Grihalakshmi: ಗೃಹಲಕ್ಷ್ಮೀ(Grihalakshmi) ಹಣ ಹೂಡಿಕೆಗೆ ಸಂಘಗಳ ರಚನೆ , ಶೂರಿಟಿಯಲ್ಲದೆ ಸಿಗಲಿದೆ ಕಡಿಮೆ ಬಡ್ಡಿದರದ ಸಾಲ, ಯಾವಾಗಿಂದ ಜಾರಿಗೊಳಿಸಲಾಗುತ್ತೆ ಗೊತ್ತಾ?
Grihalakshmi: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗಾಗಿ ಕರ್ನಾಟಕ ರಾಜ್ಯದಲ್ಲಿ ಸ್ತ್ರೀ ಶಕ್ತಿ ಸಂಘಗಳ ಮಾದರಿಯಲ್ಲಿ’ಗೃಹಲಕ್ಷ್ಮೀ ಸಂಘ’ಗಳು ಅಸ್ತಿತ್ವಕ್ಕೆ ಬರಲಿವೆ!ಹೌದು, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಯರು ಪ್ರತಿ ತಿಂಗಳು ಪಡೆಯುವ ಎರಡು ಸಾವಿರ(2000) ರೂ.ಗಳನ್ನು ಸಂಘಗಳಲ್ಲಿ ಹೂಡಿಕೆ ಮಾಡಿ, ಸ್ವ-ಉದ್ಯೋಗದೊಂದಿಗೆ ಮತ್ತಷ್ಟು ಹಣ ಸಂಪಾದಿಸಿ ಆರ್ಥಿಕವಾಗಿ ಸಬಲಗೊಳಿಸಲು ಸಂಘಗಳು ನೆರವಾಗಲಿವೆ.
Grihalakshmi: ಈ ಯೋಜನೆಯಲ್ಲಿ 4ರಿಂದ 10 ಮಂದಿಗೆ ಒಂದು ಸಂಘ ರಚಿಸಲು ಉದ್ದೇಶಿಸಲಾಗಿದೆ.
ಸಂಘಗಳ ಸದಸ್ಯೆಯರು ತಮಗೆ ಬರುವ 2 ಸಾವಿರ ರೂ.ಗಳನ್ನು ಬ್ಯಾಂಕ್‌ನಲ್ಲಿ ಕಟ್ಟಿದರೆ ಅಷ್ಟೂ ಜನರ ಹಣ (ನಾಲ್ವರ ವಾರ್ಷಿಕ ಹಣವಾದರೆ 96 ಸಾವಿರ, 10 ಜನರ ವಾರ್ಷಿಕ ಹಣವಾದರೆ 2.40 ಲಕ್ಷ ರೂ.)ದ ಜತೆಗೆ ಬ್ಯಾಂಕ್‌ನಿಂದ 3-5 ಲಕ್ಷ ರೂ.ವರೆಗೆ ತಂಡಕ್ಕೆ (ಗುಂಪಿಗೆ) ಸಾಲ ಸೌಲಭ್ಯ ಸಿಗಲಿದೆ. ಈ ಸಂಘದ ಯಜಮಾನಿಯರು ಆ ಹಣ ಬಳಸಿಕೊಂಡು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಬಹುದು ಹಾಗೂ ತಮಗೆ ಸೂಕ್ತವಾದ ಯಾವುದೇ ಉದ್ಯಮವನ್ನು ಆರಂಭಿಸಬಹುದು.
”ಗೃಹಲಕ್ಷ್ಮೀ ಸಂಘ(Grihalakshmi) ಗಳಿಗೆ ಸಾಲದ ನೆರವು ನೀಡಲು ಅನುಕೂಲವಾಗುವಂತೆ ನಬಾರ್ಡ್, ಗ್ರಾಮೀಣ ವಿಕಾಸ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಸಂಬಂಧ ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆಯುತ್ತಿದೆ,” ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಮ್ಲಾಇಕ್ಬಾಲ್ ತಿಳಿಸಿದರು.
