SSLC Model Question Papers 2026-27: ವಿದ್ಯಾರ್ಥಿಗಳೇ ಮಿಸ್ ಮಾಡಬೇಡಿ! SSLC ಬೋರ್ಡ್ ಪರೀಕ್ಷೆ 2026-27ರ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳು ಇಲ್ಲಿವೆ

SSLC Model Question Papers 2026-27: ವಿದ್ಯಾರ್ಥಿಗಳೇ ಮಿಸ್ ಮಾಡಬೇಡಿ! SSLC ಬೋರ್ಡ್ ಪರೀಕ್ಷೆ 2026-27ರ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳು ಇಲ್ಲಿವೆ

SSLC Model Question Papers 2026-27: ಕರ್ನಾಟಕ KSEAB ಮಂಡಳಿ ಪ್ರಕಟಿಸಿರುವ SSLC Model Question Papers 2026-27ನೇ ಶೈಕ್ಷಣಿಕ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆಗಳ ಬುಕೆಟ್ ಹಾಗೂ ಉತ್ತರಗಳನ್ನು ಇಲ್ಲಿ ಪರಿಶೀಲಿಸಿ, PDF ಡೌನ್‌ಲೋಡ್ ಮಾಡಿ.

2026-27ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯಿಂದ (KSEAB) ಮಹತ್ವದ ಶೈಕ್ಷಣಿಕ ಮಾಹಿತಿ ಲಭ್ಯವಾಗಿದೆ. ಮುಂಬರುವ ಎಸ್‌ಎಸ್‌ಎಲ್‌ಸಿ(SSLC) ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಉತ್ತಮವಾದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಂಡಳಿಯೂ ಪ್ರಕಟಿಸಿರುವ ಮಾದರಿ ಪ್ರಶ್ನೆ ಪತ್ರಿಕೆಗಳು ಇದೀಗ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಪ್ರತಿ ವರ್ಷವೂ ಸಹ SSLC ಪರೀಕ್ಷೆಗೆ ಹಾಜರಾಗುವಂತಹ ವಿದ್ಯಾರ್ಥಿಗಳು ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸ್ವರೂಪ, ಪ್ರಶ್ನೆಗಳ ಮಾದರಿ, ಅಂಕಗಳ ಹಂಚಿಕೆ ಹಾಗೂ ಉತ್ತರ ಬರೆಯುವ ವಿಧಾನವನ್ನು ತಿಳಿದುಕೊಳ್ಳಲು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ 2026-27ನೇ ಸಾಲಿನ SSLC Model Question Papers ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಅಧ್ಯಯನ ಸಾಮಗ್ರಿಯಾಗಿದೆ.

ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳನ್ನು ಓದುವುದಷ್ಟೇ ಅಲ್ಲದೆ, ಮಂಡಳಿಯೂ ಪ್ರಕಟಿಸಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಿಯಮಿತವಾಗಿ ಬಿಡಿಸುವುದರಿಂದ ಪರೀಕ್ಷೆಯ ಬಗ್ಗೆ ಉತ್ತಮ ಆತ್ಮವಿಶ್ವಾಸ ಬೆಳೆಸಿಕೊಳ್ಳಬಹುದು.

ಈ ಲೇಖನದಲ್ಲಿ ನಾವು 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ(SSLC) ಮಾದರಿ ಪ್ರಶ್ನೆ ಪತ್ರಿಕೆಗಳು ಎಂದರೇನು? ಯಾವ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬಹುದು? ಅವುಗಳನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು? ಪರೀಕ್ಷಾ ಸಿದ್ಧತೆಗೆ ಹೇಗೆ ಬಳಸಿಕೊಳ್ಳಬೇಕು? ಎಂಬ ಸಂಪೂರ್ಣವಾಗಿ ಮಾಹಿತಿಯನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.

Table of Contents

SSLC Model Question Papers 2026-27 ಎಂದರೇನು?

SSLC Model Question Papers ಎಂದರೆ ಎಸ್‌ಎಸ್‌ಎಲ್‌ಸಿ(SSLC) ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಮಾದರಿಯನ್ನು ಆಧರಿಸಿ ಸಿದ್ಧಪಡಿಸಿರುವ ಅಭ್ಯಾಸ ಪ್ರಶ್ನೆ ಪತ್ರಿಕೆಗಳು.

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯೂ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆ ಸುಲಭವಾಗುವಂತೆ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸುತ್ತದೆ.

ಈ ಪ್ರಶ್ನೆ ಪತ್ರಿಕೆಗಳ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಎದುರಿಸಬೇಕಾಗಬಹುದು ಎಂಬುದರ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಪಡೆಯಬಹುದು.

ಮಾದರಿ ಪ್ರಶ್ನೆ ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಈ ಕೆಳಗಿನ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

  1. ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ರಚನೆ.
  2. ವಿವಿಧ ಮಾದರಿಯ ಪ್ರಶ್ನೆಗಳ ಸ್ವರೂಪ.
  3. ಪ್ರಶ್ನೆಗಳಿಗೆ ನಿಗದಿಪಡಿಸಿರುವ ಅಂಕಗಳು.
  4. ವಿಷಯವಾರು ಪಾಠಗಳ ಮಹತ್ವ.
  5. ಉತ್ತರ ಬರೆಯುವ ವಿಧಾನ.
  6. ಸಮಯ ನಿರ್ವಹಣೆ.
  7. ಪರೀಕ್ಷೆಯ ಸಿದ್ಧತೆಯಲ್ಲಿರುವ ಕೊರತೆಗಳನ್ನು ಗುರುತಿಸುವುದು.

ಹೀಗಾಗಿ 10ನೇ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ವಿಷಯಗಳಿಗೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ಅಭ್ಯಾಸ ಮಾಡುವುದು ಅತಿ ಉತ್ತಮ.

SSLC 2026-27 ಮಾದರಿ ಪ್ರಶ್ನೆ ಪತ್ರಿಕೆಗಳ ಪ್ರಮುಖ ಮಾಹಿತಿ

  ವಿವರಗಳು – ಮಾಹಿತಿ

  • ಶೈಕ್ಷಣಿಕ ವರ್ಷ – 2026-27
  • ತರಗತಿ – 10ನೇ ತರಗತಿ
  • ಪರೀಕ್ಷೆ – SSLC Board Examination
  • ಮಂಡಳಿ – KSEAB
  • ರಾಜ್ಯ – ಕರ್ನಾಟಕ
  • ಪ್ರಶ್ನೆ ಪತ್ರಿಕೆ – Model Question Papers
  • ಮಾಧ್ಯಮ – ಲಭ್ಯವಿರುವ ಮಾಧ್ಯಮಗಳ ಪ್ರಕಾರ
  • ವಿಷಯಗಳು – ಭಾಷಾ ವಿಷಯಗಳು ಹಾಗೂ ಮುಖ್ಯ ವಿಷಯಗಳು
  • ಡೌನ್‌ಲೋಡ್ ಮಾದರಿ – PDF
  • ಅಧಿಕೃತ ವೆಬ್‌ಸೈಟ್ – kseab.karnataka.gov.in

SSLC Model Question Papers 2026-27: ಯಾವೆಲ್ಲ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಲಭ್ಯ?

