Dr. B.R. Ambedkara:ಮಹಾನ್ ಸಮಾಜ ಸುಧಾರಕ ಮತ್ತು ಭಾರತೀಯ ಸಂವಿಧಾನ ಶಿಲ್ಪಿ,ಡಾ. ಬಿ.ಆರ್.ಅಂಬೇಡ್ಕರವರ(Dr. B.R. Ambedkara)ಜಯಂತಿಯನ್ನು ರಾಜ್ಯದಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಚರಿಸಬೇಕು ಎಂದು ಆದೇಶ ಹೊರಡಿಸಿದೆ.
Dr. B.R. Ambedkara:ರಾಜ್ಯದಲ್ಲಿ 2024-25ನೇ ಶೈಕ್ಷಣಿಕ ವರ್ಷ ದಿನಾಂಕ: 10.04.2025ರಂದು ಮುಕ್ತಾಯವಾಗುತ್ತದೆ ದಿನಾಂಕ :14.04.2025 ರಂದು ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರ್ರವರ(Dr. B.R. Ambedkara)ಜಯಂತಿಯನ್ನು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಚರಿಸಲು ಕ್ರಮವಹಿಸುವಂತೆ ಉಲ್ಲೇಖಿತ ಸುತ್ತೋಲೆಯಲ್ಲಿ ಈಗಾಗಲೇ ಸೂಚಿಸಲಾಗಿದೆ.
ಮುಂದುವರೆದು, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಮತ್ತು ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ໖: 14.04.20250 ಸೋಮವಾರದಂದು ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರವರ( Dr. B.R. Ambedkara)ಜಯಂತಿಯನ್ನು ಪ್ರತಿ ವರ್ಷದಂತೆ ಕಡ್ಡಾಯವಾಗಿ ಆಚರಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಕರು (ಅಭಿವೃದ್ಧಿ)ರವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಈ ಮೂಲಕ ತಿಳಿಸಿದೆ.
ಭಾರತ ಸಂವಿಧಾನದ ಶಿಲ್ಪಿ, ಮಹಾನ್ ಸಮಾಜ ಸುಧಾರಕ, ಮತ್ತು ಸಮಾನತೆಯ ಹೋರಾಟಗಾರರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಏಪ್ರಿಲ್ 14ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಕುರಿತು ಭಾಷಣ ಮಾಡಲು ಇಲ್ಲಿದೆ ಅವರ ಜೀವನಗಾಥೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು(Dr. B.R. Ambedkara) ಪ್ರತಿ ವರ್ಷದ ಏಪ್ರಿಲ್ 14ರಂದು, ದೇಶದಾದ್ಯಂತ ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರು ಭಾರತ ಸಂವಿಧಾನದ ಶಿಲ್ಪಿಯಾಗಿದ್ದಷ್ಟೇ ಅಲ್ಲದೆ, ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಚಿಂತಕರು. ಈ ಸಂದರ್ಭದಲ್ಲಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಯಲ್ಲಿ ಅಂಬೇಡ್ಕರ್ ಅವರ ಸಾಧನೆಗಳು ಹಾಗೂ ತತ್ವಗಳ ಬಗ್ಗೆ ಭಾಷಣಗಳನ್ನು ನಡೆಸುವುದು ಸಾಮಾನ್ಯ. ಈ ಲೇಖನದಲ್ಲಿಎಲ್ಲರಿಗೂ ಉಪಯುಕ್ತವಾಗುವಂತೆ ಕೆಲವೊಂದು ಚಿಕ್ಕದಾದ ಸರಳ ಭಾಷಣ ಮಾದರಿಗಳನ್ನು ನೀಡಲಾಗಿದೆ. ಇವು ಅವರನ್ನು ಗೌರವಿಸುವ ಜೊತೆಗೆ ಅವರ ವಿಚಾರಧಾರೆಯನ್ನು ಪೋಷಿಸುವ ಉದ್ದೇಶವನ್ನೂ ಹೊಂದಿವೆ.
ಅಂಬೇಡ್ಕರ್(Dr. B.R. Ambedkara)ಜಯಂತಿಯಂದು ಭಾಷಣದಲ್ಲಿ ನೀವು ಬಳಸಿಕೊಳ್ಳಬಹುದಾದ ಕೆಲವೊಂದು ತುಣುಕುಗಳು ಇಲ್ಲಿವೆ.
ಇಂದು ನಾವು ಭಾರತ ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್(Dr. B.R. Ambedkara)ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಅವರು ಕೇವಲ ರಾಜಕೀಯ ನಾಯಕನಷ್ಟೇ ಅಲ್ಲ, ಸಮಾಜ ಸುಧಾರಕ, ಜ್ಞಾನಿ, ಮತ್ತು ನ್ಯಾಯದ ಧ್ವಜಧಾರಿ ಕೂಡಾ ಆಗಿದ್ದರು. ಅವರ ಬದುಕು ನಮ್ಮೆಲ್ಲರಿಗೂ ದಾರಿ ತೋರಿಸುವ ಬೆಳಕು. ಇಡೀ ಜೀವನವನ್ನೇ ಅಸಮಾನತೆಯ ವಿರುದ್ಧ ಹೋರಾಟಕ್ಕೆ ಅರ್ಪಿಸಿದ ಡಾ. ಅಂಬೇಡ್ಕರ್ ಅವರ ಸಂದೇಶಗಳು ಇಂದು ನಮ್ಮ ಬದುಕಿಗೂ ಮಾರ್ಗದರ್ಶಿಯಾಗಿವೆ. ಅವರು ಬರೆದ ಸಂವಿಧಾನ ನಮ್ಮ ಹಕ್ಕುಗಳನ್ನು ಕಾಪಾಡುತ್ತಾ, ಸಮಾನತೆಗೆ ಮೂಲಸ್ತಂಭವಾಗಿ ನಿಲ್ಲುತ್ತಿದೆ. ನಾವು ಅವರ ತತ್ವಗಳನ್ನು ಅನುಸರಿಸಿ, ಒಂದು ನ್ಯಾಯಸಮ್ಮತ ಹಾಗೂ ಸಮಾನತೆಯ ಸಮಾಜವನ್ನು ನಿರ್ಮಿಸೋಣ.
