ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ದುಡಿಯುವ ಲಕ್ಷಾಂತರ ಹೊರಗುತ್ತಿಗೆ ನೌಕರರೇ, ಇದು ನಿಮಗೆ ಬಹುದೊಡ್ಡ ಶುಭ ಸುದ್ದಿ!ವೇತನ ವಿಳಂಬ, ಪಿಎಫ್-ಇಎಸ್‌ಐ ಕೊರತೆ ಮತ್ತು ಖಾಸಗಿ ಏಜೆನ್ಸಿಗಳ ಶೋಷಣೆಯಿಂದ ಬೇಸತ್ತಿದ್ದ ನಿಮಗೆ ಇದೀಗ ರಾಜ್ಯ ಸರ್ಕಾರವು ಮಹತ್ವದ ಪರಿಹಾರ ಒದಗಿಸಲು ಮುಂದಾಗಿದೆ. ರಾಜ್ಯ ಸರ್ಕಾರವು ಇಗಿರುವ ‘ಹೊರಗುತ್ತಿಗೆ’ (Outsourcing) ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಿ, ‘ಒಳಗುತ್ತಿಗೆ’ (In-sourcing) ವ್ಯವಸ್ಥೆಯನ್ನು ಜಾರಿಗೆ ತರಲು ಗಂಭೀರ ಸಿದ್ಧತೆ ನಡೆಸಿದೆ.
ಈ ಅಂತ್ಯತ ಪ್ರಮುಖ ಬದಲಾವಣೆಯಿಂದ ರಾಜ್ಯದ ಸುಮಾರು 2.50 ಲಕ್ಷಕ್ಕೂ ಹೆಚ್ಚು ನೌಕರರಿಗೆ ನೇರವಾಗಿ ಲಾಭವಾಗಲಿದೆ.
ಹೊರಗುತ್ತಿಗೆೇಕೆ ರದ್ದು? ಶೋಷಣೆಗೆ ಬ್ರೇಕ್!
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಬಹುತೇಕ ಹೊರಗುತ್ತಿಗೆ ನೌಕರರು ಅನುಭವಿಸುತ್ತಿರುವ ನೋವು ಒಂದೆರಡಲ್ಲ.
• ವೇತನ ವಿಳಂಬ:- ಸಮಯಕ್ಕೆ ಸರಿಯಾಗಿ ವೇತನ ಸಿಗದಿರುವುದು.
• ಸೌಲಭ್ಯಗಳ ಕೊರತೆ:- ಪಿಎಫ್ (PF) ಮತ್ತು ಇಎಸ್‌ಐ (ESI) ಸೌಲಭ್ಯಗಳು ಸರಿಯಾಗಿ ಸಿಗದಿರುವುದು.
• ಖಾಸಗಿ ಏಜೆನ್ಸಿಗಳ ಶೋಷಣೆ:- ಅನಿಯಮಿತ ಕೆಲಸದ ಸಮಯ ಮತ್ತು ಸೇವಾ ಭದ್ರತೆಯ ಅಭಾವ.
ಈ ದೌರ್ಜನ್ಯಗಳನ್ನು ತಡೆಯಲು ಹಾಗೂ ನೌಕರರಿಗೆ ನ್ಯಾಯ ಒದಗಿಸಲು ಸುಪ್ರೀಂಕೋರ್ಟ್‌ನ ಸ್ಪಷ್ಟ ನಿರ್ದೇಶನಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಈ ಐತಿಹಾಸಿಕ ಹೆಜ್ಜೆ ಇಟ್ಟಿದೆ.
ಏನಿದು ‘ಒಳಗುತ್ತಿಗೆ’ (In-sourcing)? ನಿಮ್ಮ ಬಾಳಿಗೆ ಹೊಸ ಬೆಳಕು!
ಹೊಸ ‘ಒಳಗುತ್ತಿಗೆ’ ವ್ಯವಸ್ಥೆಯ ಮೂಲ ಉದ್ದೇಶವೇನು ಎಂಬುದನ್ನು ಸರಳವಾಗಿ ಅರ್ಥಮಾಡಿಕೊಳ್ಳಿ:
ಹೊರಗುತ್ತಿಗೆ (Outsourcing) ಮತ್ತು ಒಳಗುತ್ತಿಗೆ (In-sourcing) ವೈಶಿಷ್ಟ್ಯಗಳು.
• ನೇಮಕಾತಿ – ಖಾಸಗಿ ಏಜೆನ್ಸಿಗಳ ಮೂಲಕ. – ನೇರವಾಗಿ ಸರ್ಕಾರಿ ಸಂಸ್ಥೆಗಳ ಮೂಲಕ.
• ವೇತನ/ಸೌಲಭ್ಯದ ಹೊಣೆ – ಖಾಸಗಿ ಏಜೆನ್ಸಿ. – ನೇರವಾಗಿ ಆಯಾ ಸರ್ಕಾರಿ ಇಲಾಖೆಗಳು.
• ಸ್ಥಾನಮಾನ – ಖಾಸಗಿ ಏಜೆನ್ಸಿಯ ನೌಕರರು. – ಸರ್ಕಾರಿ ನಿಯಂತ್ರಣದ ಗುತ್ತಿಗೆ ನೌಕರರು.
