Aadhar card:ಆಧಾರ್ ಕಾರ್ಡ್(Aadhar card) ಅಪ್‌ಡೇಟ್ ಮಾಡದಿದ್ದರೆ ವೇತನವಿಲ್ಲ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದಾರೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Aadhar card:ಸರ್ಕಾರಿ ಶಾಲಾ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಆನ್‌ಲೈನ್ ಹಾಜರಾತಿಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿಗೂ ಆನ್‌ಲೈನ್ ಹಾಜರಾತಿಗೆ ಆದೇಶ ಹೊರಡಿಸಿದೆ. ಈ ಸಂಬಂಧ ಕೂಡಲೇ ಆಧಾರ್ (Aadhar)ಸಂಖ್ಯೆ ಅಪ್‌ಡೇಟ್ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ತಿಂಗಳ ವೇತನ ಪಾವತಿ ಮಾಡುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹಾಜರಾತಿ ನಿರ್ವಹಣೆ ವ್ಯವಸ್ಥೆಯಲ್ಲಿ ಅನುಸರಿಸುತ್ತಿರುವ ರಿಜಿಸ್ಟರ್ ಆಧಾರಿತ ದಾಖಲಾತಿ ಹಾಗೂ ಹಸ್ತಚಾಲಿತ ಸಹಿ ಒಳಗೊಂಡ ಹಾಜರಾತಿ ಸೆರೆಹಿಡಿಯುವ ಸಾಂಪ್ರದಾಯಿಕ ವಿಧಾನಗಳ ದೃಢೀಕರಣದ ಸವಾಲುಗಳನ್ನು ಪರಿಹರಿಸಬೇಕಿದೆ. ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ಎಂಬ ವಿನೂತನ ತಂತ್ರಾಂಶವನ್ನು ‘ಮೊಬೈಲ್ ಆಧಾರಿತ ಅಪ್ಲಿಕೇಷನ್) ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶವು ಕೃತಕ ಬುದ್ಧಿಮತ್ತೆ ಆಧಾರಿತ, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ.
ಆಡಳಿತ ಕೇಂದ್ರವು ಅಭಿವೃದ್ಧಿಪಡಿಸಿರುವ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು ವಿಸ್ತರಿಸಲು ನೌಕರರ ಆಧಾರ್(Aadhar card )ಮಾಹಿತಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಎಲ್ಲ ಡಿಡಿಒ(DDO)ಗಳಿಗೆ ತಮ್ಮ ನೌಕರರ ಆಧಾರ್(Aadhar card) ಮಾಹಿತಿಗಳು ಸೀಡ್ ಆಗಿರುವುದನ್ನು ಪರಿಶೀಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಸರ್ವೀಸ್ ರಿಜಿಸ್ಟರ್‌ನಲ್ಲಿ ಆಧಾರ್ ಅಪ್‌ಡೇಟ್ ಹಾಗೂ ಅಪ್ ಡೇಟ್ ಮಾಡದ ಬಗ್ಗೆ ನೌಕರರ ಮಾಹಿತಿಗಳನ್ನು ಪರಿಶೀಲಿಸಬೇಕು. ನೌಕರರ ಆಧಾರ್ ಮಾಹಿತಿಗಳು ನಮೂದಾಗದಿದ್ದಲ್ಲಿ ಸರ್ವೀಸ್ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಒಂದು ವೇಳೆ
ಆಧಾರ್ ನಂಬರ್ ಅನ್ನು ನಮೂದಿಸದ ಅಧಿಕಾರಿ/ನೌಕರರ ಮುಂದಿನ ತಿಂಗಳ ವೇತನವನ್ನು ಜನರೇಟ್ ಮಾಡುವುದಿಲ್ಲ. ಎಲ್ಲ ಡಿಡಿಒಗಳು ಈ ಬಗ್ಗೆ ತುರ್ತಾಗಿ ಕ್ರಮ ವಹಿಸಿ ತಮ್ಮ ಕಚೇರಿಯ ಎಲ್ಲ ಅಧಿಕಾರಿ/ನೌಕರರ ಆಧಾರ್ ಮಾಹಿತಿಗಳನ್ನು ಕಡ್ಡಾಯವಾಗಿ ತಮ್ಮ ಲಾಗಿನ್‌ಗಳಲ್ಲಿಯೇ ನಮೂದಿಸಲು ತಿಳಿಸಲಾಗಿದೆ ಎಂದು ಜಂಟಿ ನಿರ್ದೇಶಕ ವಿಜಯ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.