Govt Primary School: 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ ಮಾಡುವ ಬಗ್ಗೆ.

Govt Primary School: 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ ಮಾಡುವ ಬಗ್ಗೆ.

Govt Primary School

Govt Primary School:ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರಸ್ತೆಯ 2024-25ನೇ ಸಾಲಿಗೆ ಶಾಲಾನುದಾನ ಕಾರ್ಯಕ್ರಮದಡಿ ” 42136 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ರೂ. 11459.00 ಲಕ್ಷಗಳು ಅನುಮೋದನೆಯಾಗಿರುತ್ತದೆ.

ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ (2 ಹಂತದ) ಶಾಲೆಗಳನ್ನು ಹೊರತುಪಡಿಸಿ 41933 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೇಕಡಾ 20 ರಷ್ಟು ಶಾಲಾನುದಾನವನ್ನು ರೂ. 22,67,50,000/- ಗಳನ್ನು ಈಗಾಗಲೇ ಉಲ್ಲೇಖ(2) ಮೊದಲ ಕಂತಿನ ಶಾಲಾನುದಾ ಬಿಡುಗಡೆ ಮಾಡಲಾಗಿದೆ.

ಮುಂದುವರೆದು ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ (4 ಹಂತದ) ಶಾಲೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ ZERO ENROLMENT ಹೊಂದಿರುವ ಶಾಲೆಗಳನ್ನು ಹೊರತುಪಡಿಸಿ 41392 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಎರಡನೇ ಕಂತಿನ ಶೇಕಡಾ 20 ರಷ್ಟು ಶಾಲಾನುದಾನವನ್ನು ರೂ. 22,47,75,000/- ಗಳನ್ನು (ಇಪ್ಪತ್ತೆರಡು ಕೋಟಿ ನಲವತ್ತೇಳು ಲಕ್ಷದ ಎಪ್ಪತ್ತೈದು ) 35 ដ PRABANDH COMPONENT CODE: 5.4.1 ซอง PFMS-CSS COMPONENT CODE F.01.18 ರಡಿ ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಅನುಬಂಧ-1 ರಂತೆ ಜಿಲ್ಲಾವಾರು ನಿಗದಿಪಡಿಸಿದೆ.

Govt Primary School: ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಮಂಜೂರಾದ ಶಾಲಾನುದಾನದಲ್ಲಿ ಈ ಕೆಳಕಂಡ ಉದ್ದೇಶಗಳಿಗೆ ನಿಯಮಗಳನ್ನು ಅನುಸರಿಸಿ ಪಿನಿಯೋಗಿಸುವುದು.

1. ಕಛೇರಿಯ ದಾಖಲೆ ಪುಸ್ತಕಗಳು (ದಾಖಲಾತಿ ಪುಸ್ತಕ, ಹಾಳೆಗಳು, ಹಾಜರಾತಿ ಪುಸ್ತಕ, ವರ್ಗಾವಣೆ ಪತ್ರ, ಅಂಕಪಟ್ಟಿ ಇತರೆ.) 2) ತರಗತಿಗೆ ಅಗತ್ಯವಿರುವ ಅಂಕಪಟ್ಟಿ ಇತರ (ಸೀಮೆಸುಣ್ಣ, ಡಸ್ಟರ್, ಇತರೆ), 3) ಬೋಧನೋಪಕರಣಗಳ ತಯಾರಿಕೆ, ಬೋಧನೋಪಕರಣಗಳ ಖರೀದಿ, 4) ಕಟ್ಟಡದ ಸಣ್ಣ-ಪುಟ್ಟ ದುರಸ್ತಿ (ಬಾಗಿಲು, ಕಿಟಕಿ, ಶೌಚಾಲಯ), 5) ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, 6) ಪೀಠೋಪಕರಣಗಳ ದುರಸ್ತಿ, 7) ಕ್ರೀಡಾ ಸಾಮಗ್ರಿಗಳ ಖರೀದಿದುರಸ್ತಿ, 8) ವಿದ್ಯುತ್ ದೂರವಾಣಿ ಬಿಲ್ ಪಾವತಿ/ದುರಸ್ತಿ, 9) ದಿನಪತ್ರಿಕೆ ಮತ್ತು ವಾರ ಪತ್ರಿಕೆ ವೆಚ್ಚ, 10) ಶಾಲಾ ಸ್ವಚ್ಛತಾ ವೆಚ್ಚ,

ಬಿಡುಗಡೆಗೊಳಿಸಲಾದ ಶಾಲಾನುದಾನದ ಶೇಕಡಾ 10 ರಷ್ಟು ಮೊತ್ತವನ್ನು ಶಾಲಾ ಸ್ವಚ್ಚತಾ ಕಾರ್ಯಚಟುವಟಿಕೆಗಳಿಗೆ ಕಡ್ಡಾಯವಾಗಿ ಬಳಸಿಕೊಳ್ಳತಕದ್ದು, ಈ ಮೊತ್ತವನ್ನು ಇತರೆ ಯಾವುದೇ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತಿಲ್ಲ. ಶಾಲೆಯ ಕೊಠಡಿ, ಆವರಣ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು. ಶಾಲಾ ಎಸ್.ಡಿ.ಎಂ.ಸಿ. ಸಭೆಯನ್ನು ಏರ್ಪಡಿಸಿ, ಚರ್ಚಿಸಿ, ಅಗತ್ಯವಿರುವ ಸ್ವಚ್ಛತಾ ವಸ್ತುಗಳನ್ನು ಖರೀದಿಸಿ ನಿರ್ವಹಣೆ ಮಾಡುವುದು,

ಮೇಲ್ಕಂಡ ಚಟುವಟಿಕೆಗಳಿಗೆ ಮಾತ್ರ ನಿಯಮಾನುಸಾರ ಆಧತೆಗನುಗುಣವಾಗಿ ಶಾಲಾನುದಾವನ್ನು ಪೂರ್ಣವಾಗಿ ವೆಚ್ಚ ಮಾಡಲು ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ಕ್ರಮ ವಹಿಸುವುದು, ಅನಿವಾರ್ಯ ಕಾರಣಗಳಿಂದ ವೆಚ್ಚ ಮಾಡಲು ಸಾಧವಿಲ್ಲದ ಅನುದಾನವನ್ನು ಮಾತ್ರ ರಾಜ್ಯ ಯೋಜನಾ ನಿರ್ದೇಶಕರ ಕಛೇರಿಗೆ ಹಿಂದಿರುಗಿಸುವುದು. ಸಂಬಂಧಿಸಿದ ತಾಲ್ಲೂರು ಜಿಲ್ಲೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮೇಲ್ವಿಚಾರಣೆ ಮತ್ತು ಅನುಪಾಲನೆ ಮಾಡಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು.

Click here download

WhatsApp Group Join Now
Telegram Group Join Now

1 thought on “Govt Primary School: 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ ಮಾಡುವ ಬಗ್ಗೆ.”

Leave a Comment