• ಲಾಭ – ಏಜೆನ್ಸಿಗೆ ಸೇವಾ ಶುಲ್ಕ ಮತ್ತು ಜಿಎಸ್‌ಟಿ. – ನೌಕರರಿಗೆ ಉತ್ತಮ ವೇತನ ಮತ್ತು ಭದ್ರತೆ.
ನೆನಪಿಸಿಕೊಳ್ಳಿ:- ನೀವು ‘ಸರ್ಕಾರಿ ನೌಕರ’ರೆಂದು ಪರಿಗಣಿಸಲ್ಪಡದೇ ಇರಬಹುದು, ಆದರೆ ಖಾಸಗಿ ಏಜೆನ್ಸಿಗಳ ಶೋಷಣೆಯಿಂದ ಪಾರಾಗಿ ನೇರ ಸರ್ಕಾರಿ ನಿಯಂತ್ರಣಕ್ಕೆ ಬರುತ್ತೀರಿ. ನಿಮ್ಮ ವೇತನ, ಪಿಎಫ್ ಸೇರಿದಂತೆ ಎಲ್ಲ ಸೌಲಭ್ಯಗಳಿಗೆ ಇಲಾಖೆಯೇ ನೇರ ಹೊಣೆ!
ಪ್ರಾಣಾಪಾಯದಲ್ಲಿರುವ 40,000+ ಸಿಬ್ಬಂದಿಗೆ ಮೊದಲ ಆದ್ಯತೆ!
ಈ ಹೊಸ ವ್ಯವಸ್ಥೆಯು ವಿಶೇಷವಾಗಿ ಕಷ್ಟಕರ ಮತ್ತು ಪ್ರಾಣಾಪಾಯದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹೆಚ್ಚಿನ ಭದ್ರತೆ ನೀಡಲು ಒತ್ತು ನೀಡಿದೆ. ಇವರಲ್ಲಿ:
• ಪೌರಕಾರ್ಮಿಕರು (ಸ್ವಚ್ಛತಾ ಸಿಬ್ಬಂದಿ)
• ಸರ್ಕಾರಿ ಬಸ್‌ಗಳ ಚಾಲಕರು
• ಇಂಧನ ಇಲಾಖೆಯ (ವಿದ್ಯುತ್ ದುರಸ್ತಿ) ಸಿಬ್ಬಂದಿ
• ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗ ಚಿಕಿತ್ಸಾ ಸಿಬ್ಬಂದಿ
• ಗಣಿಗಾರಿಕೆ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು
ಇದೇ ರೀತಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ 1.30 ಲಕ್ಷ ನೌಕರರು ಮತ್ತು ನಿಗಮ-ಮಂಡಳಿಗಳಲ್ಲಿರುವ ಉಳಿದ ಸಿಬ್ಬಂದಿಗೆ ನೇರ ಅನುಕೂಲ ಸಿಗಲಿದೆ.
ಸರ್ಕಾರದ ಮೇಲೆ ‘ಹೆಚ್ಚುವರಿ ಹೊರೆ’ ಇಲ್ಲ, ವೆಚ್ಚ ಉಳಿತಾಯದ ಮಾಸ್ಟರ್ ಪ್ಲಾನ್!
ಇಷ್ಟೊಂದು ಬದಲಾವಣೆ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲವೇ?’ ಎಂಬ ಪ್ರಶ್ನೆಗೆ ಸರ್ಕಾರ ಉತ್ತರ ಕಂಡುಕೊಂಡಿದೆ.
ಪ್ರಸ್ತುತ, ಸರ್ಕಾರವು ನೌಕರರನ್ನು ನೇಮಿಸಲು ಖಾಸಗಿ ಏಜೆನ್ಸಿಗಳಿಗೆ ಗರಿಷ್ಠ ಶೇ.30 ರಷ್ಟು ಹೆಚ್ಚುವರಿ ಸೇವಾ ಶುಲ್ಕ ಮತ್ತು ಜಿಎಸ್‌ಟಿ ಪಾವತಿಸುತ್ತಿದೆ. ಒಳಗುತ್ತಿಗೆ ಜಾರಿಯಾದರೆ ಈ ಹೆಚ್ಚುವರಿ ಶೇ.30 ರಷ್ಟು ಮೊತ್ತ ಸರ್ಕಾರಕ್ಕೆ ಉಳಿಯುತ್ತದೆ.
ಸರ್ಕಾರದ ಮಾಸ್ಟರ್ ಪ್ಲಾನ್: ಈ ಉಳಿದ ಹಣವನ್ನೇ ನೇರವಾಗಿ ಒಳಗುತ್ತಿಗೆ ನೌಕರರಿಗೆ ವೇತನ ಹೆಚ್ಚಳ ಮತ್ತು ಸೌಲಭ್ಯಗಳ ರೂಪದಲ್ಲಿ ನೀಡಲಾಗುತ್ತದೆ!
ಇದರಿಂದ, ಸರ್ಕಾರದ ಒಟ್ಟು ವೆಚ್ಚದಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ, ಆದರೆ 2.50 ಲಕ್ಷ ನೌಕರರ ಸೇವಾ ಭದ್ರತೆ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದಕ್ಕಾಗಿಯೇ ಕಾನೂನು ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಉಪಸಮಿತಿ ಕಾರ್ಯನಿರ್ವಹಿಸುತ್ತಿದೆ.
