Government Employee: ಸರ್ಕಾರಿ ನೌಕರರಿಗೆ(Government Employee) ಸರ್ವೋತ್ತಮ ಸೇವಾ ಪ್ರಶಸ್ತಿ, ನಾಮ ನಿರ್ದೇಶನದ ನಿಯಮಗಳು ಇಂತಿದೆ.

Government Employee: ಸರ್ಕಾರಿ ನೌಕರರಿಗೆ(Government Employee) ಸರ್ವೋತ್ತಮ ಸೇವಾ ಪ್ರಶಸ್ತಿ, ನಾಮ ನಿರ್ದೇಶನದ  ನಿಯಮಗಳು ಇಂತಿದೆ.

Government Employee

Government Employee: ರಾಜ್ಯ ಸರ್ಕಾರ ಸರ್ಕಾರಿ ಅಧಿಕಾರಿ/ ನೌಕರರಿಗೆ( Government Employee) ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಲಿದೆ. 2024 ಮತ್ತು 2025ನೇ ಸಾಲಿನಲ್ಲಿ ಈ ಪ್ರಶಸ್ತಿಯನ್ನು ನೀಡಲು ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ಯಾರು-ಯಾರು ಪ್ರಶಸ್ತಿಗಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು, ಅರ್ಹತೆಗಳೇನು?, ಹೇಗೆ ಅರ್ಜಿ ಸಲ್ಲಿಸಬೇಕು? ಮುಂತಾದ ಈ ಬಗ್ಗೆ ಸಂಪೂರ್ಣ ವಿವರಗಳನ್ನು ಸುತ್ತೋಲೆಯ ಮೂಲಕ ತಿಳಿಸಲಾಗಿದೆ. ಆಸಕ್ತ ಸರ್ಕಾರಿ ನೌಕರರು ನಾಮ ನಿರ್ದೇಶನ ಸಲ್ಲಿಕೆ ಮಾಡಬಹುದು.

ಈ ಕುರಿತು ಬಿ. ಎಸ್. ಲಕ್ಷ್ಮಣ, ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ), ಸಿಆಸುಇ (ಆಸು-ತರಬೇತಿ ಮತ್ತು ಮಾಹಿತಿ ಹಕ್ಕು ಶಾಖೆ) ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ 2024 ಮತ್ತು 2025ನೇ ಸಾಲಿನ ಸರ್ಕಾರಿ ಅಧಿಕಾರಿ/ ನೌಕರರಿಗೆ ಕರ್ನಾಟಕ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಸಲ್ಲಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಸುತ್ತೋಲೆಯಲ್ಲಿ 2024 ಮತ್ತು 2025ನೇ ಸಾಲಿನ ಕರ್ನಾಟಕ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ದಿನಾಂಕ 28-04-2025ರ ಒಳಗಾಗಿ ತಮ್ಮ ಅರ್ಜಿಗಳನ್ನ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು. ಮುಂದುವರೆದು, ಸದರಿ ಸುತ್ತೋಲೆಯನ್ನು ಭಾಗಶ: ಪರಿಷ್ಕರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಕ್ರಮವಹಿಸುವಂತೆ ತಿಳಿಸಲಾಗಿದೆ ಎಂದು ಹೇಳಿದೆ.

Government Employee:ಸರ್ಕಾರಿ ನೌಕರರಿಗೆ(Government Employee) ಸರ್ವೋತ್ತಮ ಸೇವಾ ಪ್ರಶಸ್ತಿ, ನಾಮ ನಿರ್ದೇಶನದ  ನಿಯಮಗಳು ಈ ಕೆಳಕಂಡಂತೆ ಇದೆ.

Government Employee

• 2024ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2023ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ/ ಸಾಧನೆಯನ್ನು ಪರಿಗಣಿಸಲಾಗುವುದು. ಹಾಗೆಯೇ, 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2024ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ/ ಸಾಧನೆಯನ್ನು ಪರಿಗಣಿಸಲಾಗುವುದು.

• 2024 ಹಾಗೂ 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್‌ಲೈನ್‌ನಲ್ಲಿ ನಾಮ ನಿರ್ದೇಶನವನ್ನು ಸಲ್ಲಿಸಲು ದಿನಾಂಕ 14-04-2025 ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ.

• 2023ನೇ ಸಾಲಿನಲ್ಲಿ ಯಾವ ಜಿಲ್ಲೆಗಳು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಲ್ಲವೋ ಅವರೂ ಸಹ ಪ್ರಕ್ರಿಯೆಯನ್ನು ದಿನಾಂಕ 16-04-2025 ರೊಳಗೆ ಪೂರ್ಣಗೊಳಿಸುವುದು ಮತ್ತು ಆಯ್ಕೆ ಪೂರ್ಣಗೊಂಡ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

• 2024 ಹಾಗೂ 2025ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ಆಯ್ಕೆಯನ್ನು ಪೂರ್ಣಗೊಳಿಸಿ, ಪೂರ್ಣಗೊಂಡ ಎರಡು ವರ್ಷಗಳ ಆಯ್ಕೆ ಪಟ್ಟಿಯನ್ನು ದಿನಾಂಕ 16-04-2025ರೊಳಗೆ ಸರ್ಕಾರಕ್ಕೆ ಸಲ್ಲಿಸುವುದು.

• 2024 ಹಾಗೂ 2025ನೇ ಸಾಲಿನ ಎರಡು ವರ್ಷಗಳಿಗೆ ಪ್ರತಿ ವರ್ಷಕ್ಕೆ ತಲಾ ಇಬ್ಬರಂತೆ ಒಟ್ಟು 4 ಜನ ಅರ್ಹ ಅಧಿಕಾರಿ/ ನೌಕರರನ್ನು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಪರಿಗಣಿಸಲು ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ನಾಮ ನಿರ್ದೇಶನಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ದಿನಾಂಕ 16-04-2025ರೊಳಗೆ ಸರ್ಕಾರಕ್ಕೆ ವಿಳಂಬವಿಲ್ಲದೇ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಸಲ್ಲಿಸುವುದು.

• ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖಾ ಹಂತ/ ನಿರ್ದೇಶಕರ ಹಂತ ಮತ್ತು ಸಚಿವಾಲಯ ಹಂತದ ಅರ್ಹ ಅಧಿಕಾರಿ/ ನೌಕರರು ಸಹ ಆನ್‌ಲೈನ್ ಮೂಲಕ ರಾಜ್ಯ ಮಟ್ಟದ ಪ್ರಶಸ್ತಿಗೆ ದಿನಾಂಕ 14-04-2025ರೊಳಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬಹುದು.

• ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನವನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಬಗ್ಗೆ ತಮ್ಮ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವುದು.

• ಆಯ್ಕೆ ಪ್ರಕ್ರಿಯೆಯನ್ನು ಈ ಹಿಂದಿನ ಸುತ್ತೋಲೆಯಲ್ಲಿ ತಿಳಿಸಿರುವಂತೆ ಜಿಲ್ಲಾವಾರು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಅನುಮೋದನೆಯೊಂದಿಗೆ ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ)ಗೆ ಸಲ್ಲಿಸುವುದು.

• ಸರ್ಕಾರದ ಆದೇಶ ದಿನಾಂಕ 19-03-2022ರ ಮಾರ್ಗಸೂಚಿಗಳನ್ನು ಅನುಸರಿಸತಕ್ಕದ್ದು.

WhatsApp Group Join Now
Telegram Group Join Now