Home Loan: ಗೃಹ ಸಾಲ(Home Loan) ತೆಗೆದುಕೊಳ್ಳುವ ಮೊದಲು ಈ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
Home Loan: ಸ್ವಂತ ಮನೆ ಹೊಂದುವುದು ಬಹುತೇಕ ಎಲ್ಲರ ಬಹುದೊಡ್ಡ ಕನಸು. ಆದರೆ ಮನೆ ಖರೀದಿಸಲು ಬೇಕಾಗುವ ಹಣವನ್ನು ವ್ಯವಸ್ಥೆ ಮಾಡುವಲ್ಲಿ ಗೃಹ ಸಾಲ (Home Loan) ಪ್ರಮುಖ ಪಾತ್ರವಹಿಸುತ್ತದೆ. ಇಂದು ಹಲವಾರು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ವಿವಿಧ ರೀತಿಯ ಸಾಲ ಯೋಜನೆಗಳನ್ನು ನೀಡುತ್ತಿವೆ. ಈ ಸಂದರ್ಭದಲ್ಲಿ ಯಾವ ಬಡ್ಡಿದರವನ್ನು ಆಯ್ಕೆ ಮಾಡಬೇಕು? ಸ್ಥಿರ, ಫ್ಲೋಟಿಂಗ್ ಮತ್ತು ಹೈಬ್ರಿಡ್ ಯಾವುದು ಉತ್ತಮ? ಎಂಬ ಪ್ರಶ್ನೆಗಳು ಎದುರಾಗುತ್ತವೆ.
ಗೃಹ ಸಾಲ(Home Loan) ಎಂದರೆ ಏನು?
ಗೃಹ ಸಾಲ ಎಂದರೆ ಮನೆ ಖರೀದಿಸಲು ಹಾಗೂ ನಿರ್ಮಿಸಲು ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ನೀಡುವ ಸಾಲವಾಗಿದ್ದು, ಇದನ್ನು ನಿರ್ದಿಷ್ಟ ಅವಧಿಯಲ್ಲಿ ಮೂಲಧನದ ಜೊತೆಗೆ ಬಡ್ಡಿಯೊಂದಿಗೆ ಹಿಂತಿರುಗಿಸಬೇಕು. ಸಾಲದ ಮೊತ್ತ ಹಾಗೂ ಬಡ್ಡಿದರವನ್ನು ಆಧರಿಸಿ EMI (Equated Monthly Installment – ಮಾಸಿಕ ಹಂತದ ಪಾವತಿ) ರೂಪದಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ.
ಗೃಹ ಸಾಲ(Home Loan) ಪಡೆಯುವಾಗ ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶಗಳು.
• ಯಾವ ರೀತಿಯ ಬಡ್ಡಿದರ ಆಯ್ಕೆ ಮಾಡುವುದು
ಸಾಲದ ಅವಧಿ ಎಷ್ಟು ಇರಬೇಕು.
• ನಿಮ್ಮ ಆದಾಯಕ್ಕೆ ತಕ್ಕಂತೆ ಅನುಗುಣವಾಗಿ EMI ಎಷ್ಟು ಇರಬೇಕು.
• ಪ್ರಾಸೆಸಿಂಗ್ ಶುಲ್ಕ ಸೇರಿದಂತೆ ಹಲವು ವೆಚ್ಚಗಳನ್ನು ಹೇಗೆ ನಿರ್ವಹಿಸಬೇಕು.
ಬಡ್ಡಿದರದ ಪ್ರಕಾರಗಳು – ಸ್ಥಿರ, ಫ್ಲೋಟಿಂಗ್, ಹೈಬ್ರಿಡ್
1.Fixed Interest Rate( ಸ್ಥಿರ ಬಡ್ಡಿ ದರ):-
ಈ ರೀತಿಯ ಸಾಲದಲ್ಲಿ EMI ಮೊತ್ತವನ್ನು ಸಂಪೂರ್ಣ ಸಾಲ ಅವಧಿಯಲ್ಲಿ ಮತ್ತು ಆರಂಭದ ಕೆಲವು ವರ್ಷಗಳಲ್ಲಿ ಸ್ಥಿರವಾಗಿರುತ್ತದೆ. ಅಂದರೆ, ನೀವು ಮೊದಲ ದಿನದಲ್ಲಿ ನಿರ್ಧರಿಸಿದ ಮೊತ್ತವನ್ನು ಸಾಲದ ಅಂತ್ಯದವರೆಗೂ ಪಾವತಿಸಬೇಕಾಗುತ್ತದೆ.
