Home Loan: ನಿಮಗೆ 40 ವರ್ಷ ವಯಸ್ಸಾಗಿದ್ಯಾ? ಹಾಗಿದ್ದರೆ ಗೃಹ ಸಾಲ(Home Loan)ಪಡೆಯಲು ಈ ಪ್ರಮುಖ ವಿಚಾರ ನಿಮಗೆ ಗೊತ್ತಿರಲೇಬೇಕು!

Home Loan: ನಿಮಗೆ  40 ವರ್ಷ ವಯಸ್ಸಾಗಿದ್ಯಾ? ಹಾಗಿದ್ದರೆ ಗೃಹ ಸಾಲ(HOME LOAN)ಪಡೆಯಲು ಈ ಪ್ರಮುಖ ವಿಚಾರ ನಿಮಗೆ ಗೊತ್ತಿರಲೇಬೇಕು!

Home Loan

Home Loan: ನಿಮ್ಮ 40ರ ವಯಸ್ಸಿನಲ್ಲಿ ಗೃಹ ಸಾಲ(Home Loan)ವನ್ನು  ಸೂಕ್ತವಾದ ಯೋಜನೆಯಿಂದ ಸುಲಭಗೊಳಿಸಬಹುದು. ದೊಡ್ಡ ಡೌನ್ ಪೇಮೆಂಟ್, ದೀರ್ಘ ಅವಧಿಯ ಸಾಲ, ಜಂಟಿ ಸಾಲ, 1 ಬಾರಿಗೆ ಮರುಪಾವತಿ, ಸರಿಯಾದ ಸಾಲದಾತರ ಆಯ್ಕೆಯಿಂದ EMI ಹೊರೆ ಕಡಿಮೆಯಾಗುತ್ತದೆ.

ಈ ನಿಮ್ಮ 40 ವರ್ಷದ ವಯಸ್ಸಿನಲ್ಲಿ ನಿಮ್ಮ ಜೀವನದಲ್ಲಿ ಹಲವಾರು ಜವಾಬ್ದಾರಿಗಳು ತುಂಬಿರುತ್ತವೆ. ಮಕ್ಕಳ ಶಿಕ್ಷಣ (Child Education), ಕುಟುಂಬದ ಆರೈಕೆ (Family), ಆರೋಗ್ಯ ಖರ್ಚುಗಳ (Health Expenses) ಜೊತೆಗೆ ಮನೆ ಖರೀದಿಯ ದೊಡ್ಡ ಕನಸು ದೊಡ್ಡ ಜವಾಬ್ದಾರಿಯಾಗಿ ಕಾಡಬಹುದು. ಗೃಹ ಸಾಲ ತೆಗೆದುಕೊಂಡರೆ, ಪ್ರತಿ ತಿಂಗಳು EMI (ಸಮಾನ ಮಾಸಿಕ ಕಂತು) ಪಾವತಿಸುವುದು ಕಷ್ಟವೆನಿಸಬಹುದು. ಆದರೆ, ಸೂಕ್ತವಾದ ಯೋಜನೆಯೊಂದಿಗೆ ಈ ಸವಾಲನ್ನು ಸುಲಭವಾಗಿ ನಿವಾರಿಸಬಹುದು.

1. ಡೌನ್ ಪೇಮೆಂಟ್ ಮಾಡಿ:- ಮನೆ ಖರೀದಿಸುವಾಗ, ಆಸ್ತಿಯ ಬೆಲೆಯ 80-90% ಸಾಲವಾಗಿ ಪಡೆಯಬಹುದು, ಉಳಿದದ್ದನ್ನು ಡೌನ್ ಪೇಮೆಂಟ್ ಆಗಿ ಪಾವತಿಸಬೇಕು. 40ರ ವಯಸ್ಸಿನಲ್ಲಿ ಸಾಲದ ಹೊರೆ ಕಡಿಮೆ ಇರಲಿ ಎಂದು ಬಯಸುವವರು, ಸಾಧ್ಯವಾದಷ್ಟು ದೊಡ್ಡ ಡೌನ್ ಪೇಮೆಂಟ್ ಮಾಡಿ. ಇದರಿಂದ EMI ಮತ್ತು ಬಡ್ಡಿ ಎರಡೂ ಕಡಿಮೆಯಾಗುತ್ತದೆ.

