UNESCO Internship: ಡಿಗ್ರಿ ಪಾಸಾದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಯುನೆಸ್ಕೋದಲ್ಲಿ ಇಂಟರ್ನ್‌ಶಿಪ್(UNESCO Internship) ಮಾಡಲು ಅವಕಾಶ ಡಿಸೆಂಬರ್ 31ರವರೆಗೆ ಅರ್ಜಿ ಸಲ್ಲಿಸಬಹುದು.

UNESCO Internship: ಡಿಗ್ರಿ ಪಾಸಾದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಯುನೆಸ್ಕೋದಲ್ಲಿ ಇಂಟರ್ನ್‌ಶಿಪ್(UNESCO Internship) ಮಾಡಲು ಅವಕಾಶ ಡಿಸೆಂಬರ್ 31ರವರೆಗೆ ಅರ್ಜಿ ಸಲ್ಲಿಸಬಹುದು.

UNESCO Internship

UNESCO Internship:ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ಉದ್ದೇಶಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಜಗತ್ತಿನಲ್ಲಿ ಬದಲಾವಣೆ ತರಲು ಬಯಸಿರುವ ಅಭ್ಯರ್ಥಿಗಳಿಗೆ ಯುನೆಸ್ಕೋ ಇದೀಗ ಉತ್ತಮ ಅವಕಾಶ ಒದಗಿಸಿದೆ. ಯುನೆಸ್ಕೋ ತನ್ನ 2025ನೇ ಸಾಲಿನ ಇಂಟರ್ನ್‌ ಶಿಪ್ ಪ್ರೊಗ್ರಾಂಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಇಂಟರ್ನ್‌ಶಿಪ್ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಪ್ರಾಯೋಗಿಕ ಕೆಲಸದ ಮೂಲಕ ತಮ್ಮ ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಮತ್ತು ಸಂವಹನದಲ್ಲಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಯುನೆಸ್ಕೋ ಹೇಳಿದೆ. ಜೊತೆಗೆ ಜಾಗತಿಕ ನೀತಿ ಮತ್ತು ಅಭಿವೃದ್ಧಿಯ ಬಗ್ಗೆ ಅವರ ಶೈಕ್ಷಣಿಕ ಮತ್ತು ವೃತ್ತಿಪರ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಯುನೆಸ್ಕೋದೊಂದಿಗೆ ಕೆಲಸ ಮಾಡಲು ಇದು ಒಂದು ಸುವರ್ಣ ಅವಕಾಶವಾಗಲಿದೆ.

ಯುನೆಸ್ಕೋ ಪ್ರಕಾರ, ಈ ಉಪಕ್ರಮವು ವಿವಿಧ ವಿಭಾಗಗಳಲ್ಲಿ ಪ್ರಾಯೋಗಿಕ ಕಾರ್ಯಯೋಜನೆಗಳನ್ನು ಒದಗಿಸುತ್ತದೆ ಮತ್ತು ಸಂಸ್ಥೆಯ ಧೈಯಕ್ಕೆ ಅನುಗುಣವಾಗಿ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ. ಈ ಇಂಟರ್ನ್‌ ಶಿಪ್ ಸಮಯದಲ್ಲಿ ವಿದ್ಯಾರ್ಥಿಗಳು ನಿಜವಾದ ಕೆಲಸದ ಅನುಭವವನ್ನು ಪಡೆಯುತ್ತಾರೆ. ಜೊತೆಗೆ, ಅವರ ಶೈಕ್ಷಣಿಕ ಜ್ಞಾನ ಮತ್ತು ತಾಂತ್ರಿಕ ಕ ಅನುಕೂಲವಾಗಲಿದೆ. ನ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ.

ಯುನೆಸ್ಕೋ(UNESCO Internship) ಎಂದರೇನು?

UNESCO (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವಸಂಸ್ಥೆಯ ಭಾಗವಾಗಿರುವ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ, ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಮತ್ತು ಸಂವಹನ ಕ್ಷೇತ್ರಗಳಲ್ಲಿ ಜಾಗತಿಕ ಸಹಕಾರವನ್ನು ಉತ್ತೇಜಿಸುವುದು ಇದರ ಧೈಯವಾಗಿದೆ. ಯುನೆಸ್ಕೋ ಶಿಕ್ಷಣ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುತ್ತದೆ.

ಇದು ವಿಶ್ವ ಪರಂಪರೆಯ ತಾಣಗಳನ್ನು  ಪಟ್ಟಿ ಮಾಡುತ್ತದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶಿಕ್ಷಣ ಮಟ್ಟವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಇದಲ್ಲದೆ, ಯುನೆಸ್ಕೊ ಸಂವಹನ ಮತ್ತು ಮಾಹಿತಿಯ ಮೂಲಕ ಪ್ರಪಂಚದಾದ್ಯಂತ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಖಚಿತಪಡಿಸಿಕೋಳ್ಳಲು ಶ್ರಮಿಸುತ್ತದೆ.

