KBCWWB Revised List:ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBCWWB) 186 ಹುದ್ದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.

KBCWWB Revised List:ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBCWWB) 186 ಹುದ್ದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.

KBCWWB

KBCWWB Revised List:ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBCWWB) ಯಲ್ಲಿನ Welfare Officer, Filed Inspector, FDA & SDA ಸೇರಿದಂತೆ 186 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯು (Final Select List) ಇದೀಗ ಪ್ರಕಟಗೊಂಡಿದೆ.!!

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ(KBCWWB) ವತಿಯಿಂದ ವಿವಿಧ ವೃಂದದ 186 ಹುದ್ದೆಗಳಿಗೆ ನೇಮಕಾತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಕೋರಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉಲ್ಲೇಖ 01 ರ ಮುಖೇನ ಒಂದೇ ಅಧಿಸೂಚನೆಯನ್ನು ಹೊರಡಿಸಿ ಕಲ್ಯಾಣ ಅಧಿಕಾರಿ, ಕ್ಷೇತ್ರ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಆಪ್ತ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ ಪರೀಕ್ಷೆ ನಡೆಸಿ ಅಂತಿಮ ಅಂಕಗಳ ಪಟ್ಟಿಯನ್ನು ದಿನಾಂಕ:24-06-2024 ರಂದು ಪ್ರಕಟಿಸಲಾಗಿರುತ್ತದೆ.

Revised List – CLICK HERE

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಯ್ಕೆಗೆ ಅರ್ಹರಾದ ಎಲ್ಲಾ ಅಭ್ಯರ್ಥಿಗಳ ಪಟ್ಟಿಯನ್ನು ಮಂಡಳಿಗೆ ಸಲ್ಲಿಸಿ ಆಯ್ಕೆ ಪಟ್ಟಿಯನ್ನು ಮಂಡಳಿಯ ಹಂತದಲ್ಲಿ ತಯಾರಿಸಿಕೊಳ್ಳಲು ತಿಳಿಸಿದ್ದು, ಅದರಂತೆ, ಮಂಡಳಿಯಲ್ಲಿ 1:3ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿ ಉಲ್ಲೇಖ (2)ರನ್ವಯ ದಿನಾಂಕ: 06-02-2025 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿರುತ್ತದೆ ಹಾಗೂ ತಾತ್ಕಾಲಿಕ ಪಟ್ಟಿಯ ಆಯ್ಕೆ ವಿಧಾನದ ಕುರಿತು ಕೆಲವು ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿರುತ್ತದೆ. ತದನಂತರ ಸುತ್ತೋಲೆ ಸಂಖ್ಯೆ: ಸಿಆಸುಇ 03 ಹೈಕಕೋ 2019 ದಿನಾಂಕ: 15-06-2022 ರನ್ವಯ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲು ಕ್ರಮಕೈಗೊಳ್ಳಲಾಗಿತ್ತು.

ಆದರೆ, ಆರ್‌ಪಿಸಿ ವೃಂದದಲ್ಲಿ ಆಯ್ಕೆಯಾಗಿರುವ ಕಲ್ಯಾಣ ಕರ್ನಾಟಕ ಮಿಸಲಾತಿಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಸಹ ಕಲ್ಯಾಣ ಕರ್ನಾಟಕ ವೃದದ ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಲು ಕ್ರಮ ಕೈಗೊಂಡ ಬಗ್ಗೆ ನಿರ್ದಿಷ್ಟವಾಗಿ ಆಕ್ಷೇಪಣೆ ವ್ಯಕ್ತವಾಯಿತು.

ಈ ಹಿನ್ನೆಲೆಯಲ್ಲಿ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ “ಹೈದರಾಬಾದ್ ಕರ್ನಾಟಕ/ಸ್ಥಳೀಯ ವೃಂದದಡಿ ಆಯ್ಕೆ ಪಟ್ಟಿ ತಯಾರಿಸುವಾಗ ಉಳಿಕೆ ಮೂಲ ವೃಂದದಲ್ಲಿ ಆಯ್ಕೆಯಾಗಿರುವ ಸ್ಥಳೀಯ ಅಭ್ಯರ್ಥಿಗಳನ್ನೂ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸಬೇಕೆ? ಅಥವಾ ಉಳಿಕೆ ಮೂಲ ವೃಂದದಡಿ ಆಯ್ಕೆಯಾಗಿರುವ ಸ್ಥಳೀಯ ಅಭ್ಯರ್ಥಿಗಳನ್ನು ಹೊರತುಪಡಿಸಿ ಆಯ್ಕೆ ಪಟ್ಟಿ ತಯಾರಿಸಬೇಕೆ?” ಎಂಬುದರ ಬಗ್ಗೆ ನಿರ್ದಿಷ್ಟವಾಗಿ ಸ್ಪಷ್ಟಿಕರಣವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇವರಿಂದ ಸಂಖ್ಯೆ:ಕಕಾಮಂ/ಆಡಳಿತ/ನೇಮಕಾತಿ/ಸಿಆರ್-02/2021-22, ಕೊಡಿಸಿಕೊಡುವಂತೆ” ಪತ್ರ ໖:24-04-2025 ಮತ್ತು ಪತ್ರಸಂಖ್ಯೆ:ಕಕಾಮಂ/ಆಡಳಿತ/ನೇಮಕಾತಿ/ಸಿಆರ್-02/2021-22. ದಿನಾಂಕ:30-05-2025 ರ ಪತ್ರದ ಮೂಲಕ ಕೋರಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ. ದಿನಾಂಕ:11-08-2025 ರ ಸರ್ಕಾರದ ಪತ್ರ ಸಂಖ್ಯೆ:ಕಾಇ 187 ಎಲ್‌ಇಟಿ 2025 ರ ಮೂಲಕ ಸರ್ಕಾರವು ಮಂಡಳಿಗೆ ಸ್ಪಷ್ಟ ಸ್ಪಷ್ಟಿಕರಣವನ್ನು ನೀಡಿರುತ್ತದೆ.