ಉದಾಹರಣೆಗೆ:- ₹50 ಲಕ್ಷದ ಮನೆಗೆ ₹20 ಲಕ್ಷ ಡೌನ್ ಪೇಮೆಂಟ್ ಕಟ್ಟಿದರೆ, ಸಾಲದ ಮೊತ್ತ ಕೇವಲ ₹30 ಲಕ್ಷವಾಗಿರುತ್ತದೆ. ಆದರೆ, ತುರ್ತು ಅಗತ್ಯಗಳಿಗೆ (ವೈದ್ಯಕೀಯ, ಇತರೆ) ಮೀಸಲಿಟ್ಟ ಹಣವನ್ನು ಡೌನ್ ಪೇಮೆಂಟ್‌ಗೆ ಬಳಸಿಕೊಳ್ಳದಿರಿ.

2. ಸಾಲದ ಅವಧಿಯನ್ನು ಸುದೀರ್ಘಗೊಳಿಸಿ:- ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳು 30 ವರ್ಷಗಳವರೆಗೆ ಗೃಹ ಸಾಲ(Home Loan) ನೀಡುತ್ತವೆ. ಆದರೆ, 40ರ ವಯಸ್ಸಿನವರಿಗೆ, ನಿವೃತ್ತಿಯ ವಯಸ್ಸನ್ನು (ಸಾಮಾನ್ಯವಾಗಿ 60) ಗಣನೆಗೆ ತೆಗೆದುಕೊಂಡು ಕಡಿಮೆ ಅವಧಿಗೆ ಸಾಲವನ್ನು ನೀಡಬಹುದು. ಒಳ್ಳೆಯ ಕ್ರೆಡಿಟ್ ಸ್ಕೋರ್ (750ಕ್ಕಿಂತ ಹೆಚ್ಚು) ಹಾಗೂ ಸ್ಥಿರ ಉದ್ಯೋಗವಿದ್ದರೆ, ದೀರ್ಘ ಅವಧಿಯ ಸಾಲಕ್ಕೆ ಮನವೊಲಿಕೆ ಮಾಡಬಹುದು. ಉದಾಹರಣೆಗೆ:- 20 ವರ್ಷದ ಬದಲಾಗಿ 25 ವರ್ಷಗಳ ಸಾಲ ತೆಗೆದುಕೊಂಡರೆ, EMI ಕಡಿಮೆಯಾಗುತ್ತದೆ. ಇದು ತಿಂಗಳಿಗೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

3. ಜಂಟಿ ಗೃಹ ಸಾಲ(Home Loan) ಆಯ್ಕೆ:- ನೀವು ಮತ್ತು ನಿಮ್ಮ ಧರ್ಮ ಪತ್ನಿ ಇಬ್ಬರೂ ಉದ್ಯೋಗದಲ್ಲಿದ್ದರೆ, ಜಂಟಿ ಗೃಹ ಸಾಲ(Home Loan) ತೆಗೆದುಕೊಳ್ಳಿ. ಇದರಿಂದ ದೊಡ್ಡ ಮೊತ್ತದ ಸಾಲಕ್ಕೆ ಅರ್ಹತೆ ಪಡೆಯಬಹುದು, EMI ಮೊತ್ತವು ಸಹ ಕಡಿಮೆಯಾಗುತ್ತದೆ. ಜೊತೆಗೆ, ಜಂಟಿ ಸಾಲದಲ್ಲಿ ಬಡ್ಡಿದರ ಕಡಿಮೆಯಾಗಬಹುದು ಹಾಗೂ ತೆರಿಗೆ ವಿನಾಯಿತಿಯೂ ಹೆಚ್ಚು ಲಭ್ಯವಾಗುತ್ತದೆ. ಉದಾಹರಣೆಗೆ:- ಒಬ್ಬರೇ ಸಾಲ ತೆಗೆದುಕೊಂಡರೆ ₹50,000 EMI ಇದ್ದರೆ, ಜಂಟಿಯಾಗಿ ತೆಗೆದುಕೊಂಡರೆ ಇದು ₹30,000ಕ್ಕೆ  ಕಡಿಮೆಯಾಗಬಹುದು.