SSLC ಪರೀಕ್ಷೆಯಲ್ಲಿ ವಿವಿಧ ಭಾಷಾ ವಿಷಯಗಳು ಮತ್ತು ಮುಖ್ಯ ಶೈಕ್ಷಣಿಕ ವಿಷಯಗಳಿದ್ದು, ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯಗಳಿಗೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬಹುದು.

ಕನ್ನಡ ವಿಷಯ

ಕನ್ನಡ ವಿಷಯದಲ್ಲಿ ಗದ್ಯ, ಪದ್ಯ, ವ್ಯಾಕರಣ, ಪತ್ರಲೇಖನ, ಪ್ರಬಂಧ, ಸಾರಾಂಶ ಹಾಗೂ ಭಾಷಾ ಬಳಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಭ್ಯಾಸ ಮಾಡುವುದು ಅಗತ್ಯ.

ವಿದ್ಯಾರ್ಥಿಗಳು ಪಠ್ಯ ಪುಸ್ತಕದಲ್ಲಿರುವಂತಹ ಪ್ರತಿಯೊಂದು ಪಾಠವನ್ನು ಓದುವುದರ ಜೊತೆ ಜೊತೆಗೆ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು.

ಇಂಗ್ಲಿಷ್ ವಿಷಯ

ಇಂಗ್ಲಿಷ್ ವಿಷಯದಲ್ಲಿ Reading Comprehension, Grammar, Vocabulary, Writing Skills ಹಾಗೂ ಪಠ್ಯಪುಸ್ತಕ ಆಧಾರಿತ ಪ್ರಶ್ನೆಗಳಿಗೆ ಹೆಚ್ಚಿನ ಗಮನ ನೀಡಬೇಕು.

ಮಾದರಿ ಪ್ರಶ್ನೆ ಪತ್ರಿಕೆಗಳ ಮೂಲಕ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಉತ್ತರ ಬರೆಯುವ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಹಿಂದಿ ವಿಷಯ

ಹಿಂದಿ ವಿಷಯದಲ್ಲಿ ವ್ಯಾಕರಣ, ಗದ್ಯ, ಪದ್ಯ, ಪತ್ರಲೇಖನ ಮತ್ತು ಇತರೇ ಬರವಣಿಗೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಭ್ಯಾಸ ಮಾಡಬೇಕು.

ಗಣಿತ ವಿಷಯ

ಗಣಿತವು SSLC(ಎಸ್‌ಎಸ್‌ಎಲ್‌ಸಿ) ಪರೀಕ್ಷೆಯಲ್ಲಿ ಹೆಚ್ಚಿನ ಅಭ್ಯಾಸದ ಅಗತ್ಯವಿರುವ ಪ್ರಮುಖ ವಿಷಯವಾಗಿದೆ.

ಗಣಿತ ವಿಷಯದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ವಿದ್ಯಾರ್ಥಿಗಳಿಗೆ ಸೂತ್ರಗಳ ಬಳಕೆ, ಲೆಕ್ಕಾಚಾರದ ವಿಧಾನ ಹಾಗೂ ಹಂತ ಹಂತವಾಗಿ ಉತ್ತರ ಬರೆಯುವ ಅಭ್ಯಾಸವಾಗುತ್ತದೆ.

ವಿದ್ಯಾರ್ಥಿಗಳು ಈ ಕೆಳಗಿನ ವಿಷಯಗಳಿಗೆ ಹೆಚ್ಚಿನ ಗಮನ ನೀಡಬೇಕು.

  • ವಾಸ್ತವ ಸಂಖ್ಯೆಗಳು.
  • ಬಹುಪದೋಕ್ತಿಗಳು.
  • ಎರಡು ಚರಾಕ್ಷರಗಳ ರೇಖಾತ್ಮಕ ಸಮೀಕರಣಗಳು.
  • ವರ್ಗ ಸಮೀಕರಣಗಳು.
  • ಅಂಕಗಣಿತ ಶ್ರೇಢಿಗಳು.
  • ತ್ರಿಭುಜಗಳು.
  • ನಿರ್ದೇಶಾಂಕ ರೇಖಾಗಣಿತ.
  • ತ್ರಿಕೋನಮಿತಿ.
  • ವೃತ್ತಗಳು.
  • ರಚನೆಗಳು.
  • ಮೇಲ್ಮೈ ವಿಸ್ತೀರ್ಣ ಮತ್ತು ಘನಫಲ.
  • ಸಂಖ್ಯಾಶಾಸ್ತ್ರ.
  • ಸಂಭವನೀಯತೆ.

ಪ್ರತಿಯೊಂದು ಅಧ್ಯಾಯದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು ವಿವಿಧ ಮಾದರಿಯ ಗಣಿತ ಸಮಸ್ಯೆಗಳನ್ನು ಬಿಡಿಸುವುದು ಉತ್ತಮ.

ವಿಜ್ಞಾನ ವಿಷಯ

ವಿಜ್ಞಾನ ವಿಷಯದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪಾಠಗಳಿದ್ದು, ವಿದ್ಯಾರ್ಥಿಗಳು ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು ಅಭ್ಯಾಸ ಮಾಡಬೇಕು.

ಪ್ರಮುಖವಾಗಿ ಈ ವಿಷಯಗಳ ಮೇಲೆ ಗಮನ ಹರಿಸಬಹುದು.

  • ರಾಸಾಯನಿಕ ಕ್ರಿಯೆಗಳು ಹಾಗೂ ಸಮೀಕರಣಗಳು.
  • ಆಮ್ಲಗಳು, ಪ್ರತ್ಯಾಮ್ಲಗಳು ಹಾಗೂ ಲವಣಗಳು.
  • ಲೋಹಗಳು ಹಾಗೂ ಅಲೋಹಗಳು.
  • ಇಂಗಾಲ ಹಾಗೂ ಅದರ ಸಂಯುಕ್ತಗಳು.
  • ಜೀವಕ್ರಿಯೆಗಳು.
  • ನಿಯಂತ್ರಣ ಮತ್ತು ಸಮನ್ವಯ.
  • ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?
  • ಅನುವಂಶೀಯತೆ ಮತ್ತು ಜೀವವಿಕಾಸ.
  • ಬೆಳಕು ಮತ್ತು ಪ್ರತಿಫಲನ.
  • ವಿದ್ಯುತ್.
  • ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು.
  • ನಮ್ಮ ಪರಿಸರ.