ಯಜಮಾನಿಯರಿಂದ ‘ಗೃಹಲಕ್ಷ್ಮೀ ಸಂಘ(Grihalakshmi) ಗಳ ರಚನೆಗೆ ಕಾರ್ಯಯೋಜನೆ ರೂಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವಾಲಯವು 1975ರ ಅಕ್ಟೋಬರ್ 2ಕ್ಕೆ ಪ್ರತ್ಯೇಕವಾಗಿ ಸ್ಥಾಪನೆಗೊಂಡಿತು. ಇದಕ್ಕೆ ಪೂರ್ವದಲ್ಲಿ ಇದು ಸಮಾಜ ಕಲ್ಯಾಣ ಇಲಾಖೆಯ ಒಂದು ಭಾಗವಾಗಿತ್ತು. ಹೀಗಾಗಿ, ಮಹಿಳಾ ಇಲಾಖೆ ಪ್ರತ್ಯೇಕಗೊಂಡು 50 ವರ್ಷಗಳು ಪೂರೈಸಿದೆ. ಇದೇ ವೇಳೆ ಅಂಗನವಾಡಿಗಳು ಕೂಡ ಆರಂಭವಾಗಿದ್ದು, ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಇಂಥದೊಂದು ಮಹತ್ತರ ಯೋಜನೆ ರೂಪಿಸಲಾಗುತ್ತಿದೆ.
ಗೃಹಲಕ್ಷ್ಮೀ ಸಂಘ(Grihalakshmi) ದಾಖಲೆಗಳಿಲ್ಲದೆ ಸಾಲ ಸಿಗುತ್ತೆ
ಒಬ್ಬ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯು ತಮ್ಮ ನೆರೆಹೊರೆಯಲ್ಲಿರುವ 10 ಮಂದಿಯನ್ನು ಸೇರಿಸಿಕೊಂಡು ಒಂದು ಸಂಘ ಮಾಡಿಕೊಳ್ಳಬಹುದು. ಇಲಾಖೆ ಅದನ್ನು ನೋಂದಾಯಿತ ಸಂಸ್ಥೆಯಾಗಿಸುತ್ತದೆ. ಬಳಿಕ ಸಂಘದ ಸದಸ್ಯೆಯರು ತಮಗೆ ಬರುವ ಗೃಹಲಕ್ಷ್ಮಿಯ 2000 ರೂ.ಗಳನ್ನು ಬ್ಯಾಂಕ್ ಖಾತೆ ತೆರೆದು ಕಟ್ಟಬಹುದು. ಸಂಘದ ಸದಸ್ಯೆಯರ ಆಸಕ್ತಿಗೆ ಅನುಗುಣವಾಗಿ ಉದ್ಯಮ ಆರಂಭಿಸಲು ಬ್ಯಾಂಕ್‌ನಿಂದ ತಂಡಕ್ಕೆ ಹಣ ನೀಡುತ್ತದೆ. ಆ ತಂಡದ ಸದಸ್ಯರು ಕೃಷಿ ಯಂತ್ರ (ಟ್ರ್ಯಾಕ್ಟರ್, ಒಕ್ಕಣೆ ಯಂತ್ರ, ನಾಟಿ ಯಂತ್ರ)ಗಳನ್ನು ಖರೀದಿಸಿ ತಮ್ಮ ಹಳ್ಳಿಗಳಲ್ಲಿ ಬಾಡಿಗೆಗೆ ಕೊಟ್ಟು ಹಣ ಸಂಪಾದಿಸಬಹುದು. ಇಲ್ಲವೇ ಹೋಟೆಲ್ ತೆರೆಯಬಹುದು. ಹೀಗೆ, ಯಾವುದೇ ಉದ್ಯಮ ಮಾಡಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಹೀಗೆ ಸಾಲ ಪಡೆಯಲು ತಂಡಗಳು ಯಾವುದೇ ದಾಖಲೆಗಳನ್ನಾಗಲಿ ಅಥವಾ ಶೂರಿಟಿಯಾಗಲಿ ನೀಡಬೇಕಿಲ್ಲ.
ಗೃಹಲಕ್ಷ್ಮಿ(Grihalakshmi) ಯೋಜನೆಯಡಿ 1.24 ಕೋಟಿ ಫಲಾನುಭವಿಗಳು.
ರಾಜ್ಯದಲ್ಲಿ ಗೃಹಲಕ್ಷ್ಮಿ(Grihalakshmi) ಯೋಜನೆಯಡಿಯಲ್ಲಿ 1.24 ಕೋಟಿ ಮಹಿಳಾ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಸಂದಾಯವಾಗುತ್ತಿರುವ 2000 ರೂ.ಗಳನ್ನು ಇನ್ನಷ್ಟು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗೃಹಲಕ್ಷ್ಮಿ ಸಂಘಗಳನ್ನು ರಚಿಸಲು ಉದ್ದೇಶಿಸಿದೆ. ಈ ಮೂಲಕ ಯಜಮಾನಿಯರನ್ನು ಆರ್ಥಿಕವಾಗಿ ಇನ್ನಷ್ಟು ಸದೃಢರನ್ನಾಗಿ ಮಾಡುವುದೇ ‘ಗೃಹಲಕ್ಷ್ಮಿ ಸಂಘ’ಗಳ ಉದ್ದೇಶ.