ಕೇಂದ್ರ ಸರ್ಕಾರಿ ನೌಕರರಿಗೆ ಪ್ರಮುಖ ಮಾಹಿತಿ ಏಕೀಕೃತ ಪಿಂಚಣಿ ಯೋಜನೆ ಜಾರಿ.
ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ ಮಂಗಳವಾರದಿಂದ ಅಂದರೆ ಇಂದಿನಿಂದಲೇ ಜಾರಿಗೆ ಬರಲಿದೆ. ಯುಪಿಎಸ್ (UPS )ಅನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಒಂದು ಆಯ್ಕೆಯಾಗಿ ಪರಿಚಯಿಸಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಯುಪಿಎಸ್(UPS) ಕಾರ್ಯಾಚರಣೆಗಾಗಿ ನಿಯಮಗಳನ್ನು ಪ್ರಕಟಿಸಿದೆ.
ಈ ನಿಯಮಗಳು ಕೇಂದ್ರ ಸರ್ಕಾರಿ ನೌಕರರ 3 ಗುಂಪುಗಳಿಗೆ ಸಂಬಂಧಿಸಿವೆ. 1ನೇ ವರ್ಗವು ಏಪ್ರಿಲ್ 1, 2025 ರಂದು ಸೇವೆಯಲ್ಲಿರುವ ಅಸ್ತಿತ್ವದಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಿಯನ್ನು ಒಳಗೊಂಡಿದ್ದು, ಅವರು ಎನ್‌ಪಿಎಸ್(NPS) ವ್ಯಾಪ್ತಿಗೆ ಒಳಪಡುತ್ತಾರೆ.
ಆದರೆ, 2ನೇ ವರ್ಗವು ಏಪ್ರಿಲ್ 1, 2025ರಂದು ಅಥವಾ ನಂತರ ಸೇವೆಗೆ ಸೇರುವ ಕೇಂದ್ರ ಸರ್ಕಾರಿ ಸೇವೆಗಳಲ್ಲಿ ಹೊಸದಾಗಿ ನೇಮಕಗೊಂಡವರನ್ನು ಒಳಗೊಂಡಿದೆ. 3ನೇ ವರ್ಗವು ಎನ್‌ಪಿಎಸ್(NPS)ನ ಭಾಗವಾಗಿದ್ದ ಮತ್ತು ಈ ತಿಂಗಳ 31ರಂದು ಅಥವಾ ಅದಕ್ಕೂ ಮೊದಲು ನಿವೃತ್ತರಾದ ಕೇಂದ್ರ ಸರ್ಕಾರಿ ನೌಕರರನ್ನು ಒಳಗೊಂಡಿದೆ.
ನಿಯಮಿತ ನಿವೃತ್ತಿ ಅಥವಾ ಸ್ವಯಂಪ್ರೇರಿತ ನಿವೃತ್ತಿಯ ಮೂಲಕ ಯುಪಿಎಸ್(UPS)ಗೆ ಅರ್ಹರಾಗಿರುತ್ತಾರೆ. ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗಿದೆ. ಜನವರಿ 1, 2004ರಂದು ಅಥವಾ ನಂತರ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಾಗೂ ಭವಿಷ್ಯದಲ್ಲಿ ಸೇರಲಿರುವವರಿಗೆ ಯುಪಿಎಸ್(UPS) ಮುಕ್ತವಾಗಿದೆ. NPSನಿಂದ UPSಗೆ ಬದಲಾಯಿಸುವ ಆಯ್ಕೆಯೊಂದಿಗೆ.
ಕೇಂದ್ರ ಸರ್ಕಾರಿ ನೌಕರರಿಗೆ ಈ ಹೊಸ ಪಿಂಚಣಿ ಚೌಕಟ್ಟಿಗೆ ಸೇರಲು, ಅರ್ಹ ಉದ್ಯೋಗಿಗಳು ಏಪ್ರಿಲ್ 1ರಿಂದ ಪ್ರೋಟೀನ್ CRA ಪೋರ್ಟಲ್ ಮೂಲಕ ತಮ್ಮ ದಾಖಲಾತಿಗಳನ್ನು ಮತ್ತು ಕ್ಲೇಮ್ ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಈ ಯೋಜನೆಯು 25 ವರ್ಷಗಳ ಕನಿಷ್ಠ ಅರ್ಹತಾ ಸೇವೆಗಾಗಿ ನಿವೃತ್ತಿಗೆ ಮೊದಲು ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ 50 ಪ್ರತಿ ಶತದಷ್ಟು ಪಿಂಚಣಿಯನ್ನು ಖಚಿತಪಡಿಸುತ್ತದೆ.
ಉದ್ಯೋಗಿ ನಿಧನರಾದ ಸಂದರ್ಭದಲ್ಲಿ ಕುಟುಂಬವು ಪಿಂಚಣಿಯ 60 ಪ್ರತಿ ಶತವನ್ನು ಪಡೆಯುತ್ತದೆ. ಯುಪಿಎಸ್(UPS) ಯೋಜನೆಯಡಿಯಲ್ಲಿ, ಕನಿಷ್ಠ 10 ವರ್ಷಗಳ ಸೇವೆಯ ನಂತರ ತಿಂಗಳಿಗೆ ಕನಿಷ್ಠ 10,000 ರೂಪಾಯಿಗಳ ಪಿಂಚಣಿಯನ್ನು ಸಹ ಖಾತರಿಪಡಿಸಲಾಗುತ್ತದೆ.