Atal pension scheme: ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ(Atal pension scheme)ಯಲ್ಲಿ ತಿಂಗಳಿಗೆ ₹5000 ಪಿಂಚಣಿ ಕೇವಲ ₹40 ಕಂತು ಕಟ್ಟಿದರೆ ಸಾಕು.
Atal pension scheme: ಭಾರತದ ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಅವರ ಭದ್ರತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ‘ಅಟಲ್ ಪಿಂಚಣಿ ಯೋಜನೆ (Atal Pension Yojana – APY)’ನ್ನು ರೂಪಿಸಿದೆ. ಈ ಯೋಜನೆಯಡಿಯಲ್ಲಿ, ಚಂದಾದಾರರು ತಮ್ಮ ವಯಸ್ಸು ಮತ್ತು ಕೊಡುಗೆ ಮೊತ್ತದ ಆಧಾರದ ಮೇಲೆ ತಿಂಗಳಿಗೆ ₹1,000 ರಿಂದ ₹5,000ರವರೆಗೆ ಖಾತರಿಪಡಿಸಿದ ಪಿಂಚಣಿಯನ್ನು 60ನೇ ವಯಸ್ಸಿನ ನಂತರ ಪಡೆಯಲು ಅರ್ಹರಾಗುತ್ತಾರೆ.
Atal pension scheme ಗೆ ಯಾರೆಲ್ಲಾ ಅರ್ಜಿ ಹಾಕಬಹುದು?
ಈ ಯೋಜನೆಯಲ್ಲಿ ಭಾಗವಹಿಸಲು ಈ ಕೆಳಗಿನ ಅರ್ಹತಾ ಪ್ರಮುಖ ಅಂಶಗಳನ್ನು ಹೊಂದಿರಬೇಕು.
• ವಯಸ್ಸು:- 18ರಿಂದ 40 ವರ್ಷದೊಳಗಿನ ಯಾರಾದರೂ ಈ ಯೋಜನೆಗೆ ಸೇರಬಹುದು.
• ಬ್ಯಾಂಕ್ ಖಾತೆ:- ಉಳಿತಾಯ ಬ್ಯಾಂಕ್ ಖಾತೆ ಮತ್ತು ಅಂಚೆ ಕಚೇರಿ ಉಳಿತಾಯ ಖಾತೆ ಹೊಂದಿರುವವರು ಮಾತ್ರ ಅರ್ಜಿ ಹಾಕಬಹುದು.
• ಆಧಾರ್ ಕಾರ್ಡ್ ಮತ್ತು ಮೊಬೈಲ್:- ನೋಂದಣಿಯ ಸಮಯದಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವುದು ಸುಲಭತೆಗೆ ಸಹಕಾರಿ, ಆದರೆ ಅವು ಕಡ್ಡಾಯವಲ್ಲ.
ಪಿಂಚಣಿಯ ಅಗತ್ಯತೆ ವಿದೆಯೇ?
• ವಯಸ್ಸು ಜಾಸ್ತಿಯಾದಂತೆ ಆದಾಯ ಗಳಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.
• ಜೀವನ ವೆಚ್ಚದ ಏರಿಕೆ ಹಾಗೂ ದೀರ್ಘಾಯುಷ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸಿಕ ಖಚಿತ ಆದಾಯ ಅಗತ್ಯವಾಗಿದೆ.
• ವಿಭಜಿತ ಕುಟುಂಬ ವ್ಯವಸ್ಥೆಗಳಿಂದ ವೃದ್ಧರಿಗೆ ಆರ್ಥಿಕ ಅವಲಂಬನೆ ತೀರಾ ಕಡಿಮೆಯಾಗಿದೆ.
• ಕೇಂದ್ರ ಸರ್ಕಾರದಿಂದ ನಿರ್ಧಿಷ್ಟ ಪಿಂಚಣಿ ನಿರ್ಧಾರವು ಗೌರವಯುತ ಜೀವನವನ್ನು ಒದಗಿಸಲು ಸಹಾಯಕವಾಗುತ್ತದೆ.
Atal pension scheme ಈ ಯೋಜನೆಯ ಪ್ರಮುಖ ಲಕ್ಷಣಗಳು.
• ಚಂದಾದಾರರ ಕೊಡುಗೆಗಳು ತಿಂಗಳಿಗೆ ಹಾಗೂ ತ್ರೈಮಾಸಿಕವಾಗಿ ಬೇಕಾದರೆ ಡೆಬಿಟ್ ಆಗುತ್ತವೆ.
• ಪಿಂಚಣಿಯ ಮೊತ್ತವನ್ನು ನಿಗದಿಪಡಿಸಿ, ಅದಕ್ಕೆ ತಕ್ಕಂತೆ ಕೊಡುಗೆ ಮೊತ್ತವನ್ನು ಆಯ್ಕೆ ಮಾಡಬಹುದು.
• ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡವರು 60 ವರ್ಷ ತುಂಬಿದ ಬಳಿಕ ಜೀವನಪೂರ್ತಿ ಪಿಂಚಣಿ ಪಡೆಯುತ್ತಾರೆ.
Atal pension scheme ಈ ಯೋಜನೆಗೆ ಹೇಗೆ ನೋಂದಾಯಿಸಬೇಕು?
ಯಾವುದೇ ಬ್ಯಾಂಕ್ ಮತ್ತು ಅಂಚೆ ಕಚೇರಿಗೆ ಹೋಗಿ, ಅಟಲ್ ಪಿಂಚಣಿ ಯೋಜನೆ(Atal pension scheme) ಫಾರ್ಮ್ ಪಡೆದು ಪೂರೈಸಿ ಸಲ್ಲಿಸಬಹುದು. ಹಲವಾರು ಬ್ಯಾಂಕುಗಳಲ್ಲಿ ಆನ್ಲೈನ್ ನೋಂದಣಿಯ ಸೌಲಭ್ಯವೂ ಲಭ್ಯವಿದೆ.