ಡಾ. ಬಿ.ಆರ್. ಅಂಬೇಡ್ಕರ್(Dr. B.R. Ambedkara)ಅವರ ಜೀವನ ಮತ್ತು ಸಂದೇಶಗಳು ಎಲ್ಲ ಪೀಳಿಗೆಗಳಿಗೂ ಪ್ರೇರಣೆಯ ಮೂಲವಾಗಿವೆ. ಅವರ ಜಯಂತಿಯಂದು ನೀಡಲಾಗುವ ಭಾಷಣಗಳು ಕೇವಲ ಗೌರವ ಪ್ರದರ್ಶನವಷ್ಟೇ ಅಲ್ಲ ಅವರು ಬೋಧಿಸಿದ ನೈತಿಕ ಮೌಲ್ಯಗಳ ಪರಿಕಲ್ಪನೆಗಳನ್ನು ಯುವಜನತೆಗೆ ಪರಿಚಯಿಸುವ ಒಂದು ಅವಕಾಶವಾಗಿದೆ. ಅಂಬೇಡ್ಕರ್ ಅವರ ಕನಸುಗಳ ಭಾರತವನ್ನು ನಿರ್ಮಿಸುವ ಪ್ರಯತ್ನದಲ್ಲಿ ಇಂತಹ ಭಾಷಣಗಳು ಸ್ಫೂರ್ತಿಯ ತಳಹದಿಯಾಗಲಿ. ಅವರ 2 – “Educate, Agitate, Organize” -ಸದಾ ನಮ್ಮನ್ನು ಪ್ರೇರೇಪಿಸಲಿ.
ಇಂದು ನಾವು ಭಾರತ ಸಂವಿಧಾನದ ಶಿಲ್ಪಿ, ಮಹಾನ್ ಸಮಾಜ ಸುಧಾರಕ, ಮತ್ತು ಸಮಾನತೆಯ ಹೋರಾಟಗಾರರಾದ ಡಾ. ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸುತ್ತಿದ್ದೇವೆ. ಅವರು ತಮ್ಮ ಜೀವನವನ್ನು ದಲಿತರ ಹಕ್ಕುಗಳಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಶಿಕ್ಷಣದ ಮಹತ್ವವನ್ನು ಸಾರಲು ಅರ್ಪಿಸಿದ ಮಹಾನ್ ವ್ಯಕ್ತಿ. ಅವರ ತತ್ವಗಳು ಮತ್ತು ಸಾಧನೆಗಳು ಇಂದಿಗೂ ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಿದೆ. ಇಂದು ಅವರ ನೆನಪನ್ನು ಗೌರವಿಸುತ್ತಾ, ನಾವು ಸಹ ಅವರ ದಾರಿಯನ್ನು ಅನುಸರಿಸಿ, ಸಮಾನತೆ, ನ್ಯಾಯ ಮತ್ತು ಬುದ್ಧಿವಾದಿತನದ ಸಮಾಜ ನಿರ್ಮಾಣಕ್ಕಾಗಿ ಕೆಲಸಮಾಡೋಣ ಎಂಬ ಸಂಕಲ್ಪ ಮಾಡೋಣ.
ಇಂದು ಡಾ. ಬಿ.ಆರ್. ಅಂಬೇಡ್ಕರ್( Dr. B.R. Ambedkara)ಜಯಂತಿ. ಅವರು ನಮ್ಮ ಸಂವಿಧಾನದ ಶಿಲ್ಪಿ ಮಾತ್ರವಲ್ಲ, ಸಮಾನತೆ ಮತ್ತು ನ್ಯಾಯದ ಪ್ರತಿಕೃತಿಯೂ ಆಗಿದ್ದಾರೆ. ನಾವು ಅವರ ತತ್ವಗಳನ್ನು ಅನುಸರಿಸಿ ಒಬ್ಬ ಒಳ್ಳೆಯ ನಾಗರಿಕರಾಗೋಣ. ಡಾ. ಅಂಬೇಡ್ಕರ್ ಅವರು ಹೇಳಿದ ಮಾತಿನಂತೆ ‘ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಟ ಮಾಡಿರಿ. ಇದು ಇಂದು ನಮಗೆ ಹೆಚ್ಚು ಅನ್ವಯವಾಗುವ ಸಂದೇಶ. ಅವರ ಆದರ್ಶಗಳನ್ನು ಪಾಲಿಸಿ, ನಾವು ಸಮಾಜಕ್ಕೆ ಒಳ್ಳೆಯ ಸೇವೆ ಮಾಡೋಣ.