English Mediam:ರಾಜ್ಯದ 4,134 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ(English Mediam) ಆರಂಭ!
English Mediam: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಕಾರ್ಯಕ್ರಮಗಳ ಭಾಗವಾಗಿ ರಾಜ್ಯ ಸರ್ಕಾರ ಇದೇ ಶೈಕ್ಷಣಿಕ ಸಾಲಿನಿಂದ (2025-26) ಅನ್ವಯವಾಗುವಂತೆ ರಾಜ್ಯದಲ್ಲಿ ಒಟ್ಟು 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ ಬೋಧಿಸುತ್ತಿರುವ ಕನ್ನಡ ಮಾಧ್ಯಮದ ಜೊತೆ ಜೊತೆಯಲ್ಲೇ ಆಂಗ್ಲ ಮಾಧ್ಯಮದಲ್ಲಿ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.
2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಈ ವರ್ಷ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ 2019-20ನೇ ಸಾಲಿನಿಂದ ಆಂಗ್ಲ ಮಾಧ್ಯಮ(English Mediam) ತರಗತಿಗಳನ್ನು ಆರಂಭಿಸಲಾಯಿತು. 2024-25ನೇ ಸಾಲಿನಲ್ಲಿ 1,792 ಶಾಲೆಗಳಿಗೆ ಆಂಗ್ಲ ಮಾಧ್ಯಮ ತರಗತಿಗಳಿಗೆ ಅನುಮತಿ ನೀಡಿರುವುದು ಸೇರಿ ಇಲ್ಲಿಯವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಪಿಎಂಶ್ರೀ ಶಾಲೆಗಳು ಸೇರಿ ಒಟ್ಟು 4,404 ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಆರಂಭಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿಯೇ 1,465 ಶಾಲೆಗಳಿವೆ.
ಪ್ರೌಢಶಾಲೆಗಳಲ್ಲಿಯೂ ಆಂಗ್ಲ ಮಾಧ್ಯಮ(English Mediam).
ವಿದ್ಯಾರ್ಥಿ ಗಳಲ್ಲಿ ಮಾತೃಭಾಷೆಯ ಜತೆಗೆ ಆಂಗ್ಲ ಭಾಷೆಯ ಕೌಶಲ್ಯವನ್ನು ಬೆಳೆಸಲು ಆರಂಭಿಸಲಾಗುತ್ತಿದೆ.
English Mediam(ಆಂಗ್ಲ ಮಾಧ್ಯಮ) ಆಯ್ಕೆಗೆ ಮಾನದಂಡಗಳು ಏನು.
• ಹೊಸದಾಗಿ ಆಂಗ್ಲ ಮಾಧ್ಯಮ(English Mediam) ತರಗತಿಗೆ ಅನುಮತಿ ನೀಡಲು ರಾಜ್ಯದ ಪ್ರತಿ ತಾಲೂಕು/ವಲಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಶಾಲೆಗಳ ಪೈಕಿ ಮೊದಲ 15 ಶಾಲೆಗಳನ್ನು ಪರಿಗಣಿಸಲಾಗಿದೆ.
• ಒಂದು ವೇಳೆ ತಾಲೂಕು/ವಲಯದಲ್ಲಿ ಇಂತಹ 15 ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ಎಲ್ಲಾ ಶಾಲೆಗಳನ್ನು ಪರಿಗಣಿಸುವಂತೆ ಸೂಚಿಸಲಾಗಿದೆ.
• ಅಗತ್ಯ ಸಂಪನ್ಮೂಲ ಹೊಂದಿರಬೇಕು. ಶಾಲಾ ಶಿಕ್ಷಕರ ಹುದ್ದೆಗಳ ಹೆಚ್ಚುವರಿ ಪ್ರಕ್ರಿಯೆ ಚಾಲೆನೆಯಲ್ಲಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರನ್ನು ಒದಗಿಸುವಂತೆ ಸೂಚಿಸಲಾಗಿದೆ.
• ಆಂಗ್ಲ ಮಾಧ್ಯಮ(English Mediam) ತರಗತಿಗಳನ್ನು ಆರಂಭಿಸುವುದರಿಂದ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಆರ್ಥಿಕ ಹೊರೆಯಾಗುವುದಿಲ್ಲ ಎಂಬುದನ್ನು ತಿಳಿಸಿದೆ.