Learning progress:ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕಲಿಕಾ ಪ್ರಗತಿ(Learning progress) ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಿದೆ.

Learning progress:ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕಲಿಕಾ ಪ್ರಗತಿ(Learning progress) ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಿದೆ.

Learning progress

Learning progress:ರಾಜ್ಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಪಠ್ಯಕ್ರಮದ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿರುವ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಬಳಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ(Learning progress) ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಶಾಲೆಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಮತ್ತು ಪ್ರತಿ ಪಾಠದ ನಂತರ ವಿದ್ಯಾರ್ಥಿಗಳ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಪ್ರಶ್ನೆಕೋಠಿಯ ಬಳಕೆ, ಅನುಷ್ಠಾನ, ಮೇಲ್ವಿಚಾರಣೆ ಹಾಗೂ ಅನುಪಾಲನೆ ಸಂಬಂಧ ಉಲ್ಲೇಖಿತ-1ರ ಸುತ್ತೋಲೆಯ ಮೂಲಕ ಮಾರ್ಗದರ್ಶನ ನೀಡಲಾಗಿದೆ ಎಂದಿದೆ.ಮುಂದುವರೆದು, ಉಲ್ಲೇಖ-2ರಂತೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ನೀಡಿದ ಮಾರ್ಗದರ್ಶನದಂತೆ, ಸುತ್ತೋಲೆಗೆ ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದ್ದು. ಉಳಿದಂತೆ ಎಲ್ಲಾ ಅಂಶಗಳು ಯಥಾವತ್ತಾಗಿರುತ್ತವೆ.

1ರಿಂದ 5ನೇ ತರಗತಿಯ ಪಾಠ ಆಧಾರಿತ ಮೌಲ್ಯಾಂಕನಕ್ಕೆ 10 ಅಂಕಗಳಿಗೆ ಲಿಖಿತ ಮತ್ತು 05 ಅಂಕಗಳಿಗೆ ಮೌಖಿಕ ಒಟ್ಟು 15 ಅಂಕಗಳಿಗೆ ಎಲ್ಲಾ ರೀತಿಯ ವಸ್ತು ನಿಷ್ಠ ಪ್ರಶ್ನೆಗಳು ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಂತೆ ಪಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ಪಾಠ ಆಧಾರಿತ ಮೌಲ್ಯಾಂಕನ ತಂತ್ರಾಂಶದಲ್ಲಿ ದಾಖಲಿಸುವುದು. 2. 6 ಮತ್ತು 7ನೇ ತರಗತಿಯ ಪಾಠ ಆಧಾರಿತ ಮೌಲ್ಯಾಂಕನಕ್ಕೆ 20 ಅಂಕಗಳಿಗೆ ಐಂ ಪ್ರಶ್ನೆಕೋಠಿಯ ವಸ್ತು ನಿಷ್ಠ ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಲಿಖಿತ ಪಾಠ ಆಧಾರಿತ ಮೌಲ್ಯಾಂಕನ ಮಾಡುವುದು ಹಾಗೂ SATS ತಂತ್ರಾಂಶದಲ್ಲಿ ದಾಖಲಿಸುವುದು ಸೇರಿದಂತೆ ಅನೇಕ ಅಂಶಗಳನ್ನು ದಾಖಲಿಸಲಾಗಿದೆ.

WhatsApp Group Join Now
Telegram Group Join Now