HELTH INSURANCE: ಇನ್ನು ಮುಂದೆ ಈ ಹೆಲ್ತ್ ಇನ್ಶೂರೆನ್ಸ್(HELTH INSURANCE) ಕಂಪನಿಗಳ ಸೇವೆಯೂ ಸೆ. 1ರಿಂದ ಬಂದ್! ಈ ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಇಲ್ಲ!
HELTH INSURANCE:ಬಜಾಜ್ ಅಲಯನ್ಸ್ ಹೆಲ್ತ್ ಇನ್ಶೂರೆನ್ಸ್ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್(HELTH INSURANCE) ಸಂಸ್ಥೆಗಳ ಹೆಲ್ತ್ ಪಾಲಿಸಿ ಮಾಡಿಸಿದವರಿಗೆ ಕಹಿ ಸುದ್ದಿಯೊಂದಿದೆ. ಸೆ. 1ರಿಂದ ಈ ವಿಮಾ ಪಾಲಿಸಿಗಳಡಿಯಲ್ಲಿ ಕ್ಯಾಶ್ ಲೆಸ್ ಸೇವೆಗಳು ಬಂದ್ ಆಗಲಿದೆ. ಈ ಕುರಿತಂತೆ ಭಾರತೀಯ ಆರೋಗ್ಯ ವಿಮಾ ಸೇವಾ ಕಂಪನಿಗಳ ಸಂಸ್ಥೆ ( AHPI) ಸೂಚನೆ ನೀಡಿದೆ. ಈ ಸೂಚನೆಯೂ ಸದ್ಯಕ್ಕೆ ಉತ್ತರ ಭಾರತದಲ್ಲಿರುವ ಎಎಚ್ ಪಿಐ(AHPI) ಅಧೀನದಲ್ಲಿರುವ ಆಸ್ಪತ್ರೆಗಳಲ್ಲಿ ಜಾರಿಗೆ ಬರಲಿದೆ.
ಖ್ಯಾತ ಆರೋಗ್ಯ ವಿಮಾ ಸೇವಾ ಸಂಸ್ಥೆಯಾದ ಬಜಾಜ್ ಅಲಯನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್(HELTH INSURANCE) ಕಂಪನಿಗಳಿಂದ ಆರೋಗ್ಯ ವಿಮೆಗಳನ್ನು ಖರೀದಿಸಿರುವವರಿಗೆ ಭಾರತದ ಆರೋಗ್ಯ ವಿಮಾ ಸೇವಾದಾರ ಕಂಪನಿಗಳ ಸಂಸ್ಥೆ ( AHPI) ನೆಟ್ ವರ್ಕ್ ನಲ್ಲಿರುವ ದೇಶದ 20 ಸಾವಿರ ಆಸ್ಪತ್ರೆಗಳಲ್ಲಿ ವಿಮಾ ಸೇವೆಗಳನ್ನು ಬಂದ್ ಆಗಲಿವೆ. ಈ ಕುರಿತಂತೆ, ಎಎಚ್ ಪಿಐ ಸಂಸ್ಥೆಯೂ ತನ್ನೊಂದಿಗೆ ವ್ಯಾವಹಾರಿಕ ನಂಟು ಹೊಂದಿರುವ 20 ಸಾವಿರ ಆಸ್ಪತ್ರೆಗಳಿಗೆ AHPI ಆದೇಶ ಹೊರಡಿಸಿದೆ. ಸೆ. 1ರಿಂದ ಈ ಆದೇಶ ಜಾರಿಗೆ ಬರಲಿದೆ.
HELTH INSURANCE ಈ ಸೂಚನೆಯ ಪರಿಣಾಮಗಳು ಏನು?
ಈ ಸೂಚನೆಯ ಪ್ರಕಾರ, ಬಜಾಜ್ ಅಲಯನ್ಸ್ ವಿಮಾ ಪಾಲಿಸಿ ಹೊಂದಿರುವವರು ಹಾಗೂ ಕೇರ್ ಹೆಲ್ತ್(HELTH INSURANCE) ಇನ್ಶೂರೆನ್ಸ್ ಪಾಲಿಸಿ ಹೊಂದಿರುವವರಿಗೆ ಈ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ಸೇವೆಗಳು ಸಿಕ್ಕೋದಿಲ್ಲ. ಈ ಪಾಲಿಸಿ ಹೊಂದಿರುವವರಿಗೆ ಸೆ. 1ರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕೈಯ್ಯಿಂದ ಹಣ ಪಾವತಿಸಬೇಕಿರುತ್ತದೆ.
HELTH INSURANCE ಯಾವ ಯಾವ ಆಸ್ಪತ್ರೆಗಳಲ್ಲಿ ಜಾರಿಯಾಗಲಿದೆ?
