
ಹೌದು ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಕಚ್ಚಾತೈಲ ಬೆಲೆ(Crude oil price) ಏರಿಕೆ ಕಂಡಿದೆ. ಬ್ರೆಂಟ್ ಕಚ್ಚಾತೈಲ ಶೇ. 2.7ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 79.12 ಅಮೆರಿಕನ್ ಡಾಲರ್ಗೆ ತಲುಪಿದೆ. ಅದೇ ರೀತಿ ಯುಎಸ್(US) ಕಚ್ಚಾ ತೈಲವು ಶೇ. 2.8ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 75.98 ಅಮೆರಿಕನ್ ಡಾಲರ್ ತಲುಪಿದೆ. ಷೇರು ಮಾರುಕಟ್ಟೆಗಳು ಕೆಲವು ಸ್ಥಿತಿಸ್ಥಾಪಕತ್ವವನ್ನುತೋರಿಸಿವೆಯಾದರೂ, ಎಸ್ & ಪಿ 500 ಫ್ಯೂಚರ್ಗಳು ಶೇ. 0.5ರಷ್ಟು ಮತ್ತು ನಾಸ್ಡಾಕ್ ಫ್ಯೂಚರ್ಗಳು ಶೇ.0.6ರಷ್ಟು ಕುಸಿತ ಕಂಡಿವೆ.
ಇನ್ನೂ ಜಪಾನ್ನ ಹೊರಗೆ MSCIನ ಏಷ್ಯಾ-ಪೆಸಿಫಿಕ್ ಷೇರುಗಳ ವಿಶಾಲ ಸೂಚ್ಯಂಕ, ಶೇ. 0.5 ರಷ್ಟು ಕುಸಿದಿದೆ. ಜಪಾನ್ನ ನಿಕ್ಕಿ ಶೇ. 0.9 ರಷ್ಟು ಕುಸಿತ ಕಂಡು ಹೆಣಗಾಡುತ್ತಿದೆ. ಅದೇ ರೀತಿ EUROSTOXX 50 ಫ್ಯೂಚರ್ಗಳು ಶೇ. 0.7ರಷ್ಟು ಕುಸಿದರೆ, FTSE ಫ್ಯೂಚರ್ಗಳು ಶೇ. 0.5ರಷ್ಟು ಕುಸಿತ ಕಂಡಿವೆ. DAX ಫ್ಯೂಚರ್ಗಳು ಕೂಡ ಶೇ. 0.7ರಷ್ಟು ಕುಸಿತವನ್ನು ದಾಖಲಿಸಿವೆ.
ಯುರೋಪ್ ಹಾಗೂ ಜಪಾನ್ ಆಮದು ಮಾಡಿಕೊಂಡ ತೈಲ ಹಾಗೂ LNG ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದರೆ ಅಮೆರಿಕ ಈ ದೇಶಗಳಿಗೆ ನಿವ್ವಳ ರಫ್ತುದಾರ ರಾಷ್ಟ್ರವಾಗಿದೆ. ಸರಕು ಸಾಗಾಣಿಕೆ ಮಾರುಕಟ್ಟೆಗಳಲ್ಲಿ, ಚಿನ್ನವು ಶೇ. 0.1ರಷ್ಟು ಕುಸಿದು ಔನ್ಸ್ಗೆ 3,363 ಅಮೆರಿಕನ್ ಡಾಲರ್ ತಲುಪಿದೆ.
ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ಮೊಟಕುಗೊಳಿಸಿರುವುದರಿಂದ ಈಗ ಹಿಂದೆ ಸರಿಯಬಹುದು ಹಾಗೂ ಆಡಳಿತ ಬದಲಾವಣೆಯು ಅಲ್ಲಿ ಕಡಿಮೆ ಪ್ರತಿಕೂಲ ಸರ್ಕಾರವನ್ನು ಅಧಿಕಾರಕ್ಕೆ ತರಬಹುದು” ಎಂಬ ಮಾತುಗಳು ಜಾಗತಿಕ ಹೂಡಿಕೆ ವಲಯಗಳಲ್ಲಿ ಕೇಳಿಬರುತ್ತಿದೆ.
ಒಟ್ಟಿನಲ್ಲಿ ಇಸ್ರೇಲ್ ಹಾಗೂ ಇರಾನ್ ಸಂಘರ್ಷ ಮತ್ತು ಇಸ್ರೇಲ್ ಪರವಾಗಿ ಯುದ್ಧರಂಗಕ್ಕೆ ಧುಮಿಕಿರುವ ಅಮೆರಿಕದ ಮಿಲಿಟರಿ ಕ್ರಮಗಳು, ಜಾಗತಿಕ ಹಾಗೂ ಏಷ್ಯನ್ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿವೆ. ಮಧ್ಯಪ್ರಾಚ್ಯದ ಬಿಕ್ಕಟ್ಟು ಏಷ್ಯಾ ಷೇರು ಮಾರುಕಟ್ಟೆಯನ್ನು ಇನ್ನಷ್ಟು ದಿನಗಳ ಕಾಡಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.