ವಿಜ್ಞಾನ ವಿಷಯದಲ್ಲಿ ಚಿತ್ರಗಳು, ಸೂತ್ರಗಳು, ವ್ಯಾಖ್ಯಾನಗಳು ಹಾಗೂ ವೈಜ್ಞಾನಿಕ ಕಾರಣಗಳನ್ನು ಬರೆಯುವ ಅಭ್ಯಾಸ ಮಾಡಬೇಕು.

ಸಮಾಜ ವಿಜ್ಞಾನ ವಿಷಯ

ಸಮಾಜ ವಿಜ್ಞಾನವು ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ.

ವಿದ್ಯಾರ್ಥಿಗಳು ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಬಹುದು.

  • ಪ್ರಮುಖ ಐತಿಹಾಸಿಕ ಘಟನೆಗಳು.
  • ಸ್ವಾತಂತ್ರ್ಯ ಹೋರಾಟ.
  • ಭಾರತದ ಸಂವಿಧಾನ.
  • ಪ್ರಜಾಪ್ರಭುತ್ವ.
  • ಭಾರತದ ಭೌಗೋಳಿಕ ಲಕ್ಷಣಗಳು.
  • ಕೃಷಿ ಮತ್ತು ಕೈಗಾರಿಕೆಗಳು.
  • ಆರ್ಥಿಕ ಅಭಿವೃದ್ಧಿ.
  • ಸಾಮಾಜಿಕ ಸಮಸ್ಯೆಗಳು.
  • ನಕ್ಷೆ ಕಾರ್ಯ.
  • ಪ್ರಮುಖ ದಿನಾಂಕಗಳು ಹಾಗೂ ವ್ಯಕ್ತಿಗಳು.

ಸಮಾಜ ವಿಜ್ಞಾನದಲ್ಲಿ ಉತ್ತರಗಳನ್ನು ಕ್ರಮಬದ್ಧವಾಗಿ ಬರೆಯುವುದು ಹಾಗೂ ಅಗತ್ಯವಿರುವಲ್ಲಿ ನಕ್ಷೆಗಳನ್ನು ಸರಿಯಾಗಿ ಗುರುತಿಸುವುದು ಮುಖ್ಯ.

SSLC Model Question Papers 2026-27: ಮಾದರಿ ಪ್ರಶ್ನೆ ಪತ್ರಿಕೆಗಳ ಬುಕೆಟ್ ವಿದ್ಯಾರ್ಥಿಗಳಿಗೆ ಏಕೆ ಮುಖ್ಯ?

SSLC (10ನೇ ತರಗತಿ) ಪರೀಕ್ಷೆಯೂ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿದೆ. 10ನೇ ತರಗತಿಯ ಫಲಿತಾಂಶವು ಮುಂದಿನ ಶೈಕ್ಷಣಿಕ ಶಿಕ್ಷಣದ ಆಯ್ಕೆಗೆ ಸಹಾಯಕವಾಗುತ್ತದೆ.

ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಮುಂಚಿತವಾಗಿ ಸೂಕ್ತವಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ.

ಮಾದರಿ ಪ್ರಶ್ನೆ ಪತ್ರಿಕೆಗಳ ಬುಕೆಟ್ ವಿದ್ಯಾರ್ಥಿಗಳಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತದೆ.

1. ಪರೀಕ್ಷೆಯ ಸ್ವರೂಪ ತಿಳಿಯುತ್ತದೆ

ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಬೋರ್ಡ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಯಾವ ಯಾವ ರೀತಿಯಲ್ಲಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

2. ಸಮಯ ನಿರ್ವಹಣೆ ಸುಧಾರಿಸುತ್ತದೆ

ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಮಯ ನಿರ್ವಹಣೆ ಬಹಳ ಮುಖ್ಯ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಸಮಯದಲ್ಲಿ ಬಿಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಮಯವನ್ನು ಸಮರ್ಪಕವಾಗಿ ಬಳಸುವ ಅಭ್ಯಾಸವಾಗುತ್ತದೆ.

3. ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬಹುದು

ಮಾದರಿ ಉತ್ತರಗಳೊಂದಿಗೆ ತಮ್ಮ ಉತ್ತರಗಳನ್ನು ಹೋಲಿಕೆ ಮಾಡುವುದರಿಂದ ಎಲ್ಲಿ ತಪ್ಪುಗಳಾಗಿವೆ ಎಂಬುದನ್ನು ಗುರುತಿಸಬಹುದು.

4. ಆತ್ಮವಿಶ್ವಾಸ ಹೆಚ್ಚುತ್ತದೆ

ಪರೀಕ್ಷೆಗೆ ಮುಂಚಿತವಾಗಿ ಹಲವಾರು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆಗಳನ್ನು ಎದುರಿಸುವ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

5. ಬರವಣಿಗೆಯ ಕೌಶಲ್ಯ ಹೆಚ್ಚುತ್ತದೆ

ಉತ್ತರಗಳನ್ನು ಸ್ಪಷ್ಟವಾಗಿ, ಸರಳವಾಗಿ ಹಾಗೂ ಕ್ರಮಬದ್ಧವಾಗಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬಹುದು.

6. ಕಠಿಣ ವಿಷಯಗಳನ್ನು ಗುರುತಿಸಬಹುದು

ಯಾವ ಅಧ್ಯಾಯದಲ್ಲಿ ಹೆಚ್ಚು ತಪ್ಪುಗಳಾಗುತ್ತಿವೆ ಎಂಬುದನ್ನು ತಿಳಿದುಕೊಂಡು ಆ ಅಧ್ಯಾಯಕ್ಕೆ ಹೆಚ್ಚಿನ ಸಮಯ ನೀಡಬಹುದು.

SSLC Model Question Papers PDF ಡೌನ್‌ಲೋಡ್ ಮಾಡುವುದು ಹೇಗೆ?

2026-27ನೇ ಶೈಕ್ಷಣಿಕ ಸಾಲಿನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪಡೆಯಲು ವಿದ್ಯಾರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು.