AHPl ವ್ಯಾಪ್ತಿಯಲ್ಲಿ ದೇಶದ ಸುಮಾರು 20 ಸಾವಿರಕ್ಕೂ ಅಧಿಕ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಯಾವುದೇ ಆರೋಗ್ಯ ವಿಮಾ ಸೇವೆದಾರ ಕಂಪನಿಯೂ ಶುರುವಾದರೂ ಆ ಕಂಪನಿಯೂ ಎಎಚ್ ಪಿಐ(AH Pl)ಯಲ್ಲಿ ಸದಸ್ಯತ್ವ ಪಡೆಯುವುದು ಕಡ್ಡಾಯವಾಗಿರುತ್ತದೆ. ದೇಶದ ಪ್ರತಿಷ್ಠಿತ ಆಸ್ಪತ್ರೆಗಳಾದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆ ಮತ್ತು ಇನ್ನೂ ಅನೇಕ ಆಸ್ಪತ್ರೆಗಳು, ಹಲವಾರು ನಗರಗಳಲ್ಲಿರುವ ಸ್ಥಳೀಯ ಆಸ್ಪತ್ರೆಗಳು ಎಎಚ್ ಪಿಐ ವ್ಯಾಪ್ತಿಯಲ್ಲಿ ಬರಲಿವೆ.
HELTH INSURANCE ಈ ಆದೇಶವು ದಕ್ಷಿಣ ಭಾರತದಲ್ಲಿ ಜಾರಿಯಿಲ್ಲ?
ಸದ್ಯದ ಮಾಹಿತಿಯಂತೆ, ಎಎಚ್ ಪಿಐ ನೀಡಿರುವ ಆದೇಶವು ಕೇವಲ ಉತ್ತರ ಭಾರತದಲ್ಲಿ ಮಾತ್ರ ಜಾರಿಗೆ ಬರಲಿದೆ. ಸೂಚನೆಯಲ್ಲಿ ದಕ್ಷಿಣ ಭಾರತ ಎಂದೇನೂ ಉಲ್ಲೇಖವಾಗಿಲ್ಲ. ಆ ಬಗ್ಗೆ AHPI ವತಿಯಿಂದ ಸ್ಪಷ್ಟನೆಯೇನೂ ಬಂದಿಲ್ಲ. ಆದರೆ, ಈಗ ಹೊರಬಿದ್ದಿರುವ ಆದೇಶದ ಪ್ರಕಾರ, ಈ ಆದೇಶ ಉತ್ತರ ಭಾರತದಲ್ಲಿ ಮಾತ್ರ ಸೆ. 1ರಿಂದ ಜಾರಿಯಾಗಲಿದೆ.
HELTH INSURANCE ವಿದೇಶಗಳಲ್ಲಿ ಭಾರತದ ಆರೋಗ್ಯ ವಿಮೆ.
ಯುನೈಟೆಡ್ ಕಿಂಗ್‌ಡಮ್, USA ಮತ್ತು ಗಲ್ಫ್ ದೇಶಗಳಲ್ಲಿ ವಾಸಿಸುವ ಭಾರತೀಯರು ಸಾಮಾನ್ಯವಾಗಿ ಆರೋಗ್ಯ ಸೇವೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಚಿಕಿತ್ಸೆಗಾಗಿ ಹೆಚ್ಚು ಸಮಯ ಕಾಯಬೇಕು, ವೆಚ್ಚ ಜಾಸ್ತಿ, ಸಣ್ಣ ಭೇಟಿಗೂ ಅಪಾಯಿಂಟ್ಮೆಂಟ್ ಬೇಕು ಎಂಬುದರಿಂದ ಅನೇಕರು ತೊಂದರೆ ಅನುಭವಿಸುತ್ತಾರೆ. ಕೆಲವರು ಹಲ್ಲು ನೋವು ಬಂದರೂ ಚಿಕಿತ್ಸೆ ಪಡೆಯಲು ನೇರವಾಗಿ ಬೆಂಗಳೂರಿಗೆ ಬಂದು ಚಿಕಿತ್ಸೆ ಮುಗಿಸಿಕೊಂಡು ಹಿಂತಿರುಗಿರುವುದೂ ಉಂಟು. ಇದಲ್ಲದೆ, ವಿದೇಶಗಳಲ್ಲಿ ಹೆಲ್ತ್ ಕಾರ್ಡ್ ಹೊಂದಿರುವ ಜೊತೆಗೆ ಭಾರತದಲ್ಲೂ ಹೆಲ್ತ್ ಇನ್ಶುರನ್ಸ್(HELTH INSURANCE) ಪಡೆಯುವ ಅನಿವಾಸಿ ಭಾರತೀಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.