Karnataka Labour Welfare Board Scholarship 2026: ಕಾರ್ಮಿಕರ ಮಕ್ಕಳಿಗೆ ₹35,000 ವೇತನ ಮಿತಿಯೊಳಗೆ ಶೈಕ್ಷಣಿಕ ಪ್ರೋತ್ಸಾಹ ಧನ! 2026-27ಕ್ಕೆ ಅರ್ಜಿ ಆಹ್ವಾನ – ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?

Karnataka Labour Welfare Board Scholarship 2026: ಕಾರ್ಮಿಕರ ಮಕ್ಕಳಿಗೆ ₹35,000 ವೇತನ ಮಿತಿಯೊಳಗೆ ಶೈಕ್ಷಣಿಕ ಪ್ರೋತ್ಸಾಹ ಧನ! 2026-27ಕ್ಕೆ ಅರ್ಜಿ ಆಹ್ವಾನ – ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?

ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ – ಅರ್ಜಿ ಆರಂಭ

Karnataka Labour Welfare Board Scholarship 2026: ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಅಧೀನದಲ್ಲಿರುವ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2026-27ನೇ ಸಾಲಿನ ಶೈಕ್ಷಣಿಕ ಪ್ರೋತ್ಸಾಹ ಧನ (Educational Incentive Assistance) ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮತ್ತು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ (Contribution) ಪಾವತಿಸುವ ಕಾರ್ಮಿಕರ ಮಕ್ಕಳಿಗೆ ಈ ಯೋಜನೆಯಡಿಯಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ಪ್ರೌಢಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

Karnataka Labour Welfare Board Scholarship 2026: ಯೋಜನೆಯ ಪ್ರಮುಖ ಉದ್ದೇಶ

ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ನೀಡುವುದು ಮತ್ತು ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Karnataka Labour Welfare Board Scholarship 2026: ಪ್ರಮುಖ ಮಾಹಿತಿ

  • ಯೋಜನೆ: ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ
  • ಇಲಾಖೆ: ಕರ್ನಾಟಕ ಕಾರ್ಮಿಕ ಇಲಾಖೆ
  • ಮಂಡಳಿ: ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ
  • ಅರ್ಜಿ ವಿಧಾನ: ಆನ್‌ಲೈನ್
  • ಅರ್ಜಿ ಸಲ್ಲಿಸುವವರು: ಸಂಘಟಿತ ಕಾರ್ಮಿಕರ ಮಕ್ಕಳು
  • ಕೊನೆಯ ದಿನಾಂಕ: 31 ಡಿಸೆಂಬರ್ 2026

Karnataka Labour Welfare Board Scholarship 2026 Pepar News Link – Click Here Download

ಯಾರು ಅರ್ಜಿ ಸಲ್ಲಿಸಬಹುದು?

ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

  • ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳು.
  • ಪ್ರೌಢಶಾಲೆ, ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.
  • ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಧನ ಸಹಾಯ ಲಭ್ಯ.
ವೇತನ ಮಿತಿ

ಅರ್ಜಿ ಸಲ್ಲಿಸುವ ಕಾರ್ಮಿಕರ ಮಾಸಿಕ ವೇತನ ರೂ.35,000ಕ್ಕಿಂತ ಹೆಚ್ಚಿರಬಾರದು.

ಅಂಕಗಳ ಅರ್ಹತೆ

ಹಿಂದಿನ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಈ ಕೆಳಗಿನ ಅಂಕಗಳನ್ನು ಪಡೆದಿರಬೇಕು.

  • ಸಾಮಾನ್ಯ ವರ್ಗ (General Category): ಕನಿಷ್ಠ 50%
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST): ಕನಿಷ್ಠ 45%
ಯಾವ ಯಾವ ಕೋರ್ಸ್‌ಗಳಿಗೆ ಅನ್ವಯಿಸುತ್ತದೆ?

ಈ ಯೋಜೆಯಡಿ ಕೆಳಗಿನ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

  • ಪ್ರೌಢಶಾಲೆ
  • ಪಿಯುಸಿ
  • ಐಟಿಐ
  • ಡಿಪ್ಲೊಮಾ
  • ಪದವಿ
  • ಸ್ನಾತಕೋತ್ತರ
  • ವೈದ್ಯಕೀಯ
  • ಇಂಜಿನಿಯರಿಂಗ್
ಅರ್ಜಿ ಸಲ್ಲಿಸುವ ವಿಧಾನ(How to apply)

ಅರ್ಹ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.

ಅಗತ್ಯ ದಾಖಲೆಗಳು

ಸಾಮಾನ್ಯವಾಗಿ ಈ ಕೆಳಗಿನ ದಾಖಲೆಗಳು ಅಗತ್ಯವಾಗಬಹುದು.

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಹಿಂದಿನ ವರ್ಷದ ಅಂಕಪಟ್ಟಿ
  • ಅಧ್ಯಯನ ಪ್ರಮಾಣ ಪತ್ರ
  • ಕಾರ್ಮಿಕರ ಗುರುತಿನ ವಿವರ
  • ವೇತನ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
ಕೊನೆಯ ದಿನಾಂಕ(Karnataka Labour Welfare Board Scholarship 2026)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2026
  • ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.
ಹೆಚ್ಚಿನ ಮಾಹಿತಿಗೆ

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಸಂಪರ್ಕಿಸಬಹುದು.

ವಿಳಾಸ:
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ,
ಕಾರ್ಮಿಕ ಕಲ್ಯಾಣ ಭವನ,
ನಂ.48, 1ನೇ ಮತ್ತು 2ನೇ ಮಹಡಿ,
ಮತ್ತಿಕೆರೆ ಮುಖ್ಯರಸ್ತೆ,
ಯಶವಂತಪುರ,
ಬೆಂಗಳೂರು – 560022.

ದೂರವಾಣಿ:

• 080-23475188
• 8277291175
• 8277120505
• 9141585402
• 9141602562

ಪ್ರಮುಖ ಅಂಶಗಳು (Quick Highlights)
  1. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ
  2. ಪ್ರೌಢಶಾಲೆಯಿಂದ ಸ್ನಾತಕೋತ್ತರವರೆಗೆ ಅವಕಾಶ
  3. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಅನ್ವಯ
  4. ಕುಟುಂಬಕ್ಕೆ ಗರಿಷ್ಠ ಇಬ್ಬರಿಗೆ ಮಾತ್ರ ಸೌಲಭ್ಯ
  5. ವೇತನ ಮಿತಿ ₹35,000
  6. General – 50%, SC/ST – 45% ಅಂಕ ಕಡ್ಡಾಯ
  7. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2026
FAQ

1. ಈ ಯೋಜೆಗೆ ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಬಹುದು.

2. ಕುಟುಂಬದಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗುತ್ತದೆ?

ಗರಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ.

3. ವೇತನ ಮಿತಿ ಎಷ್ಟು?

ಕಾರ್ಮಿಕರ ಮಾಸಿಕ ವೇತನ ₹35,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.

4. ಕನಿಷ್ಠ ಎಷ್ಟು ಅಂಕಗಳು ಬೇಕು?

General ವರ್ಗಕ್ಕೆ 50% ಹಾಗೂ SC/ST ವರ್ಗಕ್ಕೆ 45% ಅಂಕಗಳು ಕಡ್ಡಾಯ.

5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

31 ಡಿಸೆಂಬರ್ 2026.

WhatsApp Group Join Now
Telegram Group Join Now