  • ಹಂತ 1: ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹಂತ 2: ವೆಬ್‌ಸೈಟ್‌ನಲ್ಲಿ SSLC ವಿಭಾಗವನ್ನು ಹುಡುಕಿ.
  • ಹಂತ 3: ವಿದ್ಯಾರ್ಥಿಗಳಿಗೆ ಸಂಬಂಧಿಸಿದ Model Question Papers ಅಥವಾ Question Papers ವಿಭಾಗವನ್ನು ತೆರೆಯಿರಿ.
  • ಹಂತ 4: 2026-27ನೇ ಸಾಲಿಗೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳ ಆಯ್ಕೆಯನ್ನು ಹುಡುಕಿ.
  • ಹಂತ 5: ನಿಮಗೆ ಅಗತ್ಯವಿರುವ ವಿಷಯವನ್ನು ಆಯ್ಕೆಮಾಡಿ.
  • ಹಂತ 6: PDF ಫೈಲ್ ತೆರೆಯಿರಿ ಮತ್ತು Download ಆಯ್ಕೆಯನ್ನು ಕ್ಲಿಕ್ ಮಾಡಿ.
  • ಹಂತ 7: ಡೌನ್‌ಲೋಡ್ ಮಾಡಿಕೊಂಡ ಪ್ರಶ್ನೆ ಪತ್ರಿಕೆಗಳನ್ನು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಉಳಿಸಿಕೊಳ್ಳಿ.
  • ಹಂತ 8: ಸಾಧ್ಯವಾದರೆ ಪ್ರಶ್ನೆ ಪತ್ರಿಕೆಗಳನ್ನು ಪ್ರಿಂಟ್ ಮಾಡಿಕೊಂಡು ಪರೀಕ್ಷೆಯ ಮಾದರಿಯಲ್ಲಿ ಅಭ್ಯಾಸ ಮಾಡಿ.

ಅಧಿಕೃತ ವೆಬ್‌ಸೈಟ್: https://kseab.karnataka.gov.in/

ಗಮನಿಸಿ: ವೆಬ್‌ಸೈಟ್‌ನಲ್ಲಿರುವ ವಿಭಾಗಗಳ ಹೆಸರುಗಳು ಮತ್ತು PDF ಲಿಂಕ್‌ಗಳು ಕಾಲಕಾಲಕ್ಕೆ ಬದಲಾಗಬಹುದು. ಆದ್ದರಿಂದ ಅಧಿಕೃತ ಪ್ರಕಟಣೆಯನ್ನು ಪರಿಶೀಲಿಸಿ.

ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಸರಿಯಾದ ವಿಧಾನ

ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಮಾತ್ರ ಪ್ರಯೋಜನವಿಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದು ಅತಿ ಮುಖ್ಯ.

ವಿದ್ಯಾರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು.

ಮೊದಲ ಹಂತ: ಪಠ್ಯಪುಸ್ತಕದ ಅಧ್ಯಯನ

ಮೊದಲು ನೀವು ಪ್ರತಿಯೊಂದು ವಿಷಯದ ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಓದಿ. ಪಾಠದಲ್ಲಿರುವಂತಹ ಪ್ರಮುಖ ಅಂಶಗಳು, ವ್ಯಾಖ್ಯಾನಗಳು, ಸೂತ್ರಗಳು ಹಾಗೂ ಉದಾಹರಣೆಗಳನ್ನು ಅರ್ಥಮಾಡಿಕೊಳ್ಳಿ.

ಎರಡನೇ ಹಂತ: ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವುದು

ಒಂದು ವಿಷಯದ ಮಾದರಿ ಪ್ರಶ್ನೆ ಪತ್ರಿಕೆಯನ್ನು ಆಯ್ಕೆಮಾಡಿ. ಪರೀಕ್ಷೆಯ ವಾತಾವರಣದಲ್ಲಿ ಕುಳಿತು ನಿಗದಿತ ಸಮಯದಲ್ಲಿ ಉತ್ತರ ಬರೆಯಿರಿ.

ಮೂರನೇ ಹಂತ: ಉತ್ತರಗಳ ಪರಿಶೀಲನೆ

ಉತ್ತರಗಳನ್ನು ಬರೆದ ಅನಂತರ ಲಭ್ಯವಿರುವ ಮಾದರಿ ಉತ್ತರಗಳೊಂದಿಗೆ ಹೋಲಿಕೆ ಮಾಡಿ.

ನಾಲ್ಕನೇ ಹಂತ: ತಪ್ಪುಗಳ ವಿಶ್ಲೇಷಣೆ

ತಪ್ಪಾದ ಪ್ರಶ್ನೆಗಳನ್ನು ಪ್ರತ್ಯೇಕವಾಗಿ ಗುರುತಿಸಿ. ಆ ಪ್ರಶ್ನೆಗೆ ಸಂಬಂಧಿಸಿದ ಪಾಠವನ್ನು ಮತ್ತೆ ಓದಿ.

ಐದನೇ ಹಂತ: ಪುನರಾವರ್ತನೆ

ಒಮ್ಮೆ ಅಭ್ಯಾಸ ಮಾಡಿದ ಪ್ರಶ್ನೆಗಳನ್ನು ಮತ್ತೆ ಬಿಡಿಸಿ. ಇದರಿಂದ ವಿಷಯದ ಮೇಲಿನ ಹಿಡಿತ ಹೆಚ್ಚುತ್ತದೆ.

SSLC 2026-27 ಪರೀಕ್ಷೆಗೆ ವಿದ್ಯಾರ್ಥಿಗಳು ಅನುಸರಿಸಬೇಕಾದ ಅಧ್ಯಯನ ವೇಳಾಪಟ್ಟಿ

ಈ ಪರೀಕ್ಷೆಯಲ್ಲಿ ಉತ್ತಮವಾದ ಫಲಿತಾಂಶ ಪಡೆಯಲು ಪ್ರತಿದಿನದ ಅಧ್ಯಯನಕ್ಕೆ ಒಂದು ಸರಳ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬಹುದು.

  ಸಮಯ – ಅಧ್ಯಯನ ಚಟುವಟಿಕೆ

  • ಬೆಳಿಗ್ಗೆ 5:30–6:30 – ಗಣಿತ ಅಭ್ಯಾಸ
  • ಬೆಳಿಗ್ಗೆ 6:30–7:00 – ಹಿಂದಿನ ಪಾಠಗಳ ಪುನರಾವರ್ತನೆ
  • ಸಂಜೆ 5:00–6:00 – ವಿಜ್ಞಾನ
  • ಸಂಜೆ 6:00–7:00 – ಸಮಾಜ ವಿಜ್ಞಾನ
  • ರಾತ್ರಿ 7:30–8:15 – ಭಾಷಾ ವಿಷಯಗಳು
  • ರಾತ್ರಿ 8:15–8:45 – ಮಾದರಿ ಪ್ರಶ್ನೆಗಳ ಅಭ್ಯಾಸ
  • ರಾತ್ರಿ 8:45–9:00 – ದಿನದ ಅಧ್ಯಯನದ ಪುನರಾವರ್ತನೆ

ಇದು ಕೇವಲ ಮಾದರಿ ವೇಳಾಪಟ್ಟಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಸಮಯ, ಟ್ಯೂಷನ್ ಮತ್ತು ವೈಯಕ್ತಿಕ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು.