UNESCO Internship ಗೆ ಅರ್ಜಿ ಸಲ್ಲಿಸಲು ಯಾವ ಕೌಶಲ್ಯಗಳು ಅವಶ್ಯಕ?

ಈ ಉಪಕ್ರಮದಿಂದ ಇಂಟರ್ನ್ಗಳಿಗೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು, ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ತಮ್ಮ ಜ್ಞಾನವನ್ನು ವಿಸ್ತರಿಸಲು ಅವಕಾಶವಿದೆ. ಈ ಇಂಟರ್ನ್‌ಶಿಷ್ ಕಾರ್ಯಕ್ರಮವು ಅವರ ವೃತ್ತಿಜೀವನಕ್ಕೆ ಹೊಸ ದಿಕ್ಕನ್ನು ನೀಡಲು ಮತ್ತು ತಜ್ಞರಿಂದ ಕಲಿಯಲು ಉತ್ತಮ ಅವಕಾಶವಾಗಿದೆ.
UNESCO ಇಂಟರ್ನ್ ಶಿಪ್ ಕೋರ್ಸ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಗ್ಲಿಷ್ ಅಥವಾ ಫ್ರೆಂಚ್ ಭಾಷೆಯಲ್ಲಿ ಓದುವುದು ಮತ್ತು ಬರೆಯುವುದರಲ್ಲಿ ನಿರರ್ಗಳತೆಯನ್ನು ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಬೇಕು. ಯುನೆಸ್ಕೋದ ಪ್ರಧಾನ ಕಚೇರಿಯಲ್ಲಿ ಕೆಲವು ಸಹಾಯಕ ಹುದ್ದೆಗಳು ಅಥವಾ ಕಾರ್ಯದರ್ಶಿ ಹುದ್ದೆಗಳಿಗೆ ಎರಡೂ ಭಾಷೆಗಳಲ್ಲಿ ಪ್ರಾವೀಣ್ಯತೆ ಅಗತ್ಯವಾಗಿರುತ್ತದೆ. ಅರ್ಜಿಗಳನ್ನು ಇಂಗ್ಲಿಷ್ ಅಥವಾ ಫ್ರೆಂಚ್ ಭಾಷೆಯಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಯುನೆಸ್ಕೋ ಇಂಟರ್ನ್‌ತಿಪ್ ಪ್ರೋಗ್ರಾಂ 2025ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

UNESCO Internship ಗೆ ಅರ್ಹತೆ ಮತ್ತು ಅವಶ್ಯಕತೆಗಳು.

ಯುನೆಸ್ಕೋ ಇಂಟರ್ನ್‌ ಶಿಪ್ ಉಪಕ್ರಮಕ್ಕೆ ಪದವಿ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ವಿದ್ಯಾರ್ಥಿಗಳು ಸ್ನಾತಕೋತ್ತರ ಅಥವಾ ಪಿಎಚ್‌ಡಿ ಕೋರ್ಸ್‌ಗೆ ನೋಂದಾಯಿಸಿಕೊಂಡಿರಬೇಕು ಅಥವಾ ಅರ್ಜಿ ಸಲ್ಲಿಸಿದ 12 ಅಥವಾ ಪಿಎಚ್‌ ಡಿ ಪದವಿಯನ್ನು ಪಡೆದಿರಬೇಕು ಎಂದು ಯುನೆಸ್ಕೋ ತಿಂಗಳೊಳಗೆ ಸ್ನಾತಕೋತ್ತರ ಷರತ್ತು ವಿಧಿಸುತ್ತದೆ. ಸ್ನಾತಕೋತ್ತರ ಅಥವಾ ಪಿಎಚ್‌ಡಿ ಕೋರ್ಸ್‌ಗೆ ನೋಂದಾಯಿಸದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಷಪಡಿಸಿದೆ. ಅಭ್ಯರ್ಥಿಗಳು ಸಾಧ್ಯವಿಲ್ಲ ಎಂದು ಯುನೆಸ್ಕೋ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ವಯಸ್ಸಿನವರಾಗಿರಬೇಕು.

ಇಂಟರ್ನ್‌ ಶಿಪ್‌ ವಿವರಗಳು ಮತ್ತು ಆಯ್ಕೆ

ಯುನೆಸ್ಕೋ ಇಂಟರ್ನ್‌ಶಿಪ್ ಕೋರ್ಸ್‌ಗೆ ಯಶಸ್ತಿ ಅಭ್ಯರ್ಥಿಗಳು ಒಂದರಿಂದ ಮೂರು ತಿಂಗಳವರೆಗೆ ಯುನೆಸ್ಕೋ ಜೊತೆ ಕೆಲಸ ಮಾಡುವ ಅವಕಾಶವನ್ನು ಗಳಿಸಬಹುದು. ಇಂಟರ್ನ್‌ ಶಿಪ್‌ಗೆ ಅಗತ್ಯವಾದ ವೀಸಾ ಮತ್ತು ಪ್ರಯಾಣ ವೆಚ್ಚವನ್ನು ಅರ್ಜಿದಾರರೇ ಭರಿಸಬೇಕೆಂದು ಯುನೆಸ್ಕೋ ಸ್ಪಷ್ಟಪಡಿಸಿದೆ.

