Aadhar card:ಪೋಷಕರೆ ನಿಮ್ಮ ಮಕ್ಕಳ ಆಧಾರ್ ಕಾರ್ಡ್(Aadhar card ವಿವರ) ಅಪ್ಡೇಟ್ ಮಾಡಲು ಸೂಚನೆ ನೀಡಲಾಗಿದೆ ಇಲ್ಲವಾದರೆ ಆಧಾರ್ ಕಾರ್ಡ್ ರದ್ದುಗೊಳಿಸಲಾಗುವುದು.
Aadhar card: ಪೋಷಕರೆ ನಿಮ್ಮ ಮಗು ಐದು ವರ್ಷಕ್ಕಿಂತ ಚಿಕ್ಕವರಿದ್ದಾಗ ಆಧಾರ್ ಮಾಡಿಸಿದ ಮಕ್ಕಳು 7 ವರ್ಷ ತುಂಬುವುದರ ಒಳಗಾಗಿ ಕಡ್ಡಾಯವಾಗಿ ಬಯೋಮೆಟ್ರಿಕ್ಸ್ ಅಪ್ ಡೇಟ್ ಮಾಡಬೇಕು, ಇಲ್ಲದಿದ್ದರೆ ಅವರ ಆಧಾರ್ ರದ್ದಾಗುತ್ತದೆ ಎಂದು ಯೂನಿಕ್ ಐಡೆಂಟಿಫಿಕೇಶನ್ ಆಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ತಿಳಿಸಿದೆ. ಈ ಕುರಿತು ಸಂಬಂಧಿಸಿದ ಮಕ್ಕಳ ಪಾಲಕರಿಗೆ ಎಸ್ಸೆಮ್ಮೆಸ್ ಕಳಿಸಲಾಗುತ್ತಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಕೊಡುವಾಗ ಫೋಟೋ, ಹೆಸರು, ಜನ್ಮ ದಿನಾಂಕ, ಲಿಂಗ, ಹಾಗೂ ವಿಳಾಸ ಮುಂತಾದ ವಿವರ ಮಾತ್ರ ಪಡೆಯಲಾಗಿರುತ್ತದೆ. 7 ವರ್ಷ ಆಗುವುದರೊಳಗೆ ಬೆರಳಚ್ಚು, ಕಣ್ಣಿನ ಪಾಪೆಯ ಚಿತ್ರ ಮತ್ತು ಇತ್ತೀಚಿನ ಫೋಟೋವನ್ನು ಅಪ್ಡೇಟ್ ಮಾಡುವುದು ನಿಯಮಗಳ ಪ್ರಕಾರ ಕಡ್ಡಾಯ. 5ರಿಂದ 7ರವರೆಗಿನ ವಯಸ್ಸಿನಲ್ಲಿ ಅಪ್ಡೇಟ್ ಮಾಡಿದರೆ ಶುಲ್ಕ ಇಲ್ಲ. ಅನಂತರದ ಮಾಡಿಸಿ ವಾಡೆ 1೦ ರೂ. ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Read more…
ಇನ್ನು ಮುಂದೆ ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿ 3ನೇ ಪರೀಕ್ಷೆ'(SSLC-2 PUC EXAM -3) ರದ್ದು.