ವಿಷಯವಾರು ಪರೀಕ್ಷಾ ಸಿದ್ಧತೆಗೆ ವಿಶೇಷ ಸಲಹೆಗಳು

ಕನ್ನಡ

  • ಪ್ರತಿಯೊಂದು ಗದ್ಯ ಹಾಗೂ ಪದ್ಯವನ್ನು ಅರ್ಥಮಾಡಿಕೊಂಡು ಓದಿ.
  • ಕವಿಗಳ ಪರಿಚಯ ಮತ್ತು ಪಾಠದ ಮುಖ್ಯಾಂಶಗಳನ್ನು ತಿಳಿದುಕೊಳ್ಳಿ.
  • ವ್ಯಾಕರಣವನ್ನು ಪ್ರತಿದಿನ ಅಭ್ಯಾಸ ಮಾಡಿ.
  • ಪತ್ರಲೇಖನ ಹಾಗೂ ಪ್ರಬಂಧ ಬರೆಯುವ ಅಭ್ಯಾಸ ಮಾಡಿ.
  • ಅಕ್ಷರದೋಷಗಳಿಲ್ಲದೆ ಉತ್ತರ ಬರೆಯಲು ಪ್ರಯತ್ನಿಸಿ.

ಇಂಗ್ಲಿಷ್

  • ಪ್ರತಿದಿನ ಇಂಗ್ಲಿಷ್ ಓದುವ ಅಭ್ಯಾಸ ಬೆಳೆಸಿಕೊಳ್ಳಿ.
  • Grammar ವಿಭಾಗಕ್ಕೆ ಹೆಚ್ಚಿನ ಗಮನ ನೀಡಿ.
  • Letter Writing ಮತ್ತು Essay Writing ಅಭ್ಯಾಸ ಮಾಡಿ.
  • ಪಠ್ಯಪುಸ್ತಕದ ಪ್ರಶ್ನೋತ್ತರಗಳನ್ನು ಓದಿ.
  • ಸರಳ ಹಾಗೂ ಸರಿಯಾದ ವಾಕ್ಯಗಳನ್ನು ಬರೆಯಿರಿ.

ಗಣಿತ

  • ಪ್ರತಿದಿನ ಕನಿಷ್ಠ ಕೆಲವು ಸಮಸ್ಯೆಗಳನ್ನು ಬಿಡಿಸಿ.
  • ಪ್ರಮುಖ ಸೂತ್ರಗಳನ್ನು ಪ್ರತ್ಯೇಕವಾಗಿ ಬರೆದುಕೊಳ್ಳಿ.
  • ಲೆಕ್ಕಾಚಾರದಲ್ಲಿ ತಪ್ಪುಗಳನ್ನು ಕಡಿಮೆ ಮಾಡಿ.
  • ಉತ್ತರದ ಪ್ರತಿಯೊಂದು ಹಂತವನ್ನು ಸರಿಯಾಗಿ ಬರೆಯಿರಿ.
  • ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.

ವಿಜ್ಞಾನ

  • ಪ್ರಮುಖ ವ್ಯಾಖ್ಯಾನಗಳನ್ನು ಓದಿ.
  • ಅಗತ್ಯವಿರುವ ಚಿತ್ರಗಳನ್ನು ಬಿಡಿಸುವ ಅಭ್ಯಾಸ ಮಾಡಿ.
  • ರಾಸಾಯನಿಕ ಸಮೀಕರಣಗಳನ್ನು ಅಭ್ಯಾಸ ಮಾಡಿ.
  • ಭೌತಶಾಸ್ತ್ರದ ಸೂತ್ರಗಳನ್ನು ನೆನಪಿಟ್ಟುಕೊಳ್ಳಿ.
  • ವೈಜ್ಞಾನಿಕ ಕಾರಣಗಳನ್ನು ಅರ್ಥಮಾಡಿಕೊಂಡು ಬರೆಯಿರಿ.

ಸಮಾಜ ವಿಜ್ಞಾನ

  • ಇತಿಹಾಸದ ಘಟನೆಗಳನ್ನು ಕಾಲಾನುಕ್ರಮವಾಗಿ ನೆನಪಿಡಿ.
  • ಪ್ರಮುಖ ವ್ಯಕ್ತಿಗಳು ಮತ್ತು ದಿನಾಂಕಗಳನ್ನು ಗುರುತಿಸಿ.
  • ನಕ್ಷೆ ಅಭ್ಯಾಸವನ್ನು ನಿಯಮಿತವಾಗಿ ಮಾಡಿ.
  • ಸಂವಿಧಾನದ ಪ್ರಮುಖ ಅಂಶಗಳನ್ನು ಓದಿ.
  • ಉತ್ತರಗಳನ್ನು ಅಂಶಗಳ ರೂಪದಲ್ಲಿ ಬರೆಯಿರಿ.

ಶಿಕ್ಷಕರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೇಗೆ ಬಳಸಿಕೊಳ್ಳಬಹುದು?

SSLC ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಶಿಕ್ಷಕರು ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತರಗತಿಯಲ್ಲಿ ಬಳಸಿಕೊಂಡು ಉತ್ತಮವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಾಭ್ಯಾಸ ಮಾಡಿಸಬಹುದು.

  1. ವಿಷಯವಾರು ಮಾದರಿ ಪರೀಕ್ಷೆಗಳನ್ನು ನಡೆಸಬಹುದು.
  2. ಪ್ರತಿ ಅಧ್ಯಾಯದ ನಂತರ ಸಂಬಂಧಿತ ಪ್ರಶ್ನೆಗಳನ್ನು ನೀಡಬಹುದು.
  3. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬಹುದು.
  4. ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ನೀಡಬಹುದು.
  5. ಪ್ರಶ್ನೆಗಳಿಗೆ ಉತ್ತರ ಬರೆಯುವ ಸರಿಯಾದ ವಿಧಾನವನ್ನು ತಿಳಿಸಬಹುದು.
  6. ವಾರಕ್ಕೊಮ್ಮೆ ಪೂರ್ಣ ಮಾದರಿ ಪರೀಕ್ಷೆ ನಡೆಸಬಹುದು.
  7. ವಿದ್ಯಾರ್ಥಿಗಳ ಕಲಿಕಾ ಕೊರತೆಗಳನ್ನು ಗುರುತಿಸಿ ಪರಿಹಾರ ಬೋಧನೆ ನೀಡಬಹುದು.

ಶಿಕ್ಷಕರು ಈ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸರಿಯಾಗಿ ಬಳಸಿಕೊಂಡರೆ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯನ್ನು ಪರಿಣಾಮಕಾರಿಯಾಗಿ ಸುಧಾರಿಸಬಹುದು.

