KAT order: ಜಿಪಿಟಿ ಹುದ್ದೆಗಳಿಗೆ ಪಿಎಸ್ಟಿ ವರ್ಗ ಇಲ್ಲ ಕೆಎಟಿ ಆದೇಶ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
KAT order:2019-20ನೇ ಸಾಲಿನ ಪ್ರಾಥಮಿಕ ಕೆಎಟಿ(KAT order) ಹುದ್ದೆಗಳಿಗೆ ವರ್ಗಾಯಿಸುವಂತಿಲ್ಲ ಆದೇಶ ಎಂದು ರಾಜ್ಯ ಆಡಳಿತಾತ್ಮಕ ನ್ಯಾಯ ಶಾಲಾ ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್ನಲ್ಲಿ 1ರಿಂದ 5ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕ ರನ್ನು (ಪಿಎಸ್ಟಿ) 6ರಿಂದ 8ನೇ ತರಗತಿ ಬೋಧಿಸುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ಮಂಡಳಿ (KAT) ಆದೇಶಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿಪಿಟಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದ ಕ್ರಮ ಪ್ರಶ್ನಿಸಿ ಕೆ.ಎನ್. ಶಂಕರ, ವಿ. ದಿನೇಶ್ ಸೇರಿ 34 ಮಂದಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ಬಿ. ಬೂದಿಹಾಳ್ ನೇತೃತ್ವದ ಕೆಎಟಿ ಪೀಠ ಈ ಆದೇಶ ಮಾಡಿದ್ದು, ವರ್ಗಾವಣೆಯ ಕೌನ್ಸೆಲಿಂಗ್ ಕುರಿತು ಸರ್ಕಾರಕ್ಕೆ ಕೆಲ ನಿರ್ದೇಶನಗಳನ್ನು ನೀಡಿದೆ.
ಕೆಎಟಿ(KAT) ನಿರ್ದೇಶನಗಳೇನು?
• ಪಿಎಸ್ಟಿ ಹಾಗೂ ಜಿಪಿಟಿ ಪ್ರತ್ಯೇಕ ಕೇಡರ್ ಹಾಗೂ ವಿಭಿನ್ನ ವೇತನ ಶ್ರೇಣಿ ಹೊಂದಿದ್ದಾರೆ. ಆದ್ದರಿಂದ, ಪಿಎಸ್ಟಿಗಳನ್ನು (1-5ನೇ ತರಗತಿ) ಜಿಪಿಟಿ (6-8ನೇ ತರಗತಿ) ಹುದ್ದೆಗೆ ವರ್ಗಾಯಿಸುವುದು ಸಮರ್ಥನೀಯವಲ್ಲ. ಪಿಎಸ್ಟಿ ಶ್ರೇಣಿಯಿಂದ ಜಿಪಿಟಿ ಶ್ರೇಣಿಗೆ ವರ್ಗಾವಣೆ ಮಾಡಿದರೆ ಅದು ಬಡ್ತಿ ನೀಡಿದಂತಾಗುತ್ತದೆ. ಅದೇ ರೀತಿ ಜಿಪಿಟಿ ಶ್ರೇಣಿಯ ಹುದ್ದೆಗಳಿಂದ ಪಿಎಸ್ಟಿ ಶ್ರೇಣಿಗೆ ವರ್ಗಾಯಿಸಿದರೆ ಅದರು ಹಿಂಬಡ್ತಿ ಎನಿಸಿಕೊಳ್ಳುತ್ತದೆ. ಆದ್ದರಿಂದ, ಅದನ್ನು ಒಪ್ಪಲು ಸಾಧ್ಯವಿಲ್ಲ.
• ಒಂದೇ ಶ್ರೇಣಿಯಲ್ಲಿ ವರ್ಗಾವಣೆ ಹೊಂದಿರುವ ಶಿಕ್ಷಕರು ಅದೇ ಹುದ್ದೆಯಲ್ಲಿ ಮುಂದುವರಿಯ ಬಹುದು, ಅವರಿಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡಬಾರದು.
• ಪಿಎಸ್ಟಿ ಹುದ್ದೆಯಿಂದ ಈಗಾಗಲೇ ಜಿಪಿಟಿ ಹುದ್ದೆಗೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮತ್ತೆ ವರ್ಗಾವಣೆ ಕೌನ್ಸಿಲಿಂಗ್ ಪಡೆದುಕೊಳ್ಳುವವರೆಗೂ ಅದೇ ಹುದ್ದೆಯಲ್ಲಿ ನಿಯೋಜನೆ ಮೇರೆಗೆ ಮುಂದುವರಿಯಬೇಕು.
• ಪಿಎಸ್ಟಿ ಹುದ್ದೆಯಿಂದ ಜಿಪಿಟಿ ಹುದ್ದೆಗೆ ವರ್ಗಾ ವಣೆ ಹೊಂದಿರುವ ಶಿಕ್ಷಕರಿಗೆ ಮಾತ್ರ ಹೊಸದಾಗಿ ಕೌನ್ಸೆಲಿಂಗ್ ನಡೆಸಬೇಕು. ಪಿಎಸ್ ಹುದ್ದೆಗಳ ವರ್ಗಾವಣೆಗೆ ಹಾಗೂ ಜಿಪಿಟಿ ಹುದ್ದೆಗಳ ವರ್ಗಾವಣೆಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಬೇಕು. ಈ ಆದೇಶವನ್ನು ಎರಡು ತಿಂಗಳ ಒಳಗೆ ಪಾಲನೆ ಮಾಡಬೇಕು.