Atal pension scheme: ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ(Atal pension scheme)ಯಲ್ಲಿ ತಿಂಗಳಿಗೆ ₹5000 ಪಿಂಚಣಿ ಕೇವಲ ₹40 ಕಂತು ಕಟ್ಟಿದರೆ ಸಾಕು.

Atal pension scheme: ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ(Atal pension scheme)ಯಲ್ಲಿ ತಿಂಗಳಿಗೆ ₹5000 ಪಿಂಚಣಿ ಕೇವಲ ₹40 ಕಂತು ಕಟ್ಟಿದರೆ ಸಾಕು.

Atal pension scheme

Atal pension scheme: ಭಾರತದ ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಅವರ ಭದ್ರತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ‘ಅಟಲ್ ಪಿಂಚಣಿ ಯೋಜನೆ (Atal Pension Yojana – APY)’ನ್ನು ರೂಪಿಸಿದೆ. ಈ ಯೋಜನೆಯಡಿಯಲ್ಲಿ, ಚಂದಾದಾರರು ತಮ್ಮ ವಯಸ್ಸು ಮತ್ತು ಕೊಡುಗೆ ಮೊತ್ತದ ಆಧಾರದ ಮೇಲೆ ತಿಂಗಳಿಗೆ ₹1,000 ರಿಂದ ₹5,000ರವರೆಗೆ ಖಾತರಿಪಡಿಸಿದ ಪಿಂಚಣಿಯನ್ನು 60ನೇ ವಯಸ್ಸಿನ ನಂತರ ಪಡೆಯಲು ಅರ್ಹರಾಗುತ್ತಾರೆ.

Atal pension scheme ಗೆ ಯಾರೆಲ್ಲಾ ಅರ್ಜಿ ಹಾಕಬಹುದು?

ಈ ಯೋಜನೆಯಲ್ಲಿ ಭಾಗವಹಿಸಲು ಈ ಕೆಳಗಿನ ಅರ್ಹತಾ   ಪ್ರಮುಖ ಅಂಶಗಳನ್ನು ಹೊಂದಿರಬೇಕು.

• ವಯಸ್ಸು:- 18ರಿಂದ 40 ವರ್ಷದೊಳಗಿನ ಯಾರಾದರೂ ಈ ಯೋಜನೆಗೆ ಸೇರಬಹುದು.
• ಬ್ಯಾಂಕ್ ಖಾತೆ:- ಉಳಿತಾಯ ಬ್ಯಾಂಕ್ ಖಾತೆ ಮತ್ತು  ಅಂಚೆ ಕಚೇರಿ ಉಳಿತಾಯ ಖಾತೆ ಹೊಂದಿರುವವರು ಮಾತ್ರ ಅರ್ಜಿ ಹಾಕಬಹುದು.
• ಆಧಾರ್ ಕಾರ್ಡ್ ಮತ್ತು ಮೊಬೈಲ್:- ನೋಂದಣಿಯ ಸಮಯದಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವುದು ಸುಲಭತೆಗೆ ಸಹಕಾರಿ, ಆದರೆ ಅವು ಕಡ್ಡಾಯವಲ್ಲ.

ಪಿಂಚಣಿಯ ಅಗತ್ಯತೆ  ವಿದೆಯೇ?

• ವಯಸ್ಸು ಜಾಸ್ತಿಯಾದಂತೆ ಆದಾಯ ಗಳಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.
• ಜೀವನ ವೆಚ್ಚದ ಏರಿಕೆ ಹಾಗೂ ದೀರ್ಘಾಯುಷ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸಿಕ ಖಚಿತ ಆದಾಯ ಅಗತ್ಯವಾಗಿದೆ.
• ವಿಭಜಿತ ಕುಟುಂಬ ವ್ಯವಸ್ಥೆಗಳಿಂದ ವೃದ್ಧರಿಗೆ ಆರ್ಥಿಕ ಅವಲಂಬನೆ ತೀರಾ ಕಡಿಮೆಯಾಗಿದೆ.
• ಕೇಂದ್ರ ಸರ್ಕಾರದಿಂದ ನಿರ್ಧಿಷ್ಟ ಪಿಂಚಣಿ ನಿರ್ಧಾರವು ಗೌರವಯುತ ಜೀವನವನ್ನು ಒದಗಿಸಲು ಸಹಾಯಕವಾಗುತ್ತದೆ.

Atal pension scheme ಈ ಯೋಜನೆಯ ಪ್ರಮುಖ ಲಕ್ಷಣಗಳು.

• ಚಂದಾದಾರರ ಕೊಡುಗೆಗಳು ತಿಂಗಳಿಗೆ ಹಾಗೂ ತ್ರೈಮಾಸಿಕವಾಗಿ ಬೇಕಾದರೆ ಡೆಬಿಟ್ ಆಗುತ್ತವೆ.
• ಪಿಂಚಣಿಯ ಮೊತ್ತವನ್ನು ನಿಗದಿಪಡಿಸಿ, ಅದಕ್ಕೆ ತಕ್ಕಂತೆ ಕೊಡುಗೆ ಮೊತ್ತವನ್ನು ಆಯ್ಕೆ ಮಾಡಬಹುದು.
• ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡವರು 60 ವರ್ಷ ತುಂಬಿದ ಬಳಿಕ ಜೀವನಪೂರ್ತಿ ಪಿಂಚಣಿ ಪಡೆಯುತ್ತಾರೆ.

Atal pension scheme ಈ ಯೋಜನೆಗೆ ಹೇಗೆ ನೋಂದಾಯಿಸಬೇಕು?

ಯಾವುದೇ ಬ್ಯಾಂಕ್ ಮತ್ತು ಅಂಚೆ ಕಚೇರಿಗೆ ಹೋಗಿ, ಅಟಲ್ ಪಿಂಚಣಿ ಯೋಜನೆ(Atal pension scheme) ಫಾರ್ಮ್ ಪಡೆದು ಪೂರೈಸಿ ಸಲ್ಲಿಸಬಹುದು. ಹಲವಾರು ಬ್ಯಾಂಕುಗಳಲ್ಲಿ ಆನ್‌ಲೈನ್ ನೋಂದಣಿಯ ಸೌಲಭ್ಯವೂ ಲಭ್ಯವಿದೆ.

WhatsApp Group Join Now
Telegram Group Join Now