ಪೋಷಕರು ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಹುದು?

SSLC (ಎಸ್‌ಎಸ್‌ಎಲ್‌ಸಿ) ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರ ಪ್ರೋತ್ಸಾಹ ಹಾಗೂ ಸಹಕಾರ ಬಹಳ ಮುಖ್ಯ.

ಪೋಷಕರು ಮಕ್ಕಳಿಗೆ ಓದಲು ಸೂಕ್ತ ವಾತಾವರಣ ಕಲ್ಪಿಸಬೇಕು. ಪರೀಕ್ಷೆಯ ಬಗ್ಗೆ ಅನಗತ್ಯ ಒತ್ತಡ ನೀಡದೆ ಪ್ರೋತ್ಸಾಹಿಸಬೇಕು.

  • ಮಕ್ಕಳಿಗೆ ಪ್ರತಿದಿನ ಅಧ್ಯಯನ ಮಾಡಲು ಸಮಯ ನೀಡಬೇಕು.
  • ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಸಹಾಯ ಮಾಡಬೇಕು.
  • ಅಧ್ಯಯನದ ವೇಳಾಪಟ್ಟಿ ರೂಪಿಸಲು ಪ್ರೋತ್ಸಾಹಿಸಬೇಕು.
  • ಮಾದರಿ ಪರೀಕ್ಷೆಗಳನ್ನು ಬರೆಯಲು ಅನುಕೂಲ ಮಾಡಿಕೊಡಬೇಕು.
  • ಮಕ್ಕಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.
  • ಅಗತ್ಯವಿದ್ದಾಗ ಶಿಕ್ಷಕರೊಂದಿಗೆ ಚರ್ಚಿಸಬೇಕು.

ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ ಹೇರುವುದಕ್ಕಿಂತ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತವಾದ ಮಾರ್ಗದರ್ಶನ ನೀಡುವುದು ಉತ್ತಮ.

ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವಾಗ ವಿದ್ಯಾರ್ಥಿಗಳು ಮಾಡಬಾರದ ತಪ್ಪುಗಳು

ಕೆಲವು ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವಾಗ ಕೆಲವು ಸಾಮಾನ್ಯವಾಗಿ ತಪ್ಪುಗಳನ್ನು ಮಾಡುತ್ತಾರೆ.

1. ಉತ್ತರಗಳನ್ನು ನೋಡಿಕೊಂಡು ಬರೆಯುವುದು

ಮೊದಲು ಸ್ವತಂತ್ರವಾಗಿ ಉತ್ತರ ಬರೆಯಿರಿ. ನಂತರ ಮಾತ್ರ ಮಾದರಿ ಉತ್ತರಗಳೊಂದಿಗೆ ಹೋಲಿಕೆ ಮಾಡಿ.

2. ಸಮಯ ನಿಗದಿಪಡಿಸದೆ ಅಭ್ಯಾಸ ಮಾಡುವುದು

ಪರೀಕ್ಷೆಯ ಸಮಯದ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆ ಪತ್ರಿಕೆ ಬಿಡಿಸಿ.

3. ಕೇವಲ ಪ್ರಮುಖ ಪ್ರಶ್ನೆಗಳಿಗೆ ಮಾತ್ರ ಓದುವುದು

ಪಠ್ಯಕ್ರಮದ ಎಲ್ಲಾ ಅಧ್ಯಾಯಗಳನ್ನು ಅಧ್ಯಯನ ಮಾಡಬೇಕು. ಕೆಲವು ಪ್ರಶ್ನೆಗಳ ಮೇಲೆ ಮಾತ್ರ ಅವಲಂಬಿತರಾಗಬಾರದು.

4. ತಪ್ಪುಗಳನ್ನು ಸರಿಪಡಿಸದಿರುವುದು

ತಪ್ಪಾದ ಉತ್ತರಗಳನ್ನು ಗುರುತಿಸಿ ಮತ್ತೆ ಅಭ್ಯಾಸ ಮಾಡಬೇಕು.

5. ಪುನರಾವರ್ತನೆ ಮಾಡದಿರುವುದು

ಒಮ್ಮೆ ಓದಿದ ಪಾಠಗಳನ್ನು ಪರೀಕ್ಷೆಯವರೆಗೆ ನಿರಂತರವಾಗಿ ಪುನರಾವರ್ತನೆ ಮಾಡಬೇಕು.

6. ಬರವಣಿಗೆಯ ಅಭ್ಯಾಸ ಮಾಡದಿರುವುದು

ಕೇವಲ ಓದುವುದರಿಂದ ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರವನ್ನು ಬರೆಯಲು ಸಾಧ್ಯವಾಗುವುದಿಲ್ಲ. ಬರೆಯುವ ಅಭ್ಯಾಸವೂ ಅಗತ್ಯ.

SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಅನುಸರಿಸಬೇಕಾದ 15 ಸಲಹೆಗಳು

  1. ಪ್ರತಿದಿನ ನಿಗದಿತ ಸಮಯದಲ್ಲಿ ಓದಿ.
  2. ಎಲ್ಲಾ ವಿಷಯಗಳಿಗೂ ಸಮಾನ ಪ್ರಾಮುಖ್ಯತೆ ನೀಡಿ.
  3. ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ.
  4. ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ.
  5. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.
  6. ಕಷ್ಟಕರ ವಿಷಯಗಳಿಗೆ ಹೆಚ್ಚುವರಿ ಸಮಯ ನೀಡಿ.
  7. ಗಣಿತದ ಸಮಸ್ಯೆಗಳನ್ನು ಪ್ರತಿದಿನ ಬಿಡಿಸಿ.
  8. ವಿಜ್ಞಾನ ಚಿತ್ರಗಳನ್ನು ಬಿಡಿಸುವ ಅಭ್ಯಾಸ ಮಾಡಿ.
  9. ಸಮಾಜ ವಿಜ್ಞಾನದ ನಕ್ಷೆಗಳನ್ನು ಅಭ್ಯಾಸ ಮಾಡಿ.
  10. ಭಾಷಾ ವಿಷಯಗಳ ವ್ಯಾಕರಣಕ್ಕೆ ಗಮನ ನೀಡಿ.
  11. ಉತ್ತರಗಳನ್ನು ಸ್ಪಷ್ಟವಾಗಿ ಬರೆಯಿರಿ.
  12. ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡಿ.
  13. ತಪ್ಪು ಉತ್ತರಗಳನ್ನು ಮತ್ತೆ ಅಭ್ಯಾಸ ಮಾಡಿ.
  14. ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆಯಿರಿ.
  15. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.

ಮಾದರಿ ಪ್ರಶ್ನೆ ಪತ್ರಿಕೆಗಳೇ ಅಂತಿಮವಾದ ಪರೀಕ್ಷೆಯ ಪ್ರಶ್ನೆಗಳಾಗುತ್ತವೆಯೇ?