ಯಾರಿಗೆಲ್ಲ ಸೂಕ್ತ?
• ತಿಂಗಳಿಗೆ ಸ್ಥಿರ ಆದಾಯ ಇರುವವರು.
• ಮಾರುಕಟ್ಟೆಯಲ್ಲಿ ಬಡ್ಡಿದರ ಏರಿಕೆಯಾಗಬಹುದು ಎಂಬ ಭೀತಿಯಿರುವವರು.
• ದೀರ್ಘಕಾಲದ ಯೋಜನೆಯೊಂದಿಗೆ ಹಣವನ್ನು ನಿರ್ವಹಿಸಬಯಸುವವರು.
ಲಾಭಗಳು :-
• EMI ಯಲ್ಲಿ ಯಾವುದೇ ಆಕಸ್ಮಿಕವಾಗಿ ಏರಿಕೆ ಆಗುವುದಿಲ್ಲ.
• ಮಾಸಿಕ ಹಣಕಾಸಿನ ಯೋಜನೆ ಸುಲಭವಾಗುತ್ತದೆ.
ಅನಾನುಕೂಲತೆಗಳು.
• ಬಡ್ಡಿದರ ಕಡಿಮೆಯಾದರೂ ಲಾಭ ದೊರೆಯುವುದಿಲ್ಲ.
• ಸಾಮಾನ್ಯವಾಗಿ ಫ್ಲೋಟಿಂಗ್ ಬಡ್ಡಿದರಕ್ಕಿಂತ ಹೆಚ್ಚು ಇರಬಹುದು.
2. Floating Interest Rate(ಫ್ಲೋಟಿಂಗ್ ಬಡ್ಡಿ ದರ ):-
ಈ ಸಾಲದ ಬಡ್ಡಿದರವು ಮಾರುಕಟ್ಟೆಯ ಪರಿಸ್ಥಿತಿಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀತಿಯ ಆಧಾರದ ಮೇಲೆ ಕಡಿಮೆಯಾಗಬಹುದು ಹಾಗೂ ಹೆಚ್ಚಬಹುದು. ಇದರಿಂದ EMIನಲ್ಲೂ ಏರಿಳಿತವಾಗಬಹುದು.
ಯಾರಿಗೆಲ್ಲ ಸೂಕ್ತ?
• ಹಣಕಾಸಿನಲ್ಲಿ ಸ್ವಲ್ಪ ಹೆಚ್ಚು ಧೈರ್ಯ ಹೊಂದಿರುವವರು.
• ಆದಾಯದ ಮೇಲೆ ವಿಶ್ವಾಸವಿರುವವರು.
• ದೀರ್ಘಕಾಲದಲ್ಲಿ ಬಡ್ಡಿದರ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿರುವವರು.
ಲಾಭಗಳು.
• ಬಡ್ಡಿದರ ಕಡಿಮೆಯಾದಾಗ EMI ಇಳಿಯಬಹುದು.
• ದೀರ್ಘಾವಧಿಯಲ್ಲಿ ಹೆಚ್ಚು ಉಳಿವು ಸಾಧ್ಯ.
ಅನಾನುಕೂಲತೆಗಳು.
• ಬಡ್ಡಿದರ ಏರಿದಾಗ EMI ಹೆಚ್ಚಿಸಬಹುದು.
• ಮಾಸಿಕ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ.
3. Hybrid Interest Rate (ಹೈಬ್ರಿಡ್ ಬಡ್ಡಿದರ):-
ಈ ಯೋಜನೆಯಲ್ಲಿ ಆರಂಭದ ಕೆಲವು ವರ್ಷಗಳಿಗೆ ಸ್ಥಿರ ಬಡ್ಡಿದರ ಅನ್ವಯವಾಗುತ್ತದೆ. ಆನಂತರ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಫ್ಲೋಟಿಂಗ್ ಬಡ್ಡಿದರದಂತೆ ಬದಲಾವಣೆಯಾಗುತ್ತದೆ.
ಯಾರಿಗೆಲ್ಲ ಸೂಕ್ತ?
• ಆರಂಭದ ಕೆಲವು ವರ್ಷಗಳಲ್ಲಿ ಸ್ಥಿರತೆಯನ್ನು ಬೇಕೆಂದುಕೊಳ್ಳುವವರು.
• ನಂತರ ಬಡ್ಡಿದರ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿರುವವರು.
ಲಾಭಗಳು.
• ಆರಂಭದ ವರ್ಷಗಳಲ್ಲಿ EMI ಸ್ಥಿರವಾಗಿರುವುದರಿಂದ ಹಣದ ಯೋಜನೆ ಸುಲಭವಾಗುತ್ತದೆ.
