CBSE: ಸಿಬಿಎಸ್‌ಇ(CBSE) 10, 12ನೇ ವರ್ಗದ ಪರೀಕ್ಷೆ ದಿನಾಂಕ ನಿಗದಿ.
CBSE: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) ಯ CBSE 10 ಮತ್ತು 12ನೇ ತರಗತಿಗಳಿಗೆ ಬೋರ್ಡ್ ಎಕ್ಸಾಂ ಮುಂದಿನ ವರ್ಷದ ಫೆ.17ರಂದು ಆರಂಭವಾಗಲಿವೆ ಎಂದು ಬುಧವಾರ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಪ್ರಮುಖ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಂಭಾವ್ಯ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಹತ್ತನೇ ತರಗತಿಗೆ ಇದೇ ಮೊದಲ ಸಲ ಶೈಕ್ಷಣಿಕ ಅವಧಿಯಲ್ಲಿ ಎರಡು ಸಲ ಬೋರ್ಡ್ ಎಕ್ಸಾಂ ನಡೆಸಲಾಗುತ್ತಿದೆ. ಮೊದಲ ಆವೃತ್ತಿ 2026ರ ಫೆ.17ರಿಂದ ಮಾ.6ರ ವರೆಗೆ ಮತ್ತು ಎರಡನೇ ಆವೃತ್ತಿ ಮೇ 15ರಿಂದ ಜೂನ್ 1ರ ವರೆಗೆ ನಡೆಯಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ತಿಳಿಸಿದ್ದಾರೆ. 12ನೇ ತರಗತಿಯ ಬೋರ್ಡ್ ಎಕ್ಸಾಂ ಫೆ.17ರಿಂದ ಏ.9ರ ವರೆಗೆ ನಡೆಯಲಿದೆ. ಪರೀಕ್ಷೆ ನಡೆದ ಅಂದಾಜು 10 ದಿನಗಳ ಬಳಿಕ ಮೌಲ್ಯಮಾಪನ ನಡೆಯಲಿದೆ.
• Read more…ಶಿಕ್ಷಣ ಇಲಾಖೆಯ 18.000 ಶಿಕ್ಷಕರ(TEACHERS) ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.