Digital Ration Card: ಇನ್ನೂ ಮುಂದೆ ರೇಷನ್ ಪಡೆಯಲು ಡಿಜಿಟಲ್‌ ರೇಷನ್‌ ಕಾರ್ಡ್‌ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Digital Ration Card: ಇನ್ನೂ ಮುಂದೆ ರೇಷನ್ ಪಡೆಯಲು ಡಿಜಿಟಲ್‌ ರೇಷನ್‌ ಕಾರ್ಡ್‌ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Digital Ration Card

Digital Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬರೀ ರೇಷನ್‌ ಪಡೆಯಲು ಅಷ್ಟೇ ಅಲ್ಲದೆ, ಯಾವುದೇ ಒಂದು ಅರ್ಜಿ ಸಲ್ಲಿಕೆಗೆ ಅತ್ಯಗತ್ಯವಾಗಿ ಬೇಕಾಗುತ್ತದೆ. ಇದನ್ನು ಇಷ್ಟು ದಿನ ಕಾಗದ ಅಥವಾ ಪ್ಲಾಸ್ಟಿಕ್‌ ಕವರ್ ರೂಪದಲ್ಲಿದ್ದು, ಕೈಯಲ್ಲಿ ಹಿಡಿದುಕೊಂಡು ಹೋಗಬೇಕಿತ್ತು. ಆದರೆ, ಇನ್ನೂ ಮುಂದೆ ಇದೀಗ ಡಿಜಿಟಲ್‌ ರೂಪದಲ್ಲಿ ಬರಲಿದ್ದು, ಮೊಬೈಲ್‌ಗಳಲ್ಲೇ ಲಭ್ಯ ಇರಲಿದೆ. ಹಾಗಾದ್ರೆ ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ತಿಳಿದುಕೊಳ್ಳಬಹುದು.

ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್(BPL) ಕಾರ್ಡ್‌ಗಳನ್ನು ಬಂದ್‌ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮುಂದುವರೆಸಿದೆ. ಈ ನಡುವೆಯೇ ಡಿಜಿಟಲ್‌ ರೂಪದಲ್ಲಿ ರೇಷನ್‌ ಕಾರ್ಡ್‌ ಪಡೆಯಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರತಿಯೊಂದು ಕುಟುಂಬಕ್ಕೆ ಅಗತ್ಯವನ್ನು ಪೂರೈಸುವ ರೇಷನ್ ಕಾರ್ಡ್ ಇಷ್ಟು ದಿನ ಕಾಗದದ ರೂಪದಲ್ಲಿತ್ತು. ಸದ್ಯ, ಕಾಗದ ಹಾಗೂ ಪ್ಲಾಸ್ಟಿಕ್ ಕಾರ್ಡ್ ರೂಪವನ್ನು ಬದಲಿಸಿ ಇದೀಗ ಡಿಜಿಟಲ್ ರೂಪದಲ್ಲಿ ಪಡೆಯಬಹುದು. ಡಿಜಿಟಲ್ ರೇಷನ್ ಕಾರ್ಡ್ ಅನ್ನು ಮೊಬೈಲ್‌, ಕಂಪ್ಯೂಟರ್, ಟ್ಯಾಬ್‌ಗಳಲ್ಲಿ ಇಟ್ಟುಕೊಳ್ಳಬಹುದು. ಇದನ್ನು ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಅರ್ಹ ಫಲಾನುಭವಿಗಳು ಪಡೆಯಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನ ಸರ್ಕಾರಿ ಪೋರ್ಟಲ್ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ಪಡೆದುಕೊಳ್ಳಬಹುದು. ಈ ಕಾರ್ಡ್ ನಿಮ್ಮ ಸ್ಮಾರ್ಟ್ ಫೋನ್ ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹ ಆಗಿರುತ್ತದೆ. ಇದರಲ್ಲಿ ಬಳಕೆಯದಾರರ ಎಲ್ಲಾ ಮಾಹಿತಿಯನ್ನು ಕ್ಯೂಆರ್ ಕೋಡ್ ಮತ್ತು ಬಾರ್ ಕೋಡ್ ಮೂಲಕ ಸಂಗ್ರಹ ಮಾಡಲಾಗುತ್ತದೆ. ಇದರಿಂದ ಅದನ್ನು ಸುಲಭವಾಗಿ ಸ್ಕ್ಯಾನ್ ಮಾಡಿ ಪರಿಶೀಲನೆ ಮಾಡಬಹುದು.

ಹೊಸ ಡಿಜಿಟಲ್ ಪಡಿತರ ಚೀಟಿ ಪಡೆಯುವ ವಿಧಾನಗಳು.

• ನಿಮ್ಮ ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಉದಾಹಣೆಗೆ ಕರ್ನಾಟಕದವರಾಗಿದ್ದರೆ, https://ahara.kar.nic.in/ ಗೆ ಭೀಟಿ ನೀಡಬೇಕಾಗುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಮೇಲೆ ಕ್ಲಿಕ್ ಮಾಡಿ.
• ಅರ್ಜಿ ಫಾರಂನಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ನಂತರ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ.
ಅರ್ಜಿ ಸಲ್ಲಿಸಿದ ಬಳಿಕ ನೋಂದಣಿ ಸಂಖ್ಯೆ ನೀಡಲಾಗುವುದು.
ನೋಂದಣಿ ಸಂಖ್ಯೆ ಬಳಸಿಕೊಂಡು ನಿಮ್ಮ ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ಲ್ಲಿ ಪರಿಶೀಲನೆ ಮಾಡಬಹುದು.
ಆನ್‌ಲೈನ್‌ ಸೌಲಭ್ಯ ಇಲ್ಲದವರು ಅಕ್ಕ ಪಕ್ಕದಲ್ಲಿರುವ ಸರ್ವೀಸ್‌ ಸೆಂಟರ್‌ನಲ್ಲಿ ಸಹಾಯ ಪಡೆಯಬಹುದು.

ಇಷ್ಟು ದಿನ ಯಾವುದೇ ಅರ್ಜಿ ಸಲ್ಲಿಕೆ ಮಾಡಬೇಕಾದರು ಕಾಗದದ ರೂಪದಲ್ಲಿನ ರೇಷನ್‌ ಕಾರ್ಡ್‌ ಅನ್ನು ತೆಗೆದುಕೊಂಡು ಹೋಗಬೇಕಿತ್ತು. ಆದರೆ, ಇದೀಗ ಡಿಜಿಟಲ್‌ ಯುಗ ಆಗಿದ್ದು, ಇದನ್ನು ಕೂಡ ಡಿಜಿಟಲ್‌ ರೂಪದಲ್ಲಿ ಪಡೆಯಬಹುದು. ಮೊಬೈಲ್‌ಗಳಲ್ಲೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದರಿಂದ ಕಾಗದದ ರೂಪದಲ್ಲಿನ ರೇಷನ್‌ ಕಾರ್ಡ್‌ ಅನ್ನು ಕೈಯಲ್ಲಿ ಇಟ್ಟುಕೊಂಡು ಹೋಗುವ ಹೊರೆ ತಪ್ಪಿದಂತಾಗಲಿದೆ.

WhatsApp Group Join Now
Telegram Group Join Now