Crop loss compensation:ರಾಜ್ಯದ ಅನ್ನದಾತರಿ ಶುಭ ಸುದ್ದಿ ಐದು ವರ್ಷ ಬಳಿಕ ಬೆಳೆ ನಷ್ಟ ಪರಿಹಾರ(Crop loss compensation) ಹೆಚ್ಚಳ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Crop loss compensation: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಮೊತ್ತ ಹೆಚ್ಚಳಕ್ಕೆ ರಾಜ್ಯ ಸರಕಾರ ಮುಂದಾಗಿದೆ. ರಾಜ್ಯದಲ್ಲಿ ಅಂದಾಜು 5.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಅಂದಾಜು ಮಾಡಲಾಗಿದ್ದು, ಎಸ್ ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ನೀಡುವ ಪರಿಹಾರ ಏನೇನೂ ಸಾಲದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಸುಮಾರು 5 ವರ್ಷಗಳ ನಂತರ ಬೆಳೆ ನಷ್ಟ ಪರಿಹಾರ ಪರಿಷ್ಕರಣೆಗೆ ಸರಕಾರ ಮುಂದಾಗಿದೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ಮೊತ್ತ ಹೆಚ್ಚಳ ಮಾಡಲಾಗಿತ್ತು.
ಮಳೆ ಹಾನಿ ಕುರಿತು ಸೋಮವಾರ ಜಿಲ್ಲಾಡಳಿತಗಳೊಂದಿಗೆ ವಿಡಿಯೊ ಸಂವಾದದ ಬಳಿಕ ಸುದ್ದಿಗೋಷ್ಠಿಯಲ್ಲಿ ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರು, ”ಮಳೆಯಿಂದ ರಾಜ್ಯದ ಬಹುಭಾಗಗಳಲ್ಲಿ ವ್ಯಾಪಕವಾಗಿ ಬೆಳೆ ಹಾನಿಯಾಗಿದ್ದು, ರೈತರಿಗೆ ಎಸ್ ಡಿಆರ್ಎಫ್ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರ ನಿಗದಿ ಮಾಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು,”ಎಂದು ಪ್ರಕಟಿಸಿದರು.
ಈ ವರ್ಷ ಉತ್ತಮ ಮುಂಗಾರು ಮಳೆ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಆಗಿತ್ತು. ಆದರೆ, ಮೂರು ನಾಲ್ಕು ವಾರ ಮಧ್ಯೆ ಮಳೆ ಬಾರದ ಕಾರಣ ಹಲವೆಡೆ ಬೆಳೆ ಒಣಗಿತು. ಕೆಲವು ಭಾಗಗಳಲ್ಲಿ ರೈತರು ಮರು ಬಿತ್ತನೆ ಮಾಡಿದರು. ಅದರ ಬೆನ್ನಲ್ಲೇ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ವ್ಯಾಪಕ ಹಾನಿಯಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಸ್ಡಿಆರ್ ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಿದರೆ ರೈತರಿಗೆ ರಿಲೀಫ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಪರಿಹಾರ ಮೊತ್ತ ಹೆಚ್ಚಳ ಮಾಡಲು ಹಾಗೂ ಈ ಹೆಚ್ಚುವರಿ ಹೊರೆಯನ್ನು ರಾಜ್ಯ ಸರಕಾರವೇ ಭರಿಸಲು ಬಯಸಿದೆ.
ಜಂಟಿ ಸಮೀಕ್ಷೆ ಬಳಿಕ ನಿರ್ಧಾರ.
ಪ್ರಾಥಮಿಕ ಸಮೀಕ್ಷೆಯಂತೆ 4,80,256 ಹೆಕ್ಟೇರ್ ಕೃಷಿ ಬೆಳೆ ಹಾಗೂ 40,407 ಹೆಕ್ಟೇರ್ ತೋಟಗಾರಿಕಾ ಬೆಳೆ ಸೇರಿ ಒಟ್ಟು 5,20,663 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಸದ್ಯಕ್ಕೆ 550 ಕೋಟಿ ರೂ. ಬೆಳೆ ನಷ್ಟವನ್ನು ಅಂದಾಜು ಮಾಡಲಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆ ವತಿಯಿಂದ ನಷ್ಟದ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಗರಿಷ್ಠ 10 ದಿನಗಳೊಳಗೆ ಸಮೀಕ್ಷೆ ಕಾರ್ಯ ಮುಗಿಸಲು ಸೂಚಿಸಲಾಗಿದೆ. ವರದಿ ಕೈಸೇರಿದ ಬಳಿಕ ಪರಿಹಾರದ ಮೊತ್ತ ಪರಿಷ್ಕರಣೆ ಕುರಿತು ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಲು ಸರಕಾರ ಬಯಸಿದೆ.
- Read more…
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) Revised Final Select List ಇದೀಗ ಪ್ರಕಟಗೊಂಡಿದೆ.
ಸದ್ಯ ಬೆಳೆ ನಷ್ಟಪರಿಹಾರ ಎಷ್ಟು ?
ವಿಪತ್ತು ನಿರ್ವಹಣಾ ಮಾರ್ಗಸೂಚಿಯಂತೆ ಪ್ರಸ್ತುತ ಗರಿಷ್ಠ 2 ಹೆಕ್ಟೇರ್ ಪ್ರದೇಶದ ಮಿತಿಗೊಳಪಟ್ಟು ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲಾಗುತ್ತಿದೆ.
• ಮಳೆಯಾಶ್ರಿತ ಬೆಳೆ – 8,500 .
• ನೀರಾವರಿ ಪ್ರದೇಶದ ಬೆಳೆ -17,000 ರೂ.
• ತೋಟಗಾರಿಕೆ ಬೆಳೆ- 22,500 ರೂ.
ಮನೆ ಹಾನಿಗೆ ಪ್ರಸ್ತುತ ಎಷ್ಟು?
• ಸಣ್ಣ ಪ್ರಮಾಣದ ಹಾನಿ -6,500 .
• 20%-50% ರಷ್ಟು ಹಾನಿ- 30 ಸಾವಿರ ರೂ.
• 50%-75% ರಷ್ಟು ಹಾನಿ- 50 ಸಾವಿರ ರೂ.
• ಸಂಪೂರ್ಣ ಮನೆ ಹಾನಿ -1,20,000 ರೂ.