Indira Food Kit:ಅನ್ನಭಾಗ್ಯ ಯೋಜನೆಯಲ್ಲಿ ದೊರೆಯಲಿದೆ ಇಂದಿರಾ ಆಹಾರ ಕಿಟ್‌(Indira Food Kit) ಇದರಲ್ಲಿ ಏನೆಲ್ಲಾ ಸಿಗಲಿದೆ? ವಿತರಣೆ ಹೇಗೆ?

Indira Food Kit:ಅನ್ನಭಾಗ್ಯ ಯೋಜನೆಯಲ್ಲಿ ದೊರೆಯಲಿದೆ ಇಂದಿರಾ ಆಹಾರ ಕಿಟ್‌(Indira Food Kit) ಇದರಲ್ಲಿ ಏನೆಲ್ಲಾ ಸಿಗಲಿದೆ? ವಿತರಣೆ ಹೇಗೆ?

Indira Food Kit

Indira Food Kit:ಉಚಿತ ಅನ್ನಭಾಗ್ಯ ಯೋಜನೆಯಿಂದ ಮನೆ ಮನೆ ಮಾತಾಗಿರುವ ಕರ್ನಾಟಕ ಸರ್ಕಾರ ಇದೀಗ ಮತ್ತೊಂದು ಯೋಜನೆ ಅಂದರೆ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ 5 ಕೇಜಿ ಅಕ್ಕಿಯನ್ನು ನೀಡುವ ಇದರ ಬದಲಾಗಿ ಇಂದಿರಾ ಆಹಾರ ಕಿಟ್‌(Indira Food Kit) ನೀಡಲು ಉದ್ದೇಶಿಸಿದೆ. ಹೀಗಾಗಿ ಪ್ರತಿ ತಿಂಗಳು ಇನ್ನೂ ಪಡಿತರದ ಜೊತೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳಾದ ಸಕ್ಕರೆ, ತೊಗರಿಬೇಳೆ, ಗೋಧಿ ಮತ್ತಿತರ ದಿನಬಳಕೆಯ ಆಹಾರ ಧಾನ್ಯಗಳನ್ನು ಉಚಿತವಾಗಿ ಲಭ್ಯವಾಗಲಿವೆ. ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವುದೊಂದೇ ಬಾಕಿ ಇದ್ದು, ಶೀಘ್ರವೇ ಕರ್ನಾಟಕ ಜನ ಸಾಮಾನ್ಯರಿಗೆ ಇಂದಿರಾ ಆಹಾರ ಕಿಟ್‌(Indira Food Kit) ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಏನಿದು ಇಂದಿರಾ ಆಹಾರ ಕಿಟ್‌? ಅದರಲ್ಲಿ ಏನೆಲ್ಲಾ ಇರಲಿದೆ? ಯಾರೆಲ್ಲಾ ಇಂದಿರಾ ಆಹಾರ ಕಿಟ್‌(Indira Food Kit)ಪಡೆಯಲು ಅರ್ಹರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ…

ಏನಿದು ಇಂದಿರಾ ಆಹಾರ ಕಿಟ್‌(Indira Food Kit)?

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಿಪಿಎಲ್‌(BPL) ಕಾರ್ಡ್‌ಹೊಂದಿರುವ ಪ್ರತಿಯೊಬ್ಬರಿಗೂ ಅನ್ನ ಭಾಗ್ಯ ಯೋಜನೆಯಡಿ 10 ಕೇಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಒದಗಿಸುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೇಜಿ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೇಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇದಕ್ಕೂ ಮುನ್ನ ಅಕ್ಕಿಯ ಅಭಾವ ಇದ್ದ ಕಾರಣಕ್ಕೆ ಫಲಾನುಭವಿಗಳ ಖಾತೆಗೆ 175 ರೂ.ಗಳನ್ನು ಜಮಾ ಮಾಡಲಾಗುತ್ತಿತ್ತು. ಬಳಿಕ ಅಕ್ಕಿಯ ದರ ಇಳಿಕೆ ಆದ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಹಣದ ಬದಲಾಗಿ ಉಚಿತ ಅಕ್ಕಿಯನ್ನು ನೀಡಲಾಗುತ್ತಿದೆ. ಇದೀಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪೌಷ್ಟಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒಳಗೊಂಡ ಇಂದಿರಾ ಆಹಾರ ಕಿಟ್‌(Indira Food Kit) ಗಳನ್ನು ನೀಡಲು ಸರ್ಕಾರ ಉದ್ದೇಶಿಸಿದೆ. ಈ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಇಂದಿರಾ ಆಹಾರ ಕಿಟ್‌ ಅನ್ನು ನೀಡುವ ಸಾಧ್ಯತೆ ಇದೆ.

