Aadhar card: ಇನ್ನು ಮುಂದೆ ವಾಹನದ ಡಿಎಲ್, ಆರ್‌ಸಿಗೂ ಆಧಾರ್ ಕಾರ್ಡ್(Aadhar card) ಕಡ್ಡಾಯ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Aadhar card: ಇನ್ನು ಮುಂದೆ ವಾಹನದ ಡಿಎಲ್, ಆರ್‌ಸಿಗೂ ಆಧಾರ್ ಕಾರ್ಡ್(Aadhar card) ಕಡ್ಡಾಯ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Aadhar card

Aadhar card:ಇನ್ನು ಮುಂದೆ ವಾಹನದ ನೋಂದಣಿ ಪ್ರಮಾಣಪತ್ರ (ಆರ್‌ಸಿ), ಚಾಲನಾ ಪರವಾನಗಿ (ಡಿಎಲ್) ಮತ್ತು ಆಧಾರ್ ಕಾರ್ಡ್ ಜತೆ ಮೊಬೈಲ್ ಸಂಖ್ಯೆ ಜೋಡಣೆ ಹಾಗೂ ನವೀಕರಣ ಮಾಡುವುದು ಕಡ್ಡಾಯ.

ಸಾರ್ವಜನಿಕರ ಮೊಬೈಲ್‌ಗೆ ‘ಪರಿವಾಹನ್’ ಪೋರ್ಟಲ್ ನಿಂದ ಎಸ್‌ಎಂಎಸ್(SMS) ಬರುತ್ತಿದ್ದು, ಚಾಲನಾ ಪರವಾನಗಿ ಹೊಂದಿರುವವರು ಆಧಾರ್ ಕಾರ್ಡ್ ದೃಢೀಕರಣ ಪ್ರಕ್ರಿಯೆ ಮೂಲಕ ತಮ್ಮ ಚಾಲನಾ ಪರವಾನಗಿ ಜತೆ ಮೊಬೈಲ್ ಸಂಖ್ಯೆ ಸೇರಿಸಲು/ನವೀಕರಿಸಲು ಮತ್ತು ದೃಢೀಕರಿಸಲು ವಿನಂತಿಸಲಾಗುತ್ತಿದೆ.

ಸಂಚಾರ ನಿಯಮ ಉಲ್ಲಂಘನೆ ನೋಟಿಸ್, ಇ-ಚಲನ್, ವಾಹನ ನೋಂದಣಿ, ನವೀಕರಣ, ಡೈವಿಂಗ್ ಲೈಸೆನ್ಸ್ ನವೀಕರಣ, ಮಾರಾಟ ಸಹಿತ ಎಲ್ಲ ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಸುಲಭವಾಗಿ ತಲುಪಲು ಮೊಬೈಲ್ ಸಂಖ್ಯೆ ಜತೆ ಜೋಡಣೆ ಮಾಡಬೇಕಿದೆ.

Aadhar card ಮೊಬೈಲ್ ಜೋಡಣೆ?

ಚಾಲನಾ ಪರವಾನಗಿ ಹೊಂದಿರುವವರು ಹಾಗೂ ನೋಂದಾಯಿತ ವಾಹನ ಮಾಲೀಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ತ್ವರಿತವಾಗಿ ಲಿಂಕ್ ಮಾಡಲು ಅಥವಾ ನವೀಕರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಲಹೆ ನೀಡಿದೆ.

ಉತ್ತಮ ಸಂವಹನ ಹಾಗೂ ಸಾರಿಗೆ ಸಂಬಂಧಿತ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ್(Aadhar card) ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನೋಂದಾಯಿತ ವಾಹನಗಳನ್ನು ಅವರ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡುವ ಜತೆಗೆ ಅವರ ಆಧಾರ್ ಸಂಖ್ಯೆ ಜತೆ ದೃಢೀಕರಣ ಕಡ್ಡಾದು. ಯಾವುದೇ ಸಾರಿಗೆ ಮತ್ತು ಚಾಲನಾ ಪರವಾನಗಿ-ಸಂಬಂಧಿತ ಸೇವೆ ಮಾಹಿತಿಗೆ ಇದು ಅತ್ಯಗತ್ಯ ಎಂದು ಸಚಿವಾಲದು ಹೇಳಿದೆ.

ಜನರು ತಮ್ಮ ಮೊಬೈಲ್ ಸಂಖ್ಯೆಯ ವಿವರ ನೋಂದಣಿ ಮಾಡಲು ಮತ್ತು ನವೀಕರಿಸಲು ಸರಕಾರದ ಅಧಿಕೃತ ಪರಿವಾಹನ್ ಮತ್ತು ಸಾರಥಿ ಪೋರ್ಟಲ್‌ಗೆ ಭೇಟಿ ನೀಡಬೇಕು. ಇದು ನಿಖರ ಮತ್ತು ನವೀಕೃತ ವಿಧಾನ ವಾಗಿದ್ದು, ವ್ಯವಹಾರಕ್ಕೆ ಮೊದಲು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವಾಲಯ ಸಲಹೆ ನೀಡಿದೆ.

ಅಕ್ರಮ ಚಟುವಟಿಕೆ ನಡೆಸುವ, ಪದೇಪದೆ ನಿಯಮ ಉಲ್ಲಂಘನೆ ಮಾಡುವ ಕೆಲವರು ದಂಡ ಪಾವತಿ ತಪ್ಪಿಸುವ ಉದ್ದೇಶದಿಂದ ಸರಿಯಾದ ಫೋನ್ ನಂಬ‌ರ್ ನೀಡುತ್ತಿಲ್ಲ. ವಾಹನಗಳ ಸಂಖ್ಯೆ ಸರಿಯಾಗಿ ಬರೆಯುತ್ತಿಲ್ಲ ಎಂಬುದನ್ನು ಇಲಾಖೆ ಪತ್ತೆ ಹಚ್ಚಿದ್ದು, ಈ ನಿಟ್ಟಿನಲ್ಲಿ ಈಗ ಜೋಡಣೆ ಅಭಿಯಾನ ಆರಂಭಿಸಿದೆ.

WhatsApp Group Join Now
Telegram Group Join Now