B.Ed evaluation:ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಮೌಲ್ಯಮಾಪನ (B.Ed evaluation)ಅಕ್ರಮ ಸಿಐಡಿ ತನಿಖೆಗೆ.

B.Ed evaluation:ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಮೌಲ್ಯಮಾಪನ (B.Ed evaluation)ಅಕ್ರಮ ಸಿಐಡಿ ತನಿಖೆಗೆ.

B.Ed evaluation

 

B.Ed evaluation:ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಇಡಿ ಮೌಲ್ಯಮಾಪನ(B.Ed evaluation)ದಲ್ಲಿ ಅನಿಯಮಿತ ಮೌಲ್ಯಮಾಪನ ಮತ್ತು ಅಂಕಗಳನ್ನು ತಿದ್ದುಪಡಿ ಮಾಡಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸಿಂಡಿಕೇಟ್ ನಿರ್ಧರಿಸಿದೆ.

ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸುಮಾರು 25-27 ಬಿ.ಇಡಿ ಕಾಲೇಜ್‌ ಗಳು ಕಾರ್ಯನಿರ್ವಹಿಸುತ್ತಿವೆ. ಡಿಸೆಂಬರ್‌ನಲ್ಲಿ ಸಾವಿರಾರು ಬಿ. ಇಡಿ ವಿದ್ಯಾರ್ಥಿಗಳು 2ನೇ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದರು. ಈ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆದ ನಂತರ, ಅಂಕಗಳನ್ನು ತಿದ್ದುಪಡಿ ಮಾಡಲಾಗಿದೆ. ಈ ವಿಷಯ ವಿಶ್ವವಿದ್ಯಾಲಯದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮೌಲ್ಯಮಾಪನ ಪ್ರಕರಣವನ್ನು ಸಿಂಡಿಕೇಟ್‌ನಲ್ಲಿ ತಂದು ಚರ್ಚೆ ನಡೆಸಿ ತನಿಖೆಗೆ ಸಿಐಡಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಇತ್ತ ಪರೀಕ್ಷೆ ಬರೆದ ವಿದ್ಯಾರ್ಥಿಗಳು 6 ತಿಂಗಳಿಂದ ಫಲಿತಾಂಶ ಇಂದು ಬರುತ್ತೋ, ಇಲ್ಲ ನಾಳೆ ಬರುತ್ತೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದೀಗ ಇಡೀ 2023-24ರ ಶೈಕ್ಷಣಿಕ ಸಾಲಿನ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಪ್ರಕ್ರಿ ಯಲ್ಲಿ ಮೌಲ್ಯ ಮಾಪಕರು ಹೆಚ್ಚಿನ ಅಂಕ ನೀಡಿರುವುದು, ನಿಗದಿಗಿಂತ ಹೆಚ್ಚಿನ ಪತ್ರಿಕೆ ಮೌಲ್ಯ ಮಾಪನ ಮಾಡಿರುವುದು ಹೀಗೆ ಹಲವು ಗೊಂದಲಗಳು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಡೆದಿದ್ದರಿಂದ ಸಿಂಡಿಕೇಟ್ ಈ ತೀರ್ಮಾನ ಮಾಡಿದೆ.

ಬಿ.ಇಡಿ ಪರೀಕ್ಷೆ(B.Ed evaluation) ನಂತರ ಮೌಲ್ಯಮಾಪನಕ್ಕೂ ಮುನ್ನ ಉತ್ತರ ಪತ್ರಿಕೆಗಳ ಕೋಡಿಂಗ್ ಈ ಹಿಂದೆ ಇದ್ದ ಪರೀಕ್ಷಾ ಕುಲಸಚಿವ ಮಾರ್ಗದರ್ಶನದಲ್ಲಿ ಮಾಡಲಾಗಿತ್ತು. ಆನಂತರ ಸಿಂಡಿಕೇಟ್ ಸಭೆಯಲ್ಲಿ ಮತ್ತೊಮ್ಮೆ ಕೋಡಿಂಗ್ ಮಾಡಿಸಿ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಮತ್ತೊಮ್ಮೆ ಕೋಡಿಂಗ್‌ಗೆ ಆಗಿನ ಕುಲ ಸಚಿವರು ನಿರಾಕರಿಸಿದ್ದರು. ಹಿಂದಿನ ಕುಲಸಚಿವರ ವರ್ಗಾವಣೆ ಯಾಗುತ್ತಲೇ ಮತ್ತೊಮ್ಮೆಕೋಡಿಂಗ್ ಮಾಡಲು ಸಿಂಡಿಕೇಟ್‌ನಲ್ಲಿ ಇಬ್ಬರು ಪ್ರೊಫೆಸರ್‌ಗಳ ತಂಡ ಮಾಡಿ ಕೋಡಿಂಗ್ ಮಾಡಲಾಗಿತ್ತು.

B.Ed evaluation:ಹಲವು ಲೋಪ ಪತ್ತೆ.