Indira Food Kit: ಈ ಯೋಜನೆಗೆ ಅತಿ ಶೀಘ್ರವೇ ಸಂಪುಟ ನಿರ್ಣಯ.

ಉಚಿತ ಅಕ್ಕಿ ದುರುಪಯೋಗ ಆಗುತ್ತಿರುವುದನ್ನು ತಡೆಯಲು ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ ವಿತರಿಸುವ ಯೋಜನೆ ಇದಾಗಿದ್ದು, ಜು.2 ರಂದು ನಿಗದಿ ಆಗಿರುವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಅವರು ಹೇಳಿದ್ದಾರೆ.

ಇಂದಿರಾ ಆಹಾರ ಕಿಟ್‌(Indira Food Kit) ಯೋಜನೆಯ ಪ್ರಮುಖ ಉದ್ದೇಶವೇನು?

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಅನ್ನ ಭಾಗ್ಯ ಯೋಜನೆಯು ಪ್ರಸ್ತುತ ಪ್ರತಿ ಬಿಪಿಎಲ್‌ ಪಡಿತರ ಚೀಟಿ( BPL Card) ಹೊಂದಿರುವವರಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತದೆ. ಕೇಂದ್ರ ಸರ್ಕಾರವು ಒದಗಿಸುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವು ನೀಡುವ ಇನ್ನೂ 5 ಕೆಜಿ ಅಕ್ಕಿಯನ್ನು ಸೇರಿಸಿ ಎರಡೂ ಉಚಿತವಾಗಿ ನೀಡಲಾಗುತ್ತಿದೆ. ಆದಾಗ್ಯೂ, ಇತ್ತೀಚಿನ ಮೌಲ್ಯಮಾಪನಗಳು ಕೆಲವು ಕುಟುಂಬಗಳು ತಾವು ನಿಜವಾಗಿ ಸೇವಿಸುವುದಕ್ಕಿಂತ ಹೆಚ್ಚು ಅಕ್ಕಿಯನ್ನು ಪಡೆಯುತ್ತಿವೆ ಎಂದು ಬಹಿರಂಗಪಡಿಸುತ್ತವೆ, ಇದು ಹೆಚ್ಚುವರಿ ದಾಸ್ತಾನು ಅಕ್ರಮವಾಗಿ ವ್ಯಾಪಾರವಾಗಲು ಕಾರಣವಾಗುತ್ತದೆ.
ಬಿಪಿಎಲ್(BPL) ಕುಟುಂಬಗಳಿಗೆ ಪೌಷ್ಟಿಕಾಂಶ-ಭರಿತ ಅಗತ್ಯ ವಸ್ತುಗಳನ್ನು ಒದಗಿಸುವುದು ಹಾಗೂ ಹೆಚ್ಚುವರಿ ಅಕ್ಕಿಯ ದುರುಪಯೋಗದ ಬಗ್ಗೆ ಕಾಳಜಿಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದೆ. ಜೊತೆಗೆ ಕೇವಲ ಅಕ್ಕಿಯೊಂದೇ ನೀಡುತ್ತಿರುವುದರಿಂದ ಬಡವರಿಗೆ ಇತರ ಆಹಾರ ಪದಾರ್ಥಗಳನ್ನು ಅಂಗಡಿಗಳಿಂದ ಹೆಚ್ಚಿನ ದುಡ್ಡುಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ಇದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿತರಿಸುತ್ತಿರುವ ಹೆಚ್ಚುವರಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಇಂದಿರಾ ಆಹಾರ ಕಿಟ್‌(Indira Food Kit) ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

• ಉದ್ದೇಶಿತ ಫಲಾನುಭವಿಗಳು:- ಕರ್ನಾಟಕದಲ್ಲಿ ಸುಮಾರು 1.28 ಕೋಟಿ ಬಿಪಿಎಲ್ ಫಲಾನುಭವಿ ಕುಟುಂಬಗಳು.