ಇದು ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಯಾಗಿದೆ.

ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಂತಿಮವಾಗಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೊಂದಿಗೆ ಒಂದೇ ಎಂದು ಪರಿಗಣಿಸಬಾರದು. ಅವು ಮುಖ್ಯವಾಗಿ ಪರೀಕ್ಷೆಯ ಸ್ವರೂಪ ಹಾಗೂ ಪ್ರಶ್ನೆಗಳ ಮಾದರಿಯನ್ನು ಅರ್ಥಮಾಡಿಕೊಳ್ಳಲು ಸಿದ್ಧಪಡಿಸಿರುವ ಅಭ್ಯಾಸ ಸಾಮಗ್ರಿಗಳಾಗಿವೆ.

ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿ ಇರುವ ಪ್ರಶ್ನೆಗಳು ಅಂತಿಮ ಪರೀಕ್ಷೆಯಲ್ಲಿ ಅದೇ ರೀತಿಯಲ್ಲಿ ಬರುತ್ತವೆ ಎಂಬ ಖಾತರಿ ಇರುವುದಿಲ್ಲ.

ಆದ್ದರಿಂದ ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳ ಜೊತೆ ಜೊತೆಗೆ ಸಂಪೂರ್ಣ ಪಠ್ಯಕ್ರಮವನ್ನು ಅಧ್ಯಯನ ಮಾಡಬೇಕು.

SSLC 2026-27 ಪರೀಕ್ಷೆಗೆ ಡಿಜಿಟಲ್ ಅಧ್ಯಯನ ಸಾಮಗ್ರಿಗಳ ಬಳಕೆ

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕವೂ ಶೈಕ್ಷಣಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.

ಆದರೆ ಡಿಜಿಟಲ್ ಸಂಪನ್ಮೂಲಗಳನ್ನು ಬಳಸುವಾಗ ಅಧಿಕೃತ ಮತ್ತು ವಿಶ್ವಾಸಾರ್ಹ ಮಾಹಿತಿಗೆ ಆದ್ಯತೆ ನೀಡಬೇಕು.

ವಿದ್ಯಾರ್ಥಿಗಳು ಈ ಕೆಳಗಿನ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.

  • KSEAB ಅಧಿಕೃತ ವೆಬ್‌ಸೈಟ್.
  • ಪಠ್ಯಪುಸ್ತಕಗಳ PDF.
  • ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳು.
  • ಅಧಿಕೃತ ಮಾದರಿ ಉತ್ತರಗಳು.
  • ವಿಷಯವಾರು ಅಭ್ಯಾಸ ಸಾಮಗ್ರಿಗಳು.
  • ಶಿಕ್ಷಕರು ಸಿದ್ಧಪಡಿಸಿರುವ ಅಧ್ಯಯನ ಟಿಪ್ಪಣಿಗಳು.

ಅನಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಶ್ನೆ ಪತ್ರಿಕೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಾರದು.

ಪರೀಕ್ಷೆಗೆ ಮುನ್ನ ಕೊನೆಯ 30 ದಿನಗಳ ಸಿದ್ಧತೆ ಹೇಗಿರಬೇಕು?

ಪರೀಕ್ಷೆಗೆ ಕೊನೆಯ 30 ದಿನಗಳು ಬಹಳ ಮಹತ್ವದ್ದಾಗಿರುತ್ತವೆ. ಈ ಸಮಯದಲ್ಲಿ ಹೊಸ ವಿಷಯಗಳನ್ನು ಮಾತ್ರ ಓದುವುದಕ್ಕಿಂತ ಈಗಾಗಲೇ ಕಲಿತ ವಿಷಯಗಳನ್ನು ಪುನರಾವರ್ತನೆ ಮಾಡುವುದು ಅತಿ ಮುಖ್ಯ.

ಮೊದಲ 10 ದಿನಗಳು:

  • ಎಲ್ಲಾ ವಿಷಯಗಳ ಪ್ರಮುಖ ಅಧ್ಯಾಯಗಳನ್ನು ಪುನರಾವರ್ತನೆ ಮಾಡಿ.
  • ಗಣಿತದ ಸೂತ್ರಗಳನ್ನು ಅಭ್ಯಾಸ ಮಾಡಿ.
  • ವಿಜ್ಞಾನದ ಪ್ರಮುಖ ಚಿತ್ರಗಳನ್ನು ಬಿಡಿಸಿ.
  • ಭಾಷಾ ವಿಷಯಗಳ ವ್ಯಾಕರಣ ಓದಿ.

ಮುಂದಿನ 10 ದಿನಗಳು:

  • ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ.
  • ತಪ್ಪಾದ ಪ್ರಶ್ನೆಗಳನ್ನು ಗುರುತಿಸಿ.
  • ಸಮಯ ನಿರ್ವಹಣೆಗೆ ಗಮನ ನೀಡಿ.
  • ಶಿಕ್ಷಕರಿಂದ ಅಗತ್ಯ ಮಾರ್ಗದರ್ಶನ ಪಡೆಯಿರಿ.

ಕೊನೆಯ 10 ದಿನಗಳು:

  • ಪ್ರಮುಖ ವಿಷಯಗಳ ಪುನರಾವರ್ತನೆ ಮಾಡಿ.
  • ಹಿಂದಿನ ಅಭ್ಯಾಸ ಪರೀಕ್ಷೆಗಳ ತಪ್ಪುಗಳನ್ನು ಸರಿಪಡಿಸಿ.
  • ಹೊಸ ವಿಷಯಗಳನ್ನು ಕಲಿಯುವ ಆತುರ ಬೇಡ.
  • ಉತ್ತಮ ನಿದ್ರೆ ಮತ್ತು ಆರೋಗ್ಯದ ಕಡೆ ಗಮನ ನೀಡಿ.

SSLC 2026-27 ಮಾದರಿ ಪ್ರಶ್ನೆ ಪತ್ರಿಕೆಗಳ PDF ಪಡೆಯಲು ಅಧಿಕೃತ ಲಿಂಕ್

2026-27ನೇ ಶೈಕ್ಷಣಿಕ ಸಾಲಿನ SSLC(10ನೇ ತರಗತಿ) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವಂತಹ ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾದರಿ ಪ್ರಶ್ನೆ ಪತ್ರಿಕೆಗಳ ಬುಕೆಟ್ ಮತ್ತು ಸಂಬಂಧಿತ ಪ್ರಕಟಣೆಗಳನ್ನು ಪರಿಶೀಲಿಸಬಹುದು.

