KPTCL:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) ಕಿರಿಯ ಸಹಾಯಕ ಹುದ್ದೆಯ ನೇಮಕಾತಿಗೆ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ.
KPTCL JA Waiting List:KPTCL ನಲ್ಲಿನ (KK & NON KK) Junior Assistant ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಾಯ್ದಿರಿಸಿದ ತಾತ್ಕಾಲಿಕ ಆಯ್ಕೆಪಟ್ಟಿಗಳನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದರೆ 2025 ಅಗಸ್ಟ್-28 ರೊಳಗೆ ಸಲ್ಲಿಸುವುದು.!!
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿ(KPTCL)ತದ ಉದ್ಯೋಗ ಪ್ರಕಟಣೆ ಸಂಖ್ಯೆ ಕವಿಪ್ರನಿನಿ/ಬಿ16/21723/2021-22 ದಿನಾಂಕ 01.02.2022 ಕ್ಕೆ ಅನುಗುಣವಾಗಿ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಜೇಷ್ಮತೆಯ ಆಧಾರದ ಮೇರೆಗೆ ಮತ್ತು ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ನಂತರ, ಕಿರಿಯ ಸಹಾಯಕ(ಕೆ.ಕೆ/ಎನ್.ಕೆ.ಕೆ) ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಟ್-ಆಫ್ ಅಂಕಗಳೊಂದಿಗೆ ಕವಿಪ್ರನಿನಿ ಅಂತರ್ಜಾಲದಲ್ಲಿ, ದಿನಾಂಕ: 08.02.2024 ರಂದು ಪ್ರಕಟಿಸಲಾಗಿತ್ತು.
ತಾತ್ಕಾಲಿಕ ಆಯ್ಕೆ ಪಟ್ಟಿ – CLICK HERE
ಅಂತಿಮ ಆಯ್ಕೆ ಪಟ್ಟಿಯಲ್ಲಿ ಕಿರಿಯ ಸಹಾಯಕ ಹುದ್ದೆಗೆ ಆಯ್ಕೆಗೊಂಡು, ದಾಖಲಾತಿಗಳ ನೈಜತೆ/ಸಿಂಧುತ್ವ ಪ್ರಮಾಣ ಪತ್ರ ಸ್ವೀಕೃತಗೊಳ್ಳದ, ಕೌನ್ಸಿಲಿಂಗ್ ಪ್ರಕ್ರಿಯೆಗೆ ಗೈರುಹಾಜರಾದ ಹಾಗೂ ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಅಭ್ಯರ್ಥಿಗಳಿಗೆ ಬದಲಾಗಿ, ನಿಯಮಾನುಸಾರ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಕಾಯ್ದಿರಿಸಿದ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಕವಿಪ್ರನಿನಿ ಅಂತರ್ಜಾಲ https://kptcl.karnataka.gov.in/Recruitment ದಲ್ಲಿ ಪ್ರಕಟಿಸಲಾಗಿದೆ.
- Read more…
ಇನ್ನು ಮುಂದೆ ವಾಹನದ ಡಿಎಲ್, ಆರ್ಸಿಗೂ ಆಧಾರ್ ಕಾರ್ಡ್(Aadhar card) ಕಡ್ಡಾಯ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸದರಿ ಕಾಯ್ದಿರಿಸಿದ ಪಟ್ಟಿಗೆ ಸಮಂಜಸವಾದ ಆಕ್ಷೇಪಣೆಗಳಿದ್ದಲ್ಲಿ, ಸಂಬಂಧಪಟ್ಟ ಅರ್ಹ ಅಭ್ಯರ್ಥಿಗಳು ಸೂಕ್ತ ವಿವರ ಹಾಗೂ ದಾಖಲೆಗಳೊಂದಿಗೆ, ವಿಷಯಸೂಚಿಯಲ್ಲಿ “ಕಿರಿಯ ಸಹಾಯಕ – ತಾತ್ಕಾಲಿಕ ಕಾಯ್ದಿರಿಸಿದ ಪಟ್ಟಿಗೆ ಆಕ್ಷೇಪಣೆ” ಎಂದು ಕಡ್ಡಾಯವಾಗಿ ನಮೂದಿಸಿ, ತಮ್ಮ ಹೆಸರು ಹಾಗೂ ಅರ್ಜಿ ಸಂಖ್ಯೆಯೊಂದಿಗೆ ಖುದ್ದಾಗಿ ನಿರ್ದೇಶಕರು (ಆಡಳಿತ ಮತ್ತು ಮಾ.ಸಂ.), ನಿಗಮ ಕಾರ್ಯಾಲಯ, ಕವಿಪುನಿನಿ., ಕಾವೇರಿ ಭವನ, ಬೆಂಗಳೂರು ಇಲ್ಲಿಗೆ ಸಲ್ಲಿಸುವುದು. ಆಕ್ಷೇಪಣೆಗಳನ್ನು ಸಲ್ಲಿಸಲು 28.08.2025 ಕೊನೆಯ ದಿನಾಂಕವಾಗಿರುತ್ತದೆ.
ನಿಗದಿತ ದಿನಾಂಕದ ಪರಿಗಣಿಸಲಾಗುವುದಿಲ್ಲ. ನಂತರ ಸಲ್ಲಿಸಲಾಗುವ ಯಾವುದೇ ಆಕ್ಷೇಪಣೆಗಳನ್ನು