Guest teachers-lecturers:ಗೌರವ ಧನದ ಆಧಾರದ ಮೇಲೆ ಅತಿಥಿ ಶಿಕ್ಷಕರು/ಉಪನ್ಯಾಸಕರ(Guest teachers-lecturers) ಹುದ್ದೆಗಳಿಗೆ ಆಹ್ವಾನ.
Guest teachers-lecturers:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಶಾಲಾ/ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರು/(Guest teachers-lecturers )ಗಳ ಹುದ್ದೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ 11 ತಿಂಗಳ ಅವಧಿಗೆ (ಜೂನ್-2025 ರಿಂದ ಏಪ್ರಿಲ್-2026ರವರೆಗೆ) ಗೌರವ ಧನದ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
• NOTIFICATION LINK – CLICK HERE
1) ಪ್ರಾಥಮಿಕ ವಿಭಾಗ.
• ವಿದ್ಯಾರ್ಹತೆ: ಪಿ.ಯು.ಸಿ., ಡಿಇಡಿ
ಪ್ರಾಥಮಿಕ ಶಿಕ್ಷಕರುಗಳಿಗೆ ಮಾಹೆಯಾನ ರೂ. 19,366.20ಗಳ ಗೌರವ ಧನವನ್ನು ನಿಗದಿಪಡಿಸಲಾಗಿರುತ್ತದೆ.
2) ಪ್ರೌಢಶಾಲಾ ವಿಭಾಗ.
• ಖಾಲಿ ಹುದ್ದೆಗಳ ಸಂಖ್ಯೆ: 44, ವಿಷಯ: ಕನ್ನಡ, ಗಣಿತ, ಸಿಬಿಜೆಡ್,ಪಿ.ಸಿ.ಎಂ., ಸಮಾಜ ವಿಜ್ಞಾನ, ಹಿಂದಿ, ವಿದ್ಯಾರ್ಹತೆ: ಬಿ.ಎ. ಬಿಇಡಿ, ಬಿ.ಎಸ್.ಸಿ. ಬಿಇಡಿ ಪ್ರೌಢಶಾಲಾ ಶಿಕ್ಷಕರುಗಳಿಗೆ ಮಾಹೆಯಾನ ರೂ. 22.840.65ಗಳ ಗೌರವ ಧನವನ್ನು ನಿಗದಿಪಡಿಸಲಾಗಿರುತ್ತದೆ.
3) ಪದವಿ ಪೂರ್ವ ವಿಭಾಗ.
• ಖಾಲಿ ಹುದ್ದೆಗಳ ಸಂಖ್ಯೆ: 26 1/2, ವಿಷಯ: ರಾಜ್ಯ ಶಾಸ್ತ್ರ,ಗಣಕ ವಿಜ್ಞಾನ, ಹಿಂದಿ, ತಮಿಳು, ಇತಿಹಾಸ, ವಾಣಿಜ್ಯ ಶಾಸ್ತ್ರ, ಜೀವ ಶಾಸ್ತ್ರ, ಭೌತ ಶಾಸ್ತ್ರ, ಸಂಖ್ಯಾ ಶಾಸ್ತ್ರ, ರಸಾಯನ ಶಾಸ್ತ್ರ, ಇಂಗ್ಲೀಷ್, ವಿದ್ಯಾರ್ಹತೆ: ಎಂ.ಎ. ಬಿಇಡಿ, ಎಂ.ಸಿ.ಎ,/ ಎಂ.ಎಸ್.ಸಿ, ಬಿಇಡಿ, ಎಂ.ಕಾಂ, ಎಂ.ಎಸ್.ಸಿ(ರಸಾಯನಶಾಸ್ತ್ರ), ಬಿಇಡಿ, ಎಂ.ಎ., ಬಿಇಡಿ (ಇಂಗ್ಲೀಷ್).
• ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಮಾಹೆಯಾನ ರೂ. 25,696.10ಗಳ ಗೌರವ ಧನವನ್ನು ನಿಗದಿಪಡಿಸಲಾಗಿರುತ್ತದೆ.
ಅರ್ಜಿಗಳನ್ನು ಪಾಲಿಕೆಯ ಕೇಂದ್ರ ಕಛೇರಿ, ಅನೆಕ್ಸ್-3 ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಹಿರಿಯ ಸಹಾಯಕ ನಿರ್ದೇಶಕರು (ಶಿಕ್ಷಣ)ರವರ ಕಛೇರಿಗೆ ದಿನಾಂಕ: 06.09.2025ರೊಳಗೆ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ವಿವರಗಳನ್ನು ಸಂಬಂಧಪಟ್ಟ ಶಾಲಾ/ಕಾಲೇಜುಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಅಥವಾ ಬಿಬಿಎಂಪಿ ವೆಬ್ ಸೈಟ್ www.bbmp.gov.in ಮೂಲಕ ಮಾಹಿತಿ ಪಡೆದು ಅರ್ಜಿ ಸಲ್ಲಿಸುವುದು.