• ನಂತರ ಕಡಿಮೆ ಬಡ್ಡಿದರದ ಲಾಭ ದೊರೆಯಬಹುದು.
ಅನಾನುಕೂಲತೆಗಳು.
• ಪ್ರಾರಂಭದ ಸ್ಥಿರ ದರವು ಫ್ಲೋಟಿಂಗ್ ದರಕ್ಕಿಂತ ಹೆಚ್ಚಾಗಬಹುದು.
• ನಂತರದ ಅವಧಿಯಲ್ಲಿ ಬಡ್ಡಿದರ ಏರಿಕೆಯಾಗಬಹುದು.
ಉತ್ತಮವಾದ ಬಡ್ಡಿದರವನ್ನು ಹೇಗೆ ಆಯ್ಕೆ ಮಾಡುವುದು?
• ನಿಮ್ಮ ಆರ್ಥಿಕ ಸ್ಥಿತಿಯನ್ನು ವಿಶ್ಲೇಷಿಸಿ:- ನೀವು ತಿಂಗಳಿಗೆ ಎಷ್ಟು ಆದಾಯ ಹೊಂದಿದ್ದೀರಾ? ಸ್ಥಿರ ಉದ್ಯೋಗವಿದೆಯೆ ಅಥವಾ ಉದ್ಯಮದ ಆದಾಯವಿದೆಯೆ? EMI ಪಾವತಿಸಲು ಸಾಕಷ್ಟು ಸಂಪನ್ಮೂಲವಿದೆಯೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಬೇಕು.
• ಬ್ಯಾಂಕುಗಳು ಹಾಗೂ NBFCಗಳನ್ನು ಹೋಲಿಸಿ:- ಪ್ರತಿಯೊಂದು ಬ್ಯಾಂಕ್ ಮತ್ತು NBFC ವಿಭಿನ್ನ ಬಡ್ಡಿದರ ಮತ್ತು ಪ್ರಾಸೆಸಿಂಗ್ ಶುಲ್ಕ ನೀಡುತ್ತದೆ. ಅವನ್ನು ಹೋಲಿಸಿ ಉತ್ತಮವಾದ ಯೋಜನೆಯನ್ನು ಆಯ್ಕೆ ಮಾಡಬಹುದು.
• CIBIL ಸ್ಕೋರ್ ಪರಿಶೀಲಿಸಿ:- ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚು ಇದ್ದರೆ ಉತ್ತಮ ಬಡ್ಡಿದರ ಪಡೆಯಲು ಅವಕಾಶ ಹೆಚ್ಚು. ಸಾಮಾನ್ಯವಾಗಿ 750 ಕ್ಕಿಂತ ಮೇಲ್ಪಟ್ಟ ಸ್ಕೋರ್ ಹೊಂದಿದ್ದರೆ ಕಡಿಮೆ ದರದಲ್ಲಿ ಸಾಲ ದೊರೆಯಬಹುದು.
• ದೀರ್ಘಕಾಲದ ಹಾಗೂ ಕನಿಷ್ಟ ಬಡ್ಡಿದರ ಹೊಂದಿರುವ ಯೋಜನೆಯನ್ನು ಆಯ್ಕೆ ಮಾಡಿ:- ಬಡ್ಡಿದರ ಕಡಿಮೆ ಇದ್ದರೆ ದೀರ್ಘಾವಧಿಯಲ್ಲಿ EMI ಒತ್ತಡ ಕಡಿಮೆಯಾಗುತ್ತದೆ.
• ಪ್ರಾಸೆಸಿಂಗ್ ಶುಲ್ಕ, ಮುಂಗಡ ಪಾವತಿ ಮತ್ತು ಇತರೆ ವೆಚ್ಚಗಳನ್ನು ಪರಿಶೀಲಿಸಿ:- ಕೆಲವೊಂದು ಈಯೋಜನೆಗಳಲ್ಲಿ ಪ್ರಾಸೆಸಿಂಗ್ ಶುಲ್ಕ ಹೆಚ್ಚು ಇರಬಹುದು. ಮುಂಗಡ ಪಾವತಿ ಮಾಡಿದರೆ ಕೆಲವು ಬ್ಯಾಂಕುಗಳು ವಿಶೇಷ ರಿಯಾಯಿತಿ ನೀಡಬಹುದು. ಇದನ್ನು ಗಮನಿಸಿ ನಿರ್ಧರಿಸಬೇಕು.