ಸದರಿ ಪತ್ರದಲ್ಲಿ “ಮಿಕ್ಕುಳಿದ ವೃಂದ ಮತ್ತು ಸ್ಥಳೀಯ ವೃಂದದ ಹುದ್ದೆಗಳಿಗೆ ಏಕ ಕಾಲದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿದಾಗ ಆಯ್ಕೆ ಪ್ರಾಧಿಕಾರವು ಮಿಕ್ಕುಳಿದ ವೃಂದಕ್ಕೆ ಸೇರಿದ ಮತ್ತು ಸ್ಥಳೀಯ ವೃಂದಕ್ಕೆ ಸೇರಿದ ಅಭ್ಯರ್ಥಿಗಳನ್ನು ಒಟ್ಟುಗೂಡಿಸಿ ಎಲ್ಲಾ ಅರ್ಹ ಅರ್ಜಿದಾರರ ಕ್ರೋಢೀಕೃತ ಯಾದಿಯನ್ನು ಅವರು ಯಾವ ಜಾತಿ, ಪಂಗಡ, ವರ್ಗಗಳಿಗೆ ಸೇರಿದವರೆನ್ನುವುದನ್ನು ಪರಿಗಣಿಸದೆ ಕೇವಲ ಅವರ ಅರ್ಹತೆಯ ಆಧಾರದ ಮೇಲೆ ತಯಾರಿಸಿ. ಅರ್ಹತೆ ಆಧಾರದ ಮೇಲೆ ಜಾರಿಯಲ್ಲಿರುವ ಮೀಸಲಾತಿಯನ್ನು ಅನುಸರಿಸಿ ಮಿಕ್ಕುಳಿದ ವೃಂದದ (RPC) ಆಯ್ಕೆ ಪಟ್ಟಿಯನ್ನು ತಯಾರಿಸಿ ಪ್ರಕಟಿಸಬಹುದಾಗಿರುತ್ತದೆ. ಮೇಲ್ಕಂಡಂತೆ ಮಿಕ್ಕುಳಿದ ವೃಂದದ ಆಯ್ಕೆ ಪಟ್ಟಿಯನ್ನು ತಯಾರಿಸಿದ ನಂತರ ಆ ಕ್ರೋಢೀಕೃತ ಪಟ್ಟಿಯಲ್ಲಿ ಆಯ್ಕೆಯಾಗದೇ ಉಳಿದ ಸ್ಥಳೀಯ ಪ್ರದೇಶಕ್ಕೆ ಸೇರಿದ ಅಭ್ಯರ್ಥಿಗಳನ್ನು ಅವರ ಅರ್ಹತೆ ಆಧಾರದ ಮೇಲೆ ಜಾರಿಯಲ್ಲಿರುವ ಮೀಸಲಾತಿಯನ್ನು ಅನುಸರಿಸಿ ಸ್ಥಳೀಯ ವೃಂದದ (HK) ಆಯ್ಕೆ ಪಟ್ಟಿಯನ್ನು ತಯಾರಿಸಬಹುದಾಗಿರುತ್ತದೆ.” ಎಂದು ತಿಳಿಸಿರುತ್ತದೆ.

ಮೇಲಿನ ಸರ್ಕಾರದ ನಿರ್ದೇಶನದನ್ವಯ ಕಲ್ಯಾಣ ಅಧಿಕಾರಿ, ಕ್ಷೇತ್ರ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಈ ಮೂಲಕ ಪ್ರಕಟಿಸಲಾಗಿದೆ.

ಈ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಸೂಕ್ತ ವಿವರ ಹಾಗೂ ದಾಖಲೆಗಳೊಂದಿಗೆ, ವಿಷಯಸೂಚಿಯಲ್ಲಿ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಎಂದು ನಮೂದಿಸಿ ತಮ್ಮ ಹೆಸರು, ಅರ್ಜಿಸಲ್ಲಿಸಿರುವ ಹುದ್ದೆ ಮತ್ತು ಅರ್ಜಿ ಸಂಖ್ಯೆಯೊಂದಿಗೆ ಖುದ್ದಾಗಿ ಅಥವಾ ರಿಜಿಸ್ಟರ್ ಅಂಚೆ ಮೂಲಕ ಜಂಟಿ ಕಾರ್ಯದರ್ಶಿಗಳು ಹಾಗೂ ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ, ಕ.ಕ.&.ಇ.ನಿ.ಕಾ.ಕ.ಮಂಡಳಿ, ಕಲ್ಯಾಣ ಸುರಕ್ಷಾ ಭವನ, ಡೈರಿ ವೃತ್ತ, ಬೆಂಗಳೂರು – 560029 ಇಲ್ಲಿಗೆ ಸಲ್ಲಿಸುವುದು. ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ:15-09-2025 ರಂದು ಕೊನೆಯ ದಿನಾಂಕವಾಗಿರುತ್ತದೆ.

ನಿಗದಿತ ದಿನಾಂಕದ ನಂತರ ಸಲ್ಲಿಸಲಾಗುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

WhatsApp Group Join Now
Telegram Group Join Now