DCET 2025: 18, 19 DCET ವಿವರಗಳು ತಪ್ಪಾಗಿದ್ದರೆ ತಿದ್ದುಪಡಿಗೆ ಅಂತಿಮ ಅವಕಾಶ.

DCET 2025: 18, 19 DCET ವಿವರಗಳು ತಪ್ಪಾಗಿದ್ದರೆ  ತಿದ್ದುಪಡಿಗೆ ಅಂತಿಮ ಅವಕಾಶ.

DCET 2025

DCET 2025:ಅಭ್ಯರ್ಥಿಗಳು ಡಿಸಿಇಟಿ-2025(DCET 2025)ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನಮೂದಿಸಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ಕಚೇರಿಗೆ ಜೂ.18 ಅಥವಾ 19ರಂದು ಖುದ್ದು ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಅಭ್ಯರ್ಥಿಗಳು ಡಿಸಿಇಟಿ-2025(DCET 2025)ಕ್ಕೆ ಸಲ್ಲಿಸಿದ ಅರ್ಜಿ ಪ್ರತಿ, ಪ್ರವೇಶಪತ್ರ, ಪರಿಶೀಲನಾ ಪತ್ರ ಮತ್ತು ಅಗತ್ಯವಾದ ಎಲ್ಲಾ ಮೂಲ ದಾಖಲೆ ಮತ್ತು ಪ್ರಮಾಣಪತ್ರಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು. ಪರಿಶೀಲನೆಗೆ ಹಾಜರಾಗುವ ಮೊದಲು ಜೂ. 16ರಂದು ಸ್ಟಾಟ್ ಬುಕಿಂಗ್ ಮಾಡಿರಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಗದಿತ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದೇ ಇರುವವರು, ದಾಖಲೆಗಳು, ಕ್ಷೇಮುಗಳು, ಡಿಪ್ಲೊಮಾ ಪರೀಕ್ಷೆಯ ಅಂಕಗಳು, ವೃತ್ತಿನಿರತ ಕ್ಷೇಮುಗಳನ್ನು ಸರಿಯಾಗಿ ನಮೂದಿಸದವರು ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳಬಹುದು. ಎಲ್ಲಾ ಮಾಹಿತಿ ಸರಿ ಇರುವವರು ಕೆಇಎ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪರಿಶೀಲನೆಗೆ ಹಾಜರಾದ ನಂತರ ಅನೇಕರಿಗೆ ತಮ್ಮ ತಪ್ಪುಗಳು ಅರಿವಿಗೆ ಬಂದಿದ್ದು, ಅಂತಹವರು ಕೂಡ ಬರಬಹುದು ಎಂದು ಅವರು ತಿಳಿಸಿದ್ದಾರೆ.

DCET 2025:ನಾಟಾ ಅಂಕ ನಮೂದು.

ಡಿಪ್ಲೊಮಾ ಮೂಲಕ ಆರ್ಕಿಟೆಕ್ಟರ್ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ 2025ರ ನಾಟಾ ಪರೀಕ್ಷೆ ಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ನಾಟಾ-2025ರಲ್ಲಿ ಪಡೆದಿರುವ ಅಂಕಗಳನ್ನು ಜೂನ್ 17 ಮತ್ತು 18ರಂದು ಪ್ರಾಧಿಕಾರದ ಪೋರ್ಟಲ್‌ನಲ್ಲಿ ನಮೂದಿಸಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

Notification link – CLICK HERE

WhatsApp Group Join Now
Telegram Group Join Now