ಉದ್ಯೋಗದ ಸಾಧ್ಯತೆಗಳು ಯಾವುವು?

ಇಂಟರ್ನ್‌ ಶಿಪ್ ಉಪಕ್ರಮಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಸೈಫಂಡ್ ನೀಡಲಾಗುವುದಿಲ್ಲ ಎಂದು ಯುನೆಸ್ಕೋ ಸಷ್ಟಪಡಿಸಿದೆ. ಉದ್ಯೋಗ ನಿಯೋಜನೆಗೆ ಸಂಬಂಧಿಸಿದಂತೆ. ಇದು ಖಾತ ಖಾತರಿಯಿಲ್ಲ ಎಂದು ಯುನೆಸ್ಕೋ ಸ್ಪಷ್ಟಪಡಿಸಿದೆ. ಆದಾಗ್ಯೂ, ಅರ್ಜಿದಾರರ ಅರ್ಜಿಗಳನ್ನು ಆರು ತಿಂಗಳ ಕಾಲ ತನ್ನ ಪೋರ್ಟಲ್‌ನಲ್ಲಿ ಹೋಸ್ಟ್ ಮಾಡುವುದಾಗಿ ಯುನೆಸ್ಕೋ ಸ್ಪಷ್ಟಪಡಿಸಿದೆ. ಇದನ್ನು ವಿಶ್ವಾದ್ಯಂತ ನೇಮಕಾತಿ ವ್ಯವಸ್ಥಾಪಕರು ಪರಿಶೀಲಿಸುತ್ತಾರೆ. ಇದರರ್ಥ ಯುನೆಸ್ಕೋದಲ್ಲಿ ಉದ್ಯೋಗ ನಿಯೋಜನೆಯ ಸಾಧ್ಯತೆ ಇರುತ್ತದೆ.

UNESCO Internship ಗೆ ಅರ್ಜಿಯನ್ನು ಸ್ವೀಕರಿಸಲಾಗಿದೆಯೇ ಅಥವಾ ಇಲ್ಲವೇ? ತಿಳಿಯುವುದು ಹೇಗೆ?

ಅರ್ಜಿಗಳನ್ನು ಸ್ವೀಕರಿಸಿದ ನಂತರ, ಯುನೆಸ್ಕೋ ವ್ಯವಸ್ಥಾಪಕರು ಇಂಟರ್ನ್‌ ಶಿಪ್ ಉಪಕ್ರಮಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ವೈಯಕ್ತಿಕವಾಗಿ ಸಂಪರ್ಕಿಸುತ್ತಾರೆ ಎಂದು ಯುನೆಸ್ಕೋ ಹೇಳಿದೆ. ಅರ್ಜಿಯನ್ನು ಸಲ್ಲಿಸಿದ ಆರು ತಿಂಗಳೊಳಗೆ ಯುನೆಸ್ಕೋ ವ್ಯವಸ್ಥಾಪಕರು ಅಭ್ಯರ್ಥಿಯನ್ನು ಸಂಪರ್ಕಿಸದಿದ್ದರೆ, ಅರ್ಜಿಯನ್ನು ಸ್ವೀಕರಿಸಲಾಗಿಲ್ಲ ಎಂದರ್ಥ.

ಯಾವ ಇಲಾಖೆಗಳಲ್ಲಿ ನಿಯೋಜನೆ?

ಯುನೆಸ್ಕೋ ಇಂಟರ್ನ್‌ಶಿಪ್ ನಿಯೋಜನೆಗಳನ್ನು ಮಹಾನಿರ್ದೇಶಕರ ಕಚೇರಿ, ಶಿಕ್ಷಣ, ಸಂಸ್ಕೃತಿ, ನೈಸರ್ಗಿಕ ವಿಜ್ಞಾನ, ಸಂವಹನ ಮತ್ತು ಮಾಹಿತಿ, ಮಾನವ ಸಂಪನ್ಮೂಲ ನಿರ್ವಹಣಾ ಬ್ಯೂರೋ, ಡಿಜಿಟಲ್ ವ್ಯವಹಾರ ಪರಿಹಾರಗಳು ಮತ್ತು ಅಂತರ ಸರ್ಕಾರಿ ಸಾಗರಶಾಸ್ತ್ರ ಆಯೋಗ ಸೇರಿದಂತೆ ಇನ್ನೂ ಹಲವು ವಲಯಗಳಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಯುನೆಸ್ಕೋ ವೆಬ್‌ಸೈಟ್ https://careers.unesco.org/content/Internship-Programme/ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಯುನೆಸ್ಕೋ ಇಂಟರ್ನ್‌ ಶಿಪ್ ಉಪಕ್ರಮಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬ‌ರ್ 31 ಕೊನೆಯ ದಿನವಾಗಿರುತ್ತದೆ.

WhatsApp Group Join Now
Telegram Group Join Now