EPFO wage ceiling revision: EPFO ಗರಿಷ್ಠ ವೇತನ ಮಿತಿ ₹21,000ಗೆ ಏರಿಕೆ ಸಾಧ್ಯತೆ, ₹10,050ಗೆ ಹೆಚ್ಚಲಿದೆ ಖಾಸಗಿ ಉದ್ಯೋಗಿಗಳ ಪಿಂಚಣಿ-2024.

EPFO wage ceiling revision: EPFO ಗರಿಷ್ಠ ವೇತನ ಮಿತಿ ₹21,000ಗೆ ಏರಿಕೆ ಸಾಧ್ಯತೆ, ₹10,050ಗೆ ಹೆಚ್ಚಲಿದೆ ಖಾಸಗಿ ಉದ್ಯೋಗಿಗಳ ಪಿಂಚಣಿ.

EPFO wage ceiling revision:

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

EPFO wage ceiling revision: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನ ಮಿತಿಯನ್ನು ಈಗಿರುವ 15 ಸಾವಿರ ರೂ.ನಿಂದ 21 ಸಾವಿರ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ 2014ರಲ್ಲಿ ವೇತನ ಮಿತಿಯನ್ನು 6,500 ರೂ.ಗಳಿಂದ ಈಗಿನ 15,000 ರೂ.ಗೆ ಹೆಚ್ಚಿಸಲಾಗಿದ್ದು, ಪಿಂಚಣಿ ಲೆಕ್ಕಾಚಾರಕ್ಕೆ ದಶಕದ ಬಳಿಕ ವೇತನ ಮಿತಿ ಏರಿಕೆಯಾಗುತ್ತಿದೆ. ಇದರಿಂದ ಪಿಂಚಣಿ ಏರಿಕೆಗೆ ಹಾದಿ ಸುಗಮವಾಗಲಿದೆ.

ಪ್ರಮುಖ ವಿಷಯಗಳು:

  • ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನ ಮಿತಿ ಪರಿಷ್ಕರಣೆ
  • ಈಗಿರುವ 15 ಸಾವಿರ ರೂ.ನಿಂದ 21 ಸಾವಿರ ರೂ.ಗೆ ಏರಿಕೆ ಮಾಡುವ ಸಾಧ್ಯತೆ
  • ಈ ಹಿಂದೆ 2014ರಲ್ಲಿ ವೇತನ ಮಿತಿ 6,500 ರೂ.ಗಳಿಂದ ಈಗಿನ 15,000 ರೂ.ಗೆ ಹೆಚ್ಚಳ
  • ಪಿಂಚಣಿ ಲೆಕ್ಕಾಚಾರಕ್ಕೆ ದಶಕದ ಬಳಿಕ ವೇತನ ಮಿತಿ ಏರಿಕೆ, ಪಿಂಚಣಿ ಏರಿಕೆಗೆ ಹಾದಿ ಸುಗಮ

EPFO wage ceiling revision: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನ ಮಿತಿಯನ್ನು ಸದ್ಯದಲ್ಲೇ ಈಗಿರುವ 15 ಸಾವಿರ ರೂ. ನಿಂದ 21 ಸಾವಿರ ರೂ.ಗೆ ಏರಿಸುವ ಸಾಧ್ಯತೆ ಇದೆ. ಈ ಸಂಬಂಧ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಹಣಕಾಸು ಇಲಾಖೆಗೆ ಕಳೆದ ಏಪ್ರಿಲ್‌ನಲ್ಲಿ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ದೊರೆಯುವುದು ಬಹುತೇಕ ಖಚಿತವಾಗಿದೆ.

ಈ ಹಿಂದೆ 2014ರಲ್ಲಿ ವೇತನ ಮಿತಿಯನ್ನು 6,500 ರೂ.ಗಳಿಂದ ಈಗಿನ 15,000 ರೂ.ಗೆ ಹೆಚ್ಚಿಸಲಾಗಿತ್ತು. ಹೀಗಾಗಿ ಪಿಂಚಣಿ ಲೆಕ್ಕಾಚಾರಕ್ಕೆ ದಶಕದ ಬಳಿಕ ವೇತನ ಮಿತಿ ಏರಿಕೆಯಾಗುತ್ತಿದೆ.