• ವೆಚ್ಚ ಮತ್ತು ಉಳಿತಾಯ:- ಪ್ರತಿ ಕಿಟ್‌ಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸುಮಾರು 400 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಪ್ರಸ್ತುತ ಅಕ್ಕಿ ವಿತರಣಾ ಮಾದರಿಗೆ ಹೋಲಿಸಿದರೆ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 720 ಕೋಟಿ ರೂ.ಗಳ ಉಳಿತಾಯಕ್ಕೆ ಕಾರಣವಾಗಬಹುದು.

• ಅನುಷ್ಠಾನ:- ಈ ಯೋಜನೆಯನ್ನು ಮೊದಲು ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರುವ ಸಾಧ್ಯತೆಯಿದೆ. ಮೌಲ್ಯಮಾಪನದ ನಂತರ ರಾಜ್ಯಾದ್ಯಂತ ಹಂತ ಹಂತವಾಗಿ ವಿತರಿಸಲಾಗುತ್ತದೆ.

• ವಿತರಣೆ:- ಅಸ್ತಿತ್ವದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್-ಸಂಬಂಧಿತ ಪಡಿತರ ಚೀಟಿಗಳ(Ration card)ಮೂಲಕ ಕಿಟ್‌ಗಳನ್ನು ವಿತರಿಸುವ ನಿರೀಕ್ಷೆಯಿದೆ.

• ಕಾಲಮಿತಿ:- ಈ ಪ್ರಸ್ತಾವನೆಯನ್ನು ಜುಲೈ 2025 ರ ಆರಂಭದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ.

ಇಂದಿರಾ ಆಹಾರ ಕಿಟ್‌(Indira Food Kit) ನಲ್ಲಿ ಯಾವ ಯಾವ ಧಾನ್ಯಗಳು ಇರುತ್ತವೆ?

ಪ್ರಸ್ತಾವಿತ ಇಂದಿರಾ ಕಿಟ್‌ನಲ್ಲಿ ಗೋಧಿ, ಸಕ್ಕರೆ, ಉಪ್ಪು, ತೊಗರಿ ಬೇಳೆ, ಅಡುಗೆ ಎಣ್ಣೆ, ಚಹಾ ಪುಡಿ, ಕಾಫಿ ಪುಡಿ ನೀಡಲು ಉದ್ದೇಶಿಸಲಾಗಿದೆ. ಅದರಂತೆ ಕಿಟ್‌ನಲ್ಲಿ ಈ ಕೆಳಗಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಇರವಲಿವೆ.
• 2 ಕೆಜಿ ಗೋಧಿ
• 1 ಕೆಜಿ ತೊಗರಿ ಬೇಳೆ
• 1 ಲೀಟರ್ ಅಡುಗೆ ಎಣ್ಣೆ
• 1 ಕೆಜಿ ಸಕ್ಕರೆ
• 1 ಕೆಜಿ ಉಪ್ಪು
• 100 ಗ್ರಾಂ ಚಹಾ ಪುಡಿ
• 50 ಗ್ರಾಂ ಕಾಫಿ ಪುಡಿ

ಉಚಿತ ಅಕ್ಕಿಯ ಬದಲು ಇಂದಿರಾ ಕಿಟ್‌(Indira Food Kit) ನೀಡುತ್ತಿರುವುದೇಕೆ?

