CET:ಒಳ ಮೀಸಲಾತಿ ವಿಚಾರ ಬಗೆಹರಿಯುತ್ತಿದ್ದಂತೆ ಸಿಇಟಿ(CET) ಪ್ರೌಢಶಾಲಾ ಸಹಶಿಕ್ಷಕರ ಮುಂಬಡ್ತಿಗೆ ಅರ್ಹತಾ ಪರೀಕ್ಷೆ.
CET:ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಪ್ರೌಢಶಾಲಾ ಸಹ ಶಿಕ್ಷಕರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಇದೇ ಮೊದಲ ಬಾರಿಗೆ ಅರ್ಹತಾ ಪರೀಕ್ಷೆ(CET) ನಡೆಸಲಾಗುತ್ತಿದೆ.
ಇಲ್ಲಿಯವರೆಗೂ ಶಿಕ್ಷಕರನ್ನು ಉಪನ್ಯಾಸಕರನ್ನಾಗಿ ಬಡ್ತಿ ನೀಡಲು ಅರ್ಹತಾ ಪರೀಕ್ಷೆ ನಡೆಸಿಲ್ಲ. ಆದರೆ, ಇದೇ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಮೂಲಕ ಬಡ್ತಿ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
950 ಮಂದಿ ಅರ್ಹತೆ ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು-1957ರ ನಿಯಮ 7-ಎ ಅಡಿ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಅರ್ಹರ ಜೇಷ್ಠತಾ ಪಟ್ಟಿ ತಯಾರಿಸಿ ಡಿ.31ರೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿತ್ತು. ಅದರಂತೆ ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಕರ ಜನ್ಮ ದಿನಾಂಕ, ಸೇವೆಗೆ ಸೇರಿದ ವೇಳೆ ಇದ್ದ ಕೇಡರ್, ಪ್ರಸ್ತುತ ಇರುವ ಕೇಡರ್ ಸೇರಿ ಇನ್ನಿತರ ಮಾಹಿತಿಯನ್ನು ಒಳಗೊಂಡ ಪಟ್ಟಿಯನ್ನು ಪಿಯು ಇಲಾಖೆಗೆ ನೀಡಿದೆ. ಪದವಿ ಹಾಗೂ ಬಿ. ಇಡಿ ಅರ್ಹತೆ ಆಧಾರದಲ್ಲಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಎಂ.ಎ.-ಬಿ.
ಇಡಿ ಮತ್ತು ಎಂಎಸ್‌ಸಿ-ಬಿ.ಇಡಿ ಸ್ನಾತಕೋತ್ತರ ಪದವಿ ಪಡೆದಿರುವಂತಹ 950ಕ್ಕೂ ಹೆಚ್ಚಿನ ಶಿಕ್ಷಕರಿದ್ದಾರೆ. PU ಉಪನ್ಯಾಸಕರ ನೇಮಕಾತಿಯಲ್ಲಿ ಶೇ.75 ನೇಮಕಾತಿ ಮತ್ತು ಶೇ.25 ಪ್ರೌಢ ಶಾಲಾ ಸಹ ಶಿಕ್ಷಕರನ್ನು ಬಡ್ತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೀಗೆ ಬಡ್ತಿ ನೀಡುವ ಹುದ್ದೆಗಳ ಪೈಕಿ 696 ಹುದ್ದೆಗಳು ಮಾತ್ರ ಖಾಲಿ ಇವೆ.
ಬಡ್ತಿ ಪರೀಕ್ಷೆಗೆ ಕರಡು ಪಠ್ಯ ಪ್ರಕಟ.
ಪ್ರೌಢಶಾಲಾ ಸಹ ಶಿಕ್ಷಕರಿಗೆ PUC ಉಪನ್ಯಾಸಕರಾಗಿ ಬಡ್ತಿ ನೀಡುವ ಸಲುವಾಗಿ ನಡೆಸುವ ‘ಅರ್ಹತಾ ಪರೀಕ್ಷೆ’ಯ ಪಠ್ಯದ ಕರಡು ಪ್ರತಿಯನ್ನು ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಇದರ ಆಧಾರದಲ್ಲಿ ಬಂದಂತಹ ಆಕ್ಷೇಪಣೆಗಳನ್ನು ಸಹ ಪರಿಶೀಲಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
CET ಸಿ ಆ್ಯಂಡ್ ಆರ್ ನಿಯಮ ಬದಲು.