ನೌಕರರ ಮೇಲೆ ಏನು ಪರಿಣಾಮ?:

ವೇತನ ಮಿತಿ ಹೆಚ್ಚಳವು ನೌಕರರ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವ ಮೊತ್ತವನ್ನು ಹೆಚ್ಚಿಸುತ್ತದೆ. ಆದರೆ, ನೌಕರರ ಕೈ ಸೇರುವ ವೇತನ (ಟೇಕ್‌ ಹೋಮ್‌ ಸ್ಯಾಲರಿ) ಕೊಂಚ ಇಳಿಕೆಯಾಗಲಿದೆ. ಸಾಮಾನ್ಯವಾಗಿ, ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ರಷ್ಟನ್ನು ಉದ್ಯೋಗಿ ಹಾಗೂ ಉದ್ಯೋಗದಾತರು ಪಾವತಿಸಬೇಕು.

ಉದ್ಯೋಗಿಯ ಪಾಲನ್ನು ಸಂಪೂರ್ಣವಾಗಿ ಇಪಿಎಫ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಉದ್ಯೋಗದಾತರ ಪಾಲಿನ ಶೇ. 8.33ರಷ್ಟು ಪಿಂಚಣಿ ಯೋಜನೆಗೆ ಜಮಾ ಮಾಡಲಾಗುತ್ತದೆ. ವೇತನ ಮಿತಿ ಹೆಚ್ಚಳದಿಂದ ಉದ್ಯೋಗಿ ಮತ್ತು ಉದ್ಯೋಗದಾತರ ಪಾಲು ಅಧಿಕವಾಗುತ್ತದೆ. ಇದರಿಂದ ಇಪಿಎಫ್‌ಒ ಮತ್ತು ಉದ್ಯೋಗಿಳ ಪಿಂಚಣಿ ಯೋಜನೆ (ಇಪಿಎಸ್‌) ಖಾತೆಗಳಲ್ಲಿ ಠೇವಣಿ ಇಡುವ ಮೊತ್ತವನ್ನು ಹೆಚ್ಚಿಸುತ್ತದೆ. ಇದು ಉದ್ಯೋಗಿಗೆ ನಿವೃತ್ತಿಯ ಸಮಯದಲ್ಲಿ ಅವರ ಭವಿಷ್ಯ ನಿಧಿ ಮೀಸಲು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ನಿವೃತ್ತಿ ವೇಳೆ 10,000 ರೂ.ವರೆಗೆ ಪಿಂಚಣಿ:

ಪ್ರಸ್ತುತ 15,000 ರೂ. ವೇತನದ ಸೀಲಿಂಗ್‌ನೊಂದಿಗೆ ಗರಿಷ್ಠ ಇಪಿಎಸ್ ಪಿಂಚಣಿಯ ಲೆಕ್ಕ ಹೀಗಿದೆ,

ಇಪಿಎಸ್‌ ಪೆನ್ಶನ್‌= 15,000 ರೂ. x 35 / 70 = 7,500 ರೂ. ಪ್ರತಿ ತಿಂಗಳು

ಪ್ರಸ್ತಾವಿತ ವೇತನ ಸೀಲಿಂಗ್‌ 21,000 ರೂ. ಏರಿಕೆಯಿಂದ ಹೊಸ ಪಿಂಚಣಿ ಹೀಗಾಗಲಿದೆ,

ಇಪಿಎಸ್‌ ಪೆನ್ಶನ್‌= 21,000 ರೂ. x 35 / 70 = 10,050 ರೂ. ಪ್ರತಿ ತಿಂಗಳು

ಇದರಿಂದ ಇಪಿಎಸ್‌ ಪಿಂಚಣಿಯಲ್ಲಿ 2,550 ರೂ. ಏರಿಕೆಯಾಗಲಿದೆ. ಇದರಿಂದ ಅರ್ಹ ಉದ್ಯೋಗಿಗಳಿಗೆ ನಿವೃತ್ತಿ ಆದಾಯ ಗಣನೀಯವಾಗಿ ಏರಿಕೆಯಾಗಲಿದೆ.

ಧನ್ಯವಾದಗಳು ….

 

WhatsApp Group Join Now
Telegram Group Join Now

Leave a Comment