Goverment Order: ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು.

Goverment Order: ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು.

Government Order:

 

Government Order:ಓದಲಾಗಿದೆ:-  1. ದಿನಾಂಕ 22.07.2024ರ ಸರ್ಕಾರಿ ಆದೇಶ ಸಂಖ್ಯೆ: ಆಇ 21 ಎಸ್‌ಆರ್‌ಪಿ 2024.

2. ದಿನಾಂಕ 17.08.2024ರ ಅಧಿಸೂಚನೆ ಸಂಖ್ಯೆ: ಆಇ 21 ಎಸ್‌ಆರ್‌ಪಿ 2024.

ಪ್ರಸ್ತಾವನೆ:-

ರಾಜ್ಯ ಸರ್ಕಾರದ ನೀತಿಯಂತೆ. 7ನೇ ರಾಜ್ಯ ವೇತನ ಆಯೋಗದ ಸಂಪುಟ 1 ರಲ್ಲಿನ ಶಿಫಾರಸ್ಸುಗಳನ್ನು ಮೇಲೆ (1) ರಲ್ಲಿ ಓದಲಾದ ದಿನಾಂಕ 22.07.2024ರ ಸರ್ಕಾರಿ ಆದೇಶದಲ್ಲಿ ನಮೂದಿಸಿರುವಂತೆ ಅಂಗೀಕರಿಸಲಾಗಿರುತ್ತದೆ. ಅದರಂತೆ, ಸದರಿ ಆದೇಶದಲ್ಲಿ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು 25 ಪರಿಷ್ಕೃತ ಸ್ಥಾಯಿ ವೇತನ ಶ್ರೇಣಿಗಳನ್ನು, ವೇತನ ಸಂಬಂಧಿತ ಭತ್ಯೆಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ.

ಮೇಲೆ (2) ರಲ್ಲಿ ಓದಲಾದ ದಿನಾಂಕ 17.08.2024ರ ಅಧಿಸೂಚನೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಅಧಿಸೂಚಿಸಲಾಗಿರುತ್ತದೆ. ಆದುದರಿಂದ, ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸುವ, ಪಿಂಚಣಿ ಪರಿಷ್ಕರಣೆ ಮತ್ತು ವೇತನ ಸಂಬಂಧಿತ ಭತ್ಯೆಗಳ ಪರಿಷ್ಕರಣೆ ಕುರಿತಂತೆ ವಿಸ್ತತವಾದ ಆದೇಶಗಳನ್ನು ಹೊರಡಿಸುವುದು ಅಗತ್ಯವೆಂದು ಪರಿಗಣಿಸಲಾಗಿರುತ್ತದೆ. ಅದರಂತೆ, ರಾಜ್ಯ ಸರ್ಕಾರವು ಈ ಕೆಳಕಂಡ ಆದೇಶಗಳನ್ನು ಹೊರಡಿಸಲು ಹರ್ಷಿಸುತ್ತದೆ.

WhatsApp Group Join Now
Telegram Group Join Now