Hijab: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕರ ವಿರುದ್ಧ ತನಿಖೆ ಆರಂಭ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Hijab: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕರ ವಿರುದ್ಧ ತನಿಖೆ ಆರಂಭ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Hijab

Hijab: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕರ ವಿರುದ್ಧ ತನಿಖೆ ಆರಂಭ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಈ ಸಂಬಂಧ ಜುಲೈ 26 ರಂದು ಹೈದರಾಬಾದ್‌ನ ಕಾನೂನು ಹಕ್ಕುಗಳ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎ. ಸಂತೋಷ್ ಅವರು ದೂರು ಸಲ್ಲಿಸಿರುವುದಾಗಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆರ್.ಆರ್. ಬಿರಾದಾರ್ ದೃಢಪಡಿಸಿದ್ದಾರೆ.

ಮಸೀದಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಅಬ್ದುಲ್ ಮಜೀದ್ ಎರಡನೇ ವರ್ಷದ BA ವಿದ್ಯಾರ್ಥಿಗಳನ್ನು Hijab ಧರಿಸುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪದ ಮೇಲೆ ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK) ತನಿಖೆಯನ್ನು ಪ್ರಾರಂಭಿಸಿದೆ.
ಈ ಸಂಬಂಧ ಜುಲೈ 26 ರಂದು ಹೈದರಾಬಾದ್‌ನ ಕಾನೂನು ಹಕ್ಕುಗಳ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎ. ಸಂತೋಷ್ ಅವರು ದೂರು ಸಲ್ಲಿಸಿರುವುದಾಗಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆರ್.ಆರ್. ಬಿರಾದಾರ್ ದೃಢಪಡಿಸಿದ್ದಾರೆ.
ಸೋಮವಾರ ANI ಜೊತೆ ಮಾತನಾಡಿದ ರಿಜಿಸ್ಟ್ರಾರ್ ಆರ್.ಆರ್. ಬಿರಾದಾರ್, ‘ಜುಲೈ 26 ರಂದು ಹೈದರಾಬಾದ್‌ನ ಕಾನೂನು ಹಕ್ಕುಗಳ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎ. ಸಂತೋಷ್ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಬ್ದುಲ್ ಮಜೀದ್ ವಿರುದ್ಧ ದೂರು ನೀಡಿದ್ದಾರೆ. ಶೈಕ್ಷಣಿಕ ಪ್ರವಾಸ ಕೈಗೊಂಡ ಸಮಯದಲ್ಲಿ ಬಿಎ 2ನೇ ವರ್ಷದ ವಿದ್ಯಾರ್ಥಿಗಳು ಮಸೀದಿಗೆ ಪ್ರವೇಶಿಸಲು ಹಿಜಾಬ್(Hijab) ಧರಿಸಲು ಒತ್ತಾಯಿಸಲಾಗಿದೆ ಎಂದು ದೂರಲಾಗಿದೆ’ ಎಂದು ಹೇಳಿದರು.

ಪ್ರಕರಣದಲ್ಲಿ ವಿಶ್ವವಿದ್ಯಾನಿಲಯವೂ ತನಿಖಾ ಸಮಿತಿಯನ್ನು ನೇಮಿಸುತ್ತದೆ ಹಾಗೂ ಸಹಾಯಕ ಪ್ರಾಧ್ಯಾಪಕರು ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿರಾದಾರ್ ಹೇಳಿದರು.

ಜುಲೈ 15 ರಂದು, ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ (JKSA) ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಬೆಂಗಳೂರಿನ ನರ್ಸಿಂಗ್ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಧಾರ್ಮಿಕ ತಾರತಮ್ಯದ ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಮಧ್ಯಪ್ರವೇಶಿಸುವಂತೆ ಕೋರಿತ್ತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) ದೊಂದಿಗೆ ಸಂಯೋಜಿತವಾಗಿರುವ ಶ್ರೀ ಸೌಭಾಗ್ಯ ಲಲಿತಾ ಕಾಲೇಜ್ ಆಫ್ ನರ್ಸಿಂಗ್‌ನ ಆಡಳಿತ ಮಂಡಳಿಯು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಹಿಜಾಬ್(Hijab) ಹಾಗೂ ಬುರ್ಖಾ ಧರಿಸುವ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಮತ್ತು ಹೊರಹಾಕುವ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.

ಕಳೆದ ಹಲವಾರು ದಿನಗಳಿಂದ ತರಗತಿಗಳು ಹಾಗೂ ಪ್ರಾಯೋಗಿಕ ಸೆಷನ್ಸ್‌ಗಳಿಗೆ ಪ್ರವೇಶ ನಿರಾಕರಿಸಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ಅವಮಾನ ಮಾಡಲಾಗುತ್ತಿರುವ ಬಗ್ಗೆ ಸಂಘವು ಪತ್ರದಲ್ಲಿ ತೀವ್ರ ದುಃಖವನ್ನು ವ್ಯಕ್ತಪಡಿಸಿದೆ.

WhatsApp Group Join Now
Telegram Group Join Now