ಪ್ರೌಢ ಶಾಲಾ ಶಿಕ್ಷಕರನ್ನು ಪಿಯು ಉಪನ್ಯಾಸಕರಾಗಿ ಬಡ್ತಿ ನೀಡುವುದಕ್ಕಾಗಿಯೇ PUC ಉಪನ್ಯಾಸಕ ನೇಮಕದ ಸಿ ಆ್ಯಂಡ್ ಆರ್ ನಿಯಮಗಳನ್ನು 2014ರಲ್ಲಿಯೇ ಬದಲಾವಣೆ ಮಾಡಲಾಗಿದೆ. ಈ ನಿಯಮಗಳ ಆಧಾರದಲ್ಲಿ ಮೊದಲ ಬಾರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕೂ ಮೊದಲು 2012ರಲ್ಲಿ ಸ್ನಾತಕೋತ್ತರ ಪದವಿ ಆಧಾರದಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಬಡ್ತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಅರ್ಹತಾ ಪರೀಕ್ಷೆ (CET)ಯನ್ನು ನಡೆಸಿರಲಿಲ್ಲ.
CET ಅರ್ಹತಾ ಪರೀಕ್ಷೆ ಎಲ್ಲಿಯೂ ಇಲ್ಲದ್ದು ನಮಗೇಕೆ?
ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢ ಶಾಲಾ ಶಿಕ್ಷಕರಾಗಿ ಬಡ್ತಿ ನೀಡಲು ಪರೀಕ್ಷೆ ಇಲ್ಲ. ಅದೇ ರೀತಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವಾ ಬಡ್ತಿ ನೀಡಲು ಪರೀಕ್ಷೆ ಇಲ್ಲ.. ಎಲ್ಲಿಯೂ ಇಲ್ಲದ ಪರೀಕ್ಷೆ ಕೇವಲ ಪ್ರೌಢ ಶಾಲಾ ಶಿಕ್ಷಕರಿಗೆ ಮಾತ್ರ ಏಕೆ ಸೀಮಿತಗೊಳಿಸಲಾಗಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ಧಬಸಪ್ಪ ಪ್ರಶ್ನಿಸಿದ್ದಾರೆ.
- Read more…
ಬೈಲಹೊಂಗಲ ತಾಲೂಕಿನಲ್ಲಿ ಖಾಲಿ ಇರುವ ಉಪನ್ಯಾಸಕರ(Lecturers) ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲದೆ.
ಶಿಕ್ಷಕರ ಅರ್ಹತಾ ಪರೀಕ್ಷೆ( CET)ಯ ಬಗ್ಗೆ ಇಲಾಖೆ ಹೇಳುವುದೇನು?
ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದಕ್ಕೂ ಪಿಯು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುವುದಕ್ಕೂ
ವ್ಯತ್ಯಾಸವಿದೆ. ವಿಷಯಾಧಾರಿತವಾಗಿ ಕೆಲವು ಅರ್ಹತೆಯನ್ನು ಶಿಕ್ಷಕರು ಹೊಂದಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅರ್ಹತಾ ಪರೀಕ್ಷೆ ನಡೆಸಲಾಗುತ್ತಿದೆ ಎನ್ನುತ್ತವೆ ಪಿಯು ಇಲಾಖೆ ಮೂಲಗಳು.
ಒಳ ಮೀಸಲಾತಿ ವಿಚಾರ ಬಗೆಹರಿಯುತ್ತಿದ್ದಂತೆ ಪ್ರೌಢಶಾಲಾ ಸಹ ಶಿಕ್ಷಕರಿಗೆ ಉಪನ್ಯಾಸಕರಾಗಿ ಬಡ್ತಿ ನೀಡುವ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಸಂಬಂಧ ಕರಡು ಪಠ್ಯವನ್ನುಸಹ ಪ್ರಕಟಿಸಲಾಗಿದೆ.
ವಿದ್ಯಾಕುಮಾರಿ ಪಿಯು ಇಲಾಖೆ ನಿರ್ದೇಶಕಿ.