ಸದ್ಯದ ಲೆಕ್ಕಾಚಾರ ಪ್ರಕಾರ, ಪ್ರತಿ ಕಿಲೋ ಅಕ್ಕಿಗೆ (ಸಾಗಣೆ ವೆಚ್ಚ ಸೇರಿ) 30 ರೂ. ವೆಚ್ಚ ತಗಲುತ್ತಿದೆ. ಅಕ್ಕಿ ವಿತರಿಸುವುದಕ್ಕಾಗಿ ಪ್ರತಿ ತಿಂಗಳು 573 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ವಾರ್ಷಿಕ ಒಟ್ಟು 6,876 ರೂ.ಕೋಟಿ ವೆಚ್ಚವಾಗುತ್ತಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಶೇ 90ಕ್ಕಿಂತಲೂ ಹೆಚ್ಚು ಫಲಾನುಭವಿಗಳು ಹೆಚ್ಚುವರಿ ಅಕ್ಕಿ ಮತ್ತು ನೇರ ನಗದು ವರ್ಗಾವಣೆಯ ಬದಲು ಬೇಳೆಕಾಳುಗಳು, ಎಣ್ಣೆ, ಸಕ್ಕರೆ ಇತ್ಯಾದಿಗಳನ್ನು ಒಳಗೊಂಡಿರುವ ಪೌಷ್ಟಿಕಾಂಶಯುಕ್ತ ಆಹಾರ ಸಾಮಗ್ರಿಗಳನ್ನು ಪಡೆಯಲು ಒಲವು ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಹೆಚ್ಚುವರಿ ಅಕ್ಕಿಯ ಬದಲು ಕಿಟ್ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.

ಇಂದಿರಾ ಕಿಟ್‌(Indira Food Kit) ವಿತರಣೆಯಿಂದ ಸರ್ಕಾರಕ್ಕೆ ಏನು ಲಾಭ!

ರಾಜ್ಯದಲ್ಲಿ ಬಿಪಿಎಲ್ 1.28 ಕೋಟಿ ಫಲಾನುಭವಿ ಕುಟುಂಬಗಳಿವೆ. ಪ್ರತಿ ಕುಟುಂಬದಲ್ಲಿ ಸರಾಸರಿ 3.5 ಫಲಾನುಭವಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಇಂದಿರಾ ಕಿಟ್(Indira Food Kit) ನೀಡುವುದರಿಂದ ಪ್ರತಿ ಕುಟುಂಬಕ್ಕೆ ಪ್ರಸ್ತುತ ಮಾರುಕಟ್ಟೆ ದರದಂತೆ ಪ್ರತಿ ತಿಂಗಳಿಗೆ ಅಂದಾಜು 400 ರೂ. ವೆಚ್ಚ ವಾಗುಲಿದೆ. ಪ್ರಸ್ತುತ ದರದಲ್ಲಿ ಪ್ರತಿ ಕೇಜಿಗೆ ಅಕ್ಕಿಗೆ 30 ರೂ.ಗಳ ಅಂದಾಜಿನಂತೆ ಪ್ರತಿ ಫಲಾನುಭವಿಗೆ 5 ಕೇಜಿ ಅಕ್ಕಿಯ ಬದಲು ಹಣವನ್ನು ನೀಡಲು ಸರ್ಕಾರಕ್ಕೆ 150 ರೂ. ವೆಚ್ಚವಾಗುತ್ತಿದೆ. ಪ್ರಸ್ತುತ ಅಕ್ಕಿಯನ್ನೇ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಆದರೆ, ಒಂದು ಕುಟುಂಬಕ್ಕೆ ಹೆಚ್ಚುವರಿ ಅಕ್ಕಿಯ ಬದಲು ಇಂದಿರಾ ಆಹಾರ ಕಿಟ್‌(Indira Food Kit) ಪ್ಯಾಜೇಜ್‌ ನೀಡುವುದರಿಂದ ಸರ್ಕಾರದ ವೆಚ್ಚ ಮಾಸಿಕ 573 ಕೋಟಿ ರೂ.ಗಳಿಂದ 512 ಕೋಟಿ ರೂ.ಗೆ ಇಳಿಯಲಿದೆ. ವಾರ್ಷಿಕ ಒಟ್ಟು ₹6,144 ಕೋಟಿ ಆಗಬಹುದು ಎಂದು ಲೆಕ್ಕ ಹಾಕಲಾಗಿದೆ. ಹೀಗೆ ಅಕ್ಕಿಯ ಬದಲಾಗಿ ಕಿಟ್ ವಿತರಿಸಿದರೆ ಪ್ರತಿ ತಿಂಗಳು 60 ಕೋಟಿ ರೂ.ನಂತೆ ವಾರ್ಷಿಕ ಅಂದಾಜು ₹720 ಕೋಟಿ ಉಳಿತಾಯ ಆಗಬಹುದು ಎಂದೂ ಇಲಾಖೆ ಲೆಕ್ಕಾಚಾರ ಮಾಡಿದೆ.

WhatsApp Group Join Now
Telegram Group Join Now