Heating staff,ಬಿಸಿಯೂಟ ಸಿಬ್ಬಂದಿಗೆ ಶುಭ ಸುದ್ದಿ – ಅನ್ನ ಬಡಿಸಿದ ಕೈಗೆ ನಿವೃತ್ತಿ ಬಳಿಕ ಉತ್ತಮ ಇಡುಗಂಟು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ -2025.
Heating staff: ಬಿಸಿಯೂಟ ತಯಾರಕರಿಗೆ(Heating staff) 60 ವರ್ಷ ದಾಟಿದ ಬಳಿಕ ನಿವೃತ್ತಿಗೊಳಿಸಿ ಸಹಾಯ ಧನ ನೀಡಲಾಗುತ್ತದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಹೊಸ ಪ್ರಕಟಣೆ ಹೊರಬಿದ್ದಿದೆ. 5 ವರ್ಷದಿಂದ 15 ವರ್ಷ ಸೇವೆ ಸಲ್ಲಿಸಿದವರಿಗೆ 30,000 ರೂ., 15 ವರ್ಷಕ್ಕಿಂತ ಹೆಚ್ಚಿನವರಿಗೆ 40,000 ರೂ. ಇಡುಗಂಟು ನೀಡಲಾಗುತ್ತದೆ. ರಾಷ್ಟ್ರಿಯ ಪೋಷಣ್ ಯೋಜನೆಯಡಿ 60 ವರ್ಷ ದಾಟಿದ ತಯಾರಕರಿಗೆ ಈ ಸೌಲಭ್ಯ ದೊರೆಯುತ್ತದೆ.
Heating staff, ಮಾಗಡಿ ಗ್ರಾಮಾಂತರ.
ಶಾಲೆಗಳ ಮಧ್ಯಾಹ್ನದ ಬಿಸಿಯೂಟ ತಯಾರಕರಿಗೆ(Heating staff) ತಮ್ಮ ನಿವೃತ್ತಿ ಬಳಿಕ ಇಡುಗಂಟು ಎಂಬ ಸಹಾಯಧನ ಕೈ ಸಿಗಲಿದೆ. ಪ್ರಧಾನಮಂತ್ರಿ ಪೋಷಣ್ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಸರಕಾರಿ, ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ( Heating staff) 60 ವರ್ಷ ತುಂಬಿದ ಬಳಿಕ ನಿವೃತ್ತಿಗೊಳಿಸಿ ಅಲ್ಪ ಮೊತ್ತದ ಸಹಾಯ ಧನ ಕೈ ಸೇರುವಂತೆ ಮಾಡಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
- Read more…
Govt Primary School: 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ ಮಾಡುವ ಬಗ್ಗೆ.
5 ವರ್ಷ ಮೇಲ್ಪಟ್ಟು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ ಒಂದು ಬಾರಿ 30000 ರೂ., 15 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದವರಿಗೆ ಒಂದು ಬಾರಿ 40000 ರೂ. ಇಡುಗಂಟು ಕೊಡಲು ನಿರ್ಧರಿಸಲಾಗಿದೆ. ಪ್ರಧಾನ ಮಂತ್ರಿ ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ದಿನನಿತ್ಯ ರಾಜ್ಯದ 55,000 ಸರಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 52,153 ಅಡುಗೆ ತಯಾರಕರು( Heating staff) 60 ವರ್ಷ ದಾಟಿದ ಬಳಿಕ ಮತ್ತು ಮಾರ್ಚ್ 2022 ರ ನಂತರ ನಿವೃತ್ತಿಯಾದ ಎಲ್ಲರಿಗೂ ಹಾಗೂ ನಿಧನರಾದ ಅಡುಗೆ ಸಹಾಯಕಿಯರಿಗೂ ಈ ಯೋಜನೆ ಅನ್ವಯವಾಗಲಿದೆ.
Heating staff ಕ್ಷೀರಭಾಗ್ಯ ಯೋಜನೆ ಹಣ ಬಳಕೆ.
ತಾಲೂಕು ಪಂಚಾಯಿತಿಯ ಕ್ಷೀರ ಭಾಗ್ಯ ಯೋಜನೆಯಡಿ ಸರಕಾರ ಬಜೆಟ್‌ನಲ್ಲಿ ನೀಡುತ್ತಿರುವ ಅನುದಾನದಲ್ಲಿಯೇ ಇಡಿ ಗಂಟಿನ ಹಣ ನೀಡಲು ಸೂಚಿಸಿದೆ. ಪ್ರತಿ ವರ್ಷ 60 ವರ್ಷ ತುಂಬಿ ನಿವೃತ್ತಿ ಹೊಂದುವ ಬಿಸಿಯೂಟ ತಯಾರಕರ( Heating staff) ಪಟ್ಟಿಯನ್ನು ಆಗಸ್ಟ್ 20ರ ಒಳಗಾಗಿಯೇ ಇಲಾಖೆಗೆ ಸಲ್ಲಿಸಲು ಸೂಚನೆ ನೀಡಿದೆ.
Heating staff ಯಾರು ಏನಂತಾರೆ?
ಬಿಸಿಯೂಟ ತಯಾರಕರು(Heating staff) 2022 ನೇ ವರ್ಷದಿಂದ ನಿವೃತ್ತಿಯ ಇಡುಗಂಟಿನ ಕುರಿತು ಪ್ರತಿಭಟನೆ ನಡೆಸಿದ್ದರು. ನಿವೃತ್ತಿ ಬಳಿಕ ಕನಿಷ್ಠ ಪಕ್ಷ 1.5 ಲಕ್ಷ ಇಡಿ ಗಂಟು ಸೌಲಭ್ಯ ಒದಗಿಸಬೇಕು ಹಾಗೂ ಅಪಘಾತ ವಿಮೆ ಸೌಲಭ್ಯ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಅಡುಗೆಯವರು ನಿವೃತ್ತಿ ಬಳಿಕ ಬರಿಗೈನಲ್ಲಿ ಮನೆಗೆ ಹೋಗುವ ಬದಲು ಸರಕಾರ ಇಡುಗಂಟು ಪಡೆಯುವುದು ಕೊಂಚ ನೆಮ್ಮದಿ ತರುತ್ತದೆ. ಈ ಯೋಜನೆ ಸ್ವಾಗತಾರ್ಹ.
ಸಾಕಷ್ಟು ವರ್ಷ ಒಲೆ ಮುಂದೆ ನಿಂತು ದುಡಿದು ದಣಿದಿದ್ದೇವೆ. ಪಿಎಫ್, ಪಿಂಚಣಿ ಇಲ್ಲ ಈಗ ಇಡುಗಂಟು ಕೊಡುತ್ತಿರುವುದು ಸಂತಸ ತಂದಿದೆ.