ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ಅರ್ಜಿ ಆಹ್ವಾನ-2024-25.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ಅರ್ಜಿ ಆಹ್ವಾನ-2024-25.

ಪ್ರಾಧ್ಯಾಪಕ

ಸಹಾಯಕ ಪ್ರಾಧ್ಯಾಪಕರು    ಎಂಬಿಎ, ಪಿಹೆಚ್‌ಡಿ, ಎನ್‌ಇಟಿ, ಎಸ್‌ಎಲ್‌ಇಟಿ, ಪಾಸ್‌ ಜತೆಗೆ ಬೋಧನಾ ಅನುಭವ ಪಡೆದಿರುವವರಿಗೆ ಬ್ರೈಟ್ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಉದ್ಯೋಗಾವಕಾಶಗಳಿವೆ. ನೀವು ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗಾಗಿ, ಸದರಿ ಹುದ್ದೆಗಳನ್ನು ಬೇರೆ ಸಂಸ್ಥೆಗೆ ಸೇರಲು ನೋಡುತ್ತಿದ್ದಲ್ಲಿ ಈಗ ಅರ್ಜಿ ಹಾಕಿ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದಿರಿ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಬ್ರೈಟ್ ಎಜುಕೇಷನ್‌ ಟ್ರಸ್ಟ್‌ನ ಬ್ರೈಟ್ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಪ್ರೊಫೆಸರ್, ಅಸೋಸಿಯೇಟ್‌ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಉದ್ಯೋಗ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಸದರಿ ಹುದ್ದೆಗಳಿಗೆ ನೇರವಾಗಿ ಅಥವಾ ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Read more…

ಹುದ್ದೆಗಳು ಮತ್ತು ಅರ್ಹತೆಗಳ ಕುರಿತು ಸಂಪೂರ್ಣ ಮಾಹಿತಿ ಕೆಳಗಿನಂತೆ ತಿಳಿಸಲಾಗಿದೆ.

ಪ್ರಾಧ್ಯಾಪಕರು

ಪ್ರಥಮ ಶ್ರೇಣಿಯಲ್ಲಿ ಎಂಬಿಎ ಪಾಸ್‌ ಹಾಗೂ ಪಿಹೆಚ್‌ಡಿ ಅನ್ನು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಪಡೆದಿರಬೇಕು. ಕನಿಷ್ಠ 15 ವರ್ಷಗಳ ಬೋಧನಾ ಅನುಭವ, ಸಂಶೋಧನೆಯ ಅನುಭವ ಹೊಂದಿರಬೇಕು. 3 ವರ್ಷಗಳ ಕಾಲ ಕನಿಷ್ಠ ಅಸೋಸಿಯೇಟ್‌ ಪ್ರೊಫೆಸರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರಬೇಕು.

ಸಹ ಪ್ರಾಧ್ಯಾಪಕರು

ಪ್ರಥಮ ಶ್ರೇಣಿಯಲ್ಲಿ ಎಂಬಿಎ ಪಾಸ್‌ ಹಾಗೂ ಪಿಹೆಚ್‌ಡಿ ಅನ್ನು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಪಡೆದಿರಬೇಕು. ಕನಿಷ್ಠ 10 ವರ್ಷಗಳ ಬೋಧನಾ ಅನುಭವ, ಸಂಶೋಧನೆಯ ಅನುಭವ ಹೊಂದಿರಬೇಕು.

ಸಹಾಯಕ ಪ್ರಾಧ್ಯಾಪಕರು

3 ವರ್ಷಗಳ ಕಾಲ ಕನಿಷ್ಠ ಬೋಧನಾ ಅನುಭವ ಹೊಂದಿರಬೇಕು. ಎನ್‌ಇಟಿ / ಎಸ್‌ಎಲ್‌ಇಟಿ ಪಾಸ್‌ ಮಾಡಿರಬೇಕು. ಪಿಹೆಚ್‌ಡಿ’ಗೆ ರಿಜಿಸ್ಟ್ರೇಷನ್‌ ಪಡೆದವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.

ಈ ಮೇಲಿನ ಹುದ್ದೆಗಳ ಪೈಕಿ ಯಾವ ಹುದ್ದೆಗಳನ್ನು ಎಷ್ಟೆಷ್ಟು ಸಂಖ್ಯೆಯಲ್ಲಿ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿಲ್ಲ. ಆದರೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದವರಿಗೆ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಕರ್ಷಕ ವೇತನ ನೀಡಲಿದ್ದು, ಆಸಕ್ತರು ಆನ್‌ಲೈನ್‌ / ಅಂಚೆ / ಕೊರಿಯರ್ / ಇ-ಮೇಲ್ ಮೂಲಕ ಸೇರಿ ಯಾವುದೇ ಮಾದರಿಯಲ್ಲಿ ಅರ್ಜಿ ತಲುಪಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಯನ್ನು ಕೆಳಗೆ ನೀಡಲಾದ ಇ-ಮೇಲ್‌ ವಿಳಾಸ ಅಥವಾ ಸಂಸ್ಥೆಯ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಲೇಟೆಸ್ಟ್‌ ಅಪ್‌ಡೇಟ್‌ ಮಾಡಲಾದ ಬಯೋಡಾಟಾ, ಶೈಕ್ಷಣಿಕ ದಾಖಲೆಗಳು, ಕರ್ತವ್ಯ ಅನುಭವ ದಾಖಲೆಗಳನ್ನು ಲಗತ್ತಿಸಬೇಕು. ರೆಸ್ಯೂಮ್ ಜತೆಗೆ ಆಧಾರ್ ಕಾರ್ಡ್‌, ಶೈಕ್ಷಣಿಕ ದಾಖಲೆಗಳು, ಕಾರ್ಯಾನುಭವ ದಾಖಲೆಗಳನ್ನು ಕಡ್ಡಾಯವಾಗಿ ಕಳುಹಿಸಬೇಕು.

Read more…

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:

19-10-2024

ಅರ್ಜಿ ಸಲ್ಲಿಸಬೇಕಾದ ಇ-ಮೇಲ್ ವಿಳಾಸ:

brightbusinessschool@gmail.com

ಅರ್ಜಿ ಸಲ್ಲಿಸಲು ಸಂಸ್ಥೆಯ ವಿಳಾಸ:

ಬ್ರೈಟ್ ಬ್ಯುಸಿನೆಸ್ ಸ್ಕೂಲ್, ಅಕ್ಷಯ ಪಾರ್ಕ್‌ ಹತ್ತಿರ, ರವಿನಗರ ಕ್ರಾಸ್, ಗೋಕುಲ್ ರಸ್ತೆ, ಹುಬ್ಬಳ್ಳಿ.

ವೇತನ ವಿವರ :


AICTE ಯ 6ನೇ ವೇತನ ಶ್ರೇಣಿ ಪ್ರಕಾರ ಜತೆಗೆ ಕಾರ್ಯಕ್ಷಮತೆ ಇನ್‌ಸೆನ್‌ಟಿವ್ ಜತೆಗೆ ಪ್ರವೇಶ ಬೋನಸ್.

ಧನ್ಯವಾದಗಳು….

Click here…

WhatsApp Group Join Now
Telegram Group Join Now

Leave a Comment