EEDS-ಶಿಕ್ಷಕರಿಗೆ ಮುಖ್ಯ ಮಾಹಿತಿ: ಸೇವಾ ವಿವರ ಗಣಕೀಕರಣ-2024.
ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ(1) ಸುತ್ತೋಲೆಯಲ್ಲಿ ರಾಜ್ಯದ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಶಿಕ್ಷಕರ ಸೇವಾ ವಿವರಗಳನ್ನು ಆಯಾ ಶಾಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಲಾಗಿನ್ ಮೂಲಕವೇ ಗಣಕೀಕರಿಸುವ ಸಂಬಂದ ಆಡಳಿತ ಮಂಡಳಿಗಳಿಂದ ಸೇವಾ ವಹಿಗಳನ್ನು ಪಡೆದು ಪರಿಶೀಲಿಸಿ ಕರಾರುವಾಕ್ಕಾದ ಸೇವಾ ವಿವರಗಳನ್ನು ತಮ್ಮ ಲಾಗಿನ್ ಮೂಲಕ ಗಣಕೀಕರಿಸಲು ತಿಳಿಸಲಾಗಿರುತ್ತದೆ.
ಪ್ರಸ್ತುತ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಅನುದಾನಿತ ಶಿಕ್ಷಕರ ಮಾಹಿತಿಯನ್ನು ಪರಿಶೀಲಿಸಲಾಗಿ ಬೋಧಕ/ಬೋಧಕೇತರ ನೌಕರರ ಸೇವಾ ವಿವರಗಳು ಸಮರ್ಪಕವಾಗಿ ಗಣಕೀಕರಣಗೊಂಡಿಲ್ಲದಿರುವುದನ್ನು ಗಮನಿಸಲಾಗಿದೆ. ಖಜಾನೆಯಿಂದ ವೇತನ ಸೆಳೆಯುತ್ತಿರುವ ಅನುದಾನಿತ ಶಾಲಾ ಸಿಬ್ಬಂದಿಯು ಯಾವುದೇ ಕಾರಣಕ್ಕೂ ಇ.ಇ.ಡಿ.ಎಸ್ ತಂತ್ರಾಂಶದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣಕ್ಕಾಗಿ ಅವಕಾಶ ಕಲ್ಪಿಸಲಾಗಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಸದರಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಇದರಿಂದ ಹೆಚ್. ಆರ್.ಎಮ್ ಎಸ್ ನಲ್ಲಿನ ಕಾರ್ಯನಿರತ ಶಿಕ್ಷಕರಿಗೂ ಇ.ಇ.ಡಿ.ಎಸ್ ನಲ್ಲಿನ ಮಾಹಿತಿಗೂ ಹೆಚ್ಚು ವ್ಯತ್ಯಾಸವಿರುತ್ತದೆ.
https://mahitikannada.com/history-major-historians-2024/
ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ಹಾಗೂ ಪ್ರಸ್ತುತ ಉಲ್ಲೇಖ (2)ರಂತೆ ಅನುದಾನಿತ ಶಾಲಾಶಿಕ್ಷಕರ ನೇಮಕಾತಿ ಸಂಬಂಧ ಹೊರಡಿಸಲಾಗಿರುವ ಆದೇಶದನ್ವಯ ನೇಮಕಾತಿ ಪ್ರಕ್ರಿಯೆಯನ್ನು ತಂತ್ರಾಂಶದ ಮೂಲಕ ನಿರ್ವಹಿಸಬೇಕಿರುತ್ತದೆ. ಅದರಂತೆ ಪ್ರಥಮ ಹಂತದಲ್ಲಿ ರಾಜ್ಯದ ಎಲ್ಲಾ ಅನುದಾನಿತ ಶಾಲೆಗಳ ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ/ಬೋಧಕೇತರ ನೌಕರರ ಮಾಹಿತಿಗಳನ್ನು ಇ.ಇ.ಡಿ.ಎಸ್. ತಂತ್ರಾಂಶದಲ್ಲಿ ಇಂದೀಕರಿಸಿ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕೆಳಕಂಡಂತೆ ಕ್ರಮ ವಹಿಸಲು ಸೂಚಿಸಿದೆ.