KSEAB Official Website: https://kseab.karnataka.gov.in/

ವೆಬ್‌ಸೈಟ್‌ನಲ್ಲಿ SSLC ವಿಭಾಗವನ್ನು ತೆರೆದು 2026-27ನೇ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆಗಳ ಪ್ರಕಟಣೆಯನ್ನು ಹುಡುಕಿ.

ವಿಷಯವಾರು PDF ಲಭ್ಯವಿದ್ದಲ್ಲಿ ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಭ್ಯಾಸ ಮಾಡಿ.

SSLC Model Question Papers 2026-27 – ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ)

ಪ್ರಶ್ನೆ 1: SSLC Model Question Papers 2026-27 ಎಂದರೇನು?

ಉತ್ತರ: 2026-27ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿಯ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಳ್ಳಲು ಮಂಡಳಿಯು ಒದಗಿಸುವ ಮಾದರಿ ಪ್ರಶ್ನೆ ಪತ್ರಿಕೆಗಳಾಗಿವೆ.

ಪ್ರಶ್ನೆ 2: ಈ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಯಾರು ಪ್ರಕಟಿಸುತ್ತಾರೆ?

ಉತ್ತರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಅಧಿಕೃತವಾಗಿ ಪ್ರಕಟಿಸುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಳಸಿಕೊಳ್ಳಬಹುದು.

ಪ್ರಶ್ನೆ 3: ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಎಲ್ಲಿ ಪಡೆಯಬಹುದು?

ಉತ್ತರ: KSEAB ಅಧಿಕೃತ ವೆಬ್‌ಸೈಟ್‌ನಲ್ಲಿ SSLC ವಿಭಾಗದ ಮೂಲಕ ಪರಿಶೀಲಿಸಬಹುದು.

ಪ್ರಶ್ನೆ 4: ಮಾದರಿ ಪ್ರಶ್ನೆ ಪತ್ರಿಕೆಗಳನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಬಹುದೇ?

ಉತ್ತರ: ಹೌದು. ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ PDF ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರಶ್ನೆ 5: ಯಾವ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು?

ಉತ್ತರ: ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಸೇರಿದಂತೆ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು.

ಪ್ರಶ್ನೆ 6: ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ಎಷ್ಟು ಸಮಯ ನೀಡಬೇಕು?

ಉತ್ತರ: ಸಂಬಂಧಿಸಿದ ವಿಷಯದ ಅಂತಿಮ ಪರೀಕ್ಷೆಗೆ ನಿಗದಿಪಡಿಸಿರುವ ಸಮಯವನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡುವುದು ಉತ್ತಮ.

ಪ್ರಶ್ನೆ 7: ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಉತ್ತಮ ಅಂಕ ಪಡೆಯಬಹುದೇ?

ಉತ್ತರ: ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸವು ಪರೀಕ್ಷಾ ಸಿದ್ಧತೆಯನ್ನು ಉತ್ತಮಗೊಳಿಸುತ್ತದೆ. ಆದರೆ ಉತ್ತಮ ಅಂಕ ಗಳಿಸಲು ಪಠ್ಯಕ್ರಮದ ಸಂಪೂರ್ಣ ಅಧ್ಯಯನ, ಪುನರಾವರ್ತನೆ ಮತ್ತು ನಿರಂತರ ಅಭ್ಯಾಸ ಅಗತ್ಯ.

ಪ್ರಶ್ನೆ 8: ಮಾದರಿ ಉತ್ತರ ಪತ್ರಿಕೆಗಳು ಲಭ್ಯವಿವೆಯೇ?

ಉತ್ತರ: ಮಂಡಳಿಯು ಪ್ರಕಟಿಸಿರುವ ಮಾದರಿ ಉತ್ತರಗಳು ಲಭ್ಯವಿರುವ ವಿಷಯಗಳಿಗೆ ಅನುಗುಣವಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಪ್ರಶ್ನೆ 9: ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಿಂಟ್ ಮಾಡಿಕೊಳ್ಳಬಹುದೇ?

ಉತ್ತರ: ಹೌದು. PDF ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿಸಿಕೊಂಡು ಅಭ್ಯಾಸ ಮಾಡಬಹುದು.

ಪ್ರಶ್ನೆ 10: ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿರುವ ಪ್ರಶ್ನೆಗಳೇ ಅಂತಿಮ ಪರೀಕ್ಷೆಯಲ್ಲಿ ಬರುತ್ತವೆಯೇ?

ಉತ್ತರ: ಇಲ್ಲ. ಮಾದರಿ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಯ ಸ್ವರೂಪವನ್ನು ತಿಳಿಸುವ ಅಭ್ಯಾಸ ಸಾಮಗ್ರಿಗಳಾಗಿವೆ. ಅಂತಿಮ ಪರೀಕ್ಷೆಯ ಪ್ರಶ್ನೆಗಳು ಬದಲಾಗಬಹುದು.

ಕೊನೆಯ ಮಾತು

2026-27ನೇ ಶೈಕ್ಷಣಿಕ ಸಾಲಿನಲ್ಲಿ SSLC ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳ ಬುಕೆಟ್ ಅತ್ಯಂತ ಉಪಯುಕ್ತವಾದ ಅಧ್ಯಯನ ಸಂಪನ್ಮೂಲವಾಗಿದೆ.

ವಿದ್ಯಾರ್ಥಿಗಳು ಮಂಡಳಿಯೂ ಪ್ರಕಟಿಸಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ಪ್ರತಿಯೊಂದು ವಿಷಯದಲ್ಲಿಯೂ ನಿರಂತರವಾಗಿ ಅಭ್ಯಾಸ ಮಾಡಬೇಕು.

ಕೇವಲ ಮಾದರಿ ಪ್ರಶ್ನೆ ಪತ್ರಿಕೆಗಳ ಮೇಲೆ ಅವಲಂಬಿತರಾಗದೆ ಪಠ್ಯಪುಸ್ತಕದ ಸಂಪೂರ್ಣ ಅಧ್ಯಯನ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಅಭ್ಯಾಸ, ವಿಷಯವಾರು ಪುನರಾವರ್ತನೆ ಹಾಗೂ ಸಮಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ವಿದ್ಯಾರ್ಥಿಗಳೇ, ನಿಮ್ಮ ಗುರಿ ಉತ್ತಮ ಅಂಕಗಳಾಗಿರಲಿ. ಪ್ರತಿದಿನದ ಶ್ರಮ ಹಾಗೂ ಸರಿಯಾದ ಅಧ್ಯಯನ ವಿಧಾನದಿಂದ ಯಶಸ್ಸು ಸಾಧಿಸಲು ಸಾಧ್ಯ.

ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಎಲ್ಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.

SSLC Model Question Papers 2026-27

👉 CLICK HERE TO DOWNLOAD

WhatsApp Group Join Now
Telegram Group Join Now