ICRI Samriddhi Scheme: ಶಾಲಾ ಹೆಣ್ಣು ಮಕ್ಕಳಿಗೆ ತ್ಯಾಗರಾಜ ಬ್ಯಾಂಕ್‌ನಿಂದ ಐಸಿರಿ ಸಮೃದ್ಧಿ ಸ್ಕೀಂ(ICRI Samriddhi Scheme) ಹೆಣ್ಣುಮಕ್ಕಳ ಶಿಕ್ಷಣಕ್ಕೆ ₹5 ಲಕ್ಷ ಸಾಲ ಸೌಲಭ್ಯ.

ICRI Samriddhi Scheme: ಶಾಲಾ ಹೆಣ್ಣು ಮಕ್ಕಳಿಗೆ ತ್ಯಾಗರಾಜ ಬ್ಯಾಂಕ್‌ನಿಂದ ಐಸಿರಿ ಸಮೃದ್ಧಿ ಸ್ಕೀಂ(ICRI Samriddhi Scheme) ಹೆಣ್ಣುಮಕ್ಕಳ ಶಿಕ್ಷಣಕ್ಕೆ ₹5 ಲಕ್ಷ ಸಾಲ ಸೌಲಭ್ಯ.

ICRI Samriddhi Scheme

ICRI Samriddhi Scheme: ಬೆಂಗಳೂರು ನಗರದ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್‌ನಿಂದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸರ್ಕಾರಿ ಶಾಲಾ ಹೆಣ್ಣು ಮಕ್ಕಳಿಗೆ ‘ಐಸಿರಿ ಸಮೃದ್ಧಿ’ ಯೋಜನೆ ಪರಿಚಯಿಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಆರ್. ವೆಂಕಟೇಶ್, ಸುಕನ್ಯ ಸಮೃದ್ಧಿ ಯೋಜನೆ ಮಾದರಿಯಲ್ಲಿರುವ ಐಸಿರಿ ಸಮೃದ್ಧಿ ಯೋಜನೆಯಡಿ ಪ್ರಾರಂಭಿಕವಾಗಿ ಪ್ರಾಯೋಜಕರಿಂದ 500 ರು. ಯೊಂದಿಗೆ ಆಯಾ ಶಾಲಾ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲಾಗುತ್ತದೆ. ನಂತರ ವಿದ್ಯಾರ್ಥಿ ಪಾಲಕರು ಖಾತೆಯನ್ನು ಮುಂದುವರೆಸಬೇಕು. ಆ ಮೊತ್ತದ ಮೇಲೆ ವಾರ್ಷಿಕ ಶೇ.8ರಷ್ಟು ಬಡ್ಡಿ ನೀಡಲಾಗುತ್ತದೆ. ಸತತ 5 ವರ್ಷಗಳ ಕಾಲ ವ್ಯವಹಾರ ನಡೆಸಿದರೆ ಅಂತಹ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಜಾಮೀನು ಇಲ್ಲದೇ 5 ಲಕ್ಷ ರು. ಸಾಲ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

• Read more… ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಕೌನ್ಸೆಲಿಂಗ್ ಪ್ರಕ್ರಿಯೆಯ ವೇಳಾಪಟ್ಟಿ ಬಿಡುಗಡೆ.

ಸಹಕಾರ ಕ್ಷೇತ್ರದ ಕುರಿತು ಅರಿವು ಮೂಡಿಸಲು ಅಂತರ ಕಾಲೇಜು ರಸಪ್ರಶ್ನೆ ಕಾರ್ಯಕ್ರಮ, ಆಸಕ್ತ ವಿದ್ಯಾರ್ಥಿಗಳಿಗೆ ಶೂನ್ಯ ಬ್ಯಾಲೆನ್ಸ್ ಉಳಿತಾಯಖಾತೆ ತೆರೆಯುವುದು ಮತ್ತು ಎಟಿಎಂ ಕಾರ್ಡ್ ಗಳನ್ನು ಕೂಡ ನೀಡಲಾಗುತ್ತದೆ.ನ.3 ರಂದುಜಯನಗರ4ನೇಬ್ಲಾಕ್ ನಲ್ಲಿರುವ ಬಿಇಎಸ್ ವಿದ್ಯಾಸಂಸ್ಥೆಯಲ್ಲಿ ನಡೆಯುವ ಸಹಕಾರ ಸಪ್ತಾಹಕಾರ್ಯಕ್ರಮವನ್ನು ಶಾಸಕ ಎಸ್.ಟಿ ಸೋಮಶೇಖರ್‌ಉದ್ಘಾಟಿಸುತ್ತಾರೆ. ನ.20ರಂದು ಎನ್.ಆರ್. ಕಾಲೋನಿಯ ಆಚಾರ್ಯಪಾಠಶಾಲಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ ನಡೆಸಲಾ ಗುತ್ತದೆ ಎಂದು ವೆಂಕಟೇಶ್ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now