4. ಒಂದೇ ಬಾರಿಗೆ ಮರುಪಾವತಿ:- ನೀವು ನಿಮ್ಮ ನಿವೃತ್ತಿಯ ವೇಳೆಗೆ ಸಾಲ ಮುಗಿಯುವಂತೆ ಯೋಜಿಸಿ. ಬೋನಸ್, ಗ್ರಾಚ್ಯುಟಿ, ಮತ್ತು ಅನುವಂಶಿಕ ಆಸ್ತಿಯಿಂದ ಬಂದ ದೊಡ್ಡ ಮೊತ್ತದ ಹಣವನ್ನು ಸಾಲದ ಮರುಪಾವತಿಗೆ ಬಳಸಿ. ಆದರೆ, ನಿವೃತ್ತಿ ನಿಧಿಯನ್ನು ಇದಕ್ಕೆ ಬಳಸದಿರಿ, ಏಕೆಂದರೆ ನಿವೃತ್ತಿಯ ನಂತರದ ಜೀವನಕ್ಕೆ ಆರ್ಥಿಕ ಭದ್ರತೆ ಬೇಕು.

5. ಸರಿಯಾದ ಸಾಲದಾತರ ಆಯ್ಕೆ:- ಗೃಹ ಸಾಲ(Home Loan) ನೀಡುವ ಹಲವಾರು ಬ್ಯಾಂಕುಗಳು ಹಾಗೂ ಆರ್ಥಿಕ ಸಂಸ್ಥೆಗಳಿವೆ. ಕಡಿಮೆ ಬಡ್ಡಿದರದ ಜೊತೆಗೆ ಸಾಲದಾತರ ಖ್ಯಾತಿ, ವಿಶ್ವಾಸಾರ್ಹತೆ, ಮರುಪಾವತಿಯ ನಮ್ಯತೆ, ಕಾಗದಪತ್ರಗಳ ಸರಳತೆಯನ್ನು ಪರಿಶೀಲಿಸಿ. ಕೆಲವು ಸಾಲದಾತರು ಮನೆ ಆಯ್ಕೆಯಲ್ಲಿ ಸಲಹೆ ನೀಡುವ ಸೇವೆಯನ್ನೂ ಒದಗಿಸುತ್ತಾರೆ. ಆನ್‌ಲೈನ್‌ನಲ್ಲಿ ಬಡ್ಡಿದರಗಳನ್ನು ಹೋಲಿಕೆ ಮಾಡಿ, ಗ್ರಾಹಕರ ವಿಮರ್ಶೆಗಳನ್ನು ಓದಿ, ಆನಂತರ ನಿರ್ಧರಿಸಿ.

ನೀವು 40ರ ವಯಸ್ಸಿನಲ್ಲಿ ಗೃಹ ಸಾಲ(Home Loan) ತೆಗೆದುಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದ್ದರೂ, ಸರಿಯಾದ ಯೋಜನೆಯಿಂದ ಇದನ್ನು ಸುಲಭಗೊಳಿಸಬಹುದು. ದೊಡ್ಡ ಡೌನ್ ಪೇಮೆಂಟ್, ದೀರ್ಘ ಸಾಲದ ಅವಧಿ, ಜಂಟಿ ಸಾಲ, ಒಂದೇ ಬಾರಿಗೆ ಮರುಪಾವತಿ, ಮತ್ತು ಸರಿಯಾದ ಸಾಲದಾತರ ಆಯ್ಕೆಯಿಂದ EMI ಹೊರೆ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಕನಸಿನ ಮನೆಯ ಜೊತೆಗೆ ಆರ್ಥಿಕ ಸ್ಥಿರತೆಯನ್ನೂ ಕಾಪಾಡಿಕೊಳ್ಳಬಹುದು.

WhatsApp Group Join Now
Telegram Group Join Now