ಗೃಹ ಸಾಲದ ವೇಳೆ ನೆನಪಿನಲ್ಲಿ ಇಡಬೇಕಾದ ಅತ್ಯಂತ ಪ್ರಮುಖ ಅಂಶಗಳು.
• EMI ಪಾವತಿಸಲು ಸಾಧ್ಯವಾಗದಿದ್ದರೆ ದಂಡ, ಶುಲ್ಕ ವಿಧಿಸಲಾಗುತ್ತದೆ.
• ದೀರ್ಘಾವಧಿಯ ಸಾಲದಲ್ಲಿ ಒಟ್ಟು ಪಾವತಿ ಮೊತ್ತ ಹೆಚ್ಚು ಆಗಬಹುದು.
• ಆದಾಯದ ಏರಿಳಿತದಿಂದ EMI ಮೇಲೆ ಪರಿಣಾಮ ಬೀರುತ್ತದೆ.
• ಸರಿಯಾದ ಯೋಜನೆ ಆಯ್ಕೆ ಮಾಡಿದರೆ ಸಾಲದ ಒತ್ತಡ ಕಡಿಮೆ ಆಗಬಹುದು.
• ಸಾಲದ ಅವಧಿಯನ್ನು ಕಡಿಮೆ ಮಾಡಿದರೆ ಒಟ್ಟು ಬಡ್ಡಿ ಉಳಿಸಬಹುದು.
ಆರ್ಥಿಕ ತಜ್ಞರಿಂದ ದೊರೆಯುವ ಸಲಹೆಗಳು.
• ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಆರ್ಥಿಕ ಸ್ಥಿತಿ, ತಿಂಗಳ ಆದಾಯ ಹಾಗೂ ಖರ್ಚನ್ನು ಲೆಕ್ಕ ಹಾಕಿ.
• ನಿಮ್ಮ ದೀರ್ಘಾವಧಿಯ ಗುರಿಯನ್ನು ನಿರ್ಧರಿಸಿ – ಮನೆ ಖರೀದಿ, ನವೀಕರಣ ಮತ್ತು ಇತರೆ ಉದ್ದೇಶಕ್ಕೆ ಸಾಲ ಬೇಕೆಂದು ಯೋಜಿಸಿ.
• ಅಗತ್ಯವಿದ್ದರೆ ಹಣಕಾಸು ತಜ್ಞರ ಸಲಹೆ ಪಡೆಯಿರಿ.
• ಸಾಲದ ಒಪ್ಪಂದವನ್ನು ಸಂಪೂರ್ಣವಾಗಿ ಓದಿ, ಅದರಲ್ಲಿರುವ ಷರತ್ತುಗಳನ್ನು ಅರ್ಥಮಾಡಿಕೊಳ್ಳಿ.
• EMI ತಡವಾದರೆ ವಿಧಿಸಲಾಗುವ ದಂಡದ ಬಗ್ಗೆ ತಿಳಿದುಕೊಳ್ಳಿ.
ಮನೆಯನ್ನು ಖರೀದಿಸುವುದು ಒಂದು ಬಹು ದೊಡ್ಡ ನಿರ್ಧಾರ. ಇದಕ್ಕಾಗಿ ತೆಗೆದುಕೊಳ್ಳುವ ಗೃಹ ಸಾಲ(Home Loan)ವನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡುವುದು ಬಹಳ ಮುಖ್ಯವಾದ ಅಂಶವಾಗಿದೆ. ಸ್ಥಿರ, ಫ್ಲೋಟಿಂಗ್ ಹಾಗೂ ಹೈಬ್ರಿಡ್ ಬಡ್ಡಿದರಗಳಲ್ಲಿ ಒಂದನ್ನು ನಿಮ್ಮ ಆದಾಯ, ಭವಿಷ್ಯದ ಯೋಜನೆ ಹಾಗೂ ಹಣಕಾಸು ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಬಹುದು. ವಿವಿಧ ಬ್ಯಾಂಕುಗಳು ನೀಡುವ ಷರತ್ತುಗಳನ್ನು ಹೋಲಿಸಿ, ಉತ್ತಮ ಯೋಜನೆಯನ್ನು ಆಯ್ಕೆ ಮಾಡಿದರೆ ಸಾಲದ ಒತ್ತಡವನ್ನು ಕಡಿಮೆ ಮಾಡಬಹುದು.
ಸರಿಯಾದ ಯೋಜನೆ ಆಯ್ಕೆ ಮಾಡಿ ನಿಮ್ಮ ಕನಸಿನ ಮನೆಯನ್ನು ಸುಲಭವಾಗಿ ಹೊಂದಿರಿ!