ಪ್ರೊಫೆಸರ್‌ಗಳ ತಂಡ ಮತ್ತೊಮ್ಮೆ ಬಿ.ಇಡಿ ಉತ್ತರ ಪತ್ರಿಕೆಗಳ ಕೋಡಿಂಗ್ ಮಾಡಲು ಹೋದಾಗ ಹಲವು ಸಂಶಯದ ವಿಷಯಗಳು ಕಂಡು ಬಂದಿರುವ ಬಗ್ಗೆ ವಿಶ್ವವಿದ್ಯಾಲಯಕ್ಕೆ ವರದಿ ನೀಡಿಲಾಗಿದೆ. ಇಷ್ಟೆಲ್ಲ ಗೊಂದಲಗಳ ನಡುವೆಯೂ ಖಾಸಗಿ ಬಿ.ಇಡಿ ಕಾಲೇಜಿನ ಪ್ರಾಚಾರ್ಯರೊಬ್ಬರನ್ನು ಮೌಲ್ಯಮಾಪನದ ಕಸ್ಟೋಡಿಯನ್ ಆಗಿ ನೇಮಕ ಮಾಡಲಾಗಿತ್ತು. ಇವರು ಕಸ್ಟೋಡಿಯನ್ ಮಾಡಿರುವುದಕ್ಕೆ ಬಿ.ಇಡಿ ಕಾಲೇಜುಗಳು ವಿರೋಧಿಸಿದ್ದವು. ಕೊನೆಗೂ ಕುಲಸಚಿವರು ಮಧ್ಯಸ್ಥಿಕೆ ವಹಿಸಿ ಮೌಲ್ಯಮಾಪನ ಆರಂಭಿಸಲಾಗಿತ್ತು.  ಮೌಲ್ಯಮಾಪನದಲ್ಲಿ ಅನಿಯಮಿತ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಅಂಕಗಳ ತಿದ್ದುಪಡಿ ಆಗಿರುವುದು ಕಂಡುಬಂದಿದೆ.

B.Ed evaluation:ಹೆಚ್ಚಿನ ಅಂಕ ನೀಡಿದ್ದ ಮೌಲ್ಯಮಾಪಕರು.

ಬಿ.ಇಡಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ ಶಿಕ್ಷಕರು ಉತ್ತರ ಪತ್ರಿಕೆಯಲ್ಲಿ ಇರುವುದಕ್ಕಿಂತ ಹೆಚ್ಚುವರಿ ಅಂಕ ನೀಡುವುದು ಬೆಳಕಿಗೆ ಕಂಡುಬಂದಿದೆ.

ಇದರ ಜೊತೆಗೆ ಒಬ್ಬ ಮೌಲ್ಯಮಾಪಕರು ತಮಗೆ ನಿಯೋಜನೆ ಮಾಡಿದ್ದಕ್ಕಿಂತ ಹೆಚ್ಚಿನ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ ಎಂಬುದು ಸಹ ತಿಳಿದು ಬಂದಿದೆ. ಈ ಕುರಿತು ವರದಿ ತರಿಸಿಕೊಂಡಿರುವ ವಿವಿ ಆಡಳಿತ ಮಂಡಳಿ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಮಾಡಿ ಸಿಐಡಿ(ಸಿಒಡಿ) ತನಿಖೆ ನಡೆಸುವಂತೆ ಸರಕಾರಕ್ಕೆ ಪತ್ರ ಬರೆದಿದೆ. ಇದೀಗ ಸರಕಾರ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

B.Ed evaluation:ಮತ್ತೊಮ್ಮೆ ಮೌಲ್ಯಮಾಪನಕ್ಕೆ ನಿರ್ಧಾರ.

ಗುಲ್ಬರ್ಗ ವಿವಿ ವ್ಯಾಪ್ತಿಯ ಬಿ.ಇಡಿ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನದಲ್ಲಿ ಹಲವು ಗೊಂದಲಗಳು ನಡೆದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಿ.ಇಡಿ ಮೌಲ್ಯಮಾಪನ(B.Ed evaluation) ಮಾಡಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯ ಆಗದಂತೆ ಮತ್ತೊಮ್ಮೆ ಮೌಲ್ಯಮಾಪನ ನಡೆಸಲು ಶಿಕ್ಷಣ ನಿಕಾಯದ ಬೇರೆ ಬೇರೆ ವಿದ್ಯಾಲಯಗಳ ಸಿಬ್ಬಂದಿಗಳನ್ನು ಜೇಷ್ಠತೆ ಆಧಾರದಲ್ಲಿ ಕಸ್ಟೋಡಿಯನ್ ನೇಮಿಸಿ ಶೀಘ್ರ ಮೌಲ್ಯಮಾಪನ ಮಾಡಲು ಸಿಂಡಿಕೇಟ್ ಸಭೆ ನಿರ್ಣಯಿಸಿದೆ.

News Paper – CLICK HERE

WhatsApp Group Join Now
Telegram Group Join Now