Karnataka Police Recruitment:ಕರ್ನಾಟಕ ರಾಜ್ಯ ಪೊಲೀಸ್(Karnataka Police) ಇಲಾಖೆ ವತಿಯಿಂದ ಭರ್ಜರಿ ನೇಮಕಾತಿ, ಕಾನ್‌ಸ್ಟೇಬಲ್, PSI ಸೇರಿ 4800+ ಪೊಲೀಸ್ ಹುದ್ದೆಗಳ ನೇಮಕಾತಿ-2025.

Karnataka Police Recruitment:ಕರ್ನಾಟಕ ರಾಜ್ಯ ಪೊಲೀಸ್(Karnataka Police) ಇಲಾಖೆ ವತಿಯಿಂದ ಭರ್ಜರಿ ನೇಮಕಾತಿ, ಕಾನ್‌ಸ್ಟೇಬಲ್, PSI ಸೇರಿ 4800+ ಪೊಲೀಸ್ ಹುದ್ದೆಗಳ ನೇಮಕಾತಿ-2025.

Karnataka Police

Karnataka Police Recruitment:ಕರ್ನಾಟಕ ರಾಜ್ಯ ಪೊಲೀಸ್(Karnataka Police) ಇಲಾಖೆ ವತಿಯಿಂದ ಭರ್ಜರಿ ನೇಮಕಾತಿ ನಡೆಯಲಿದೆ. ಸಾವಿರಾರು ಹುದ್ದೆಗಳು ಖಾಲಿ ಇವೆ. ಆಸಕ್ತರು ಅಧಿಕೃತ www.ksp.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಸುಮಾರು 4,800ಕ್ಕೂ ಅಧಿಕ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ. ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ (Karnataka Police) ಇಲಾಖೆಯು ನೇಮಕಾತಿ 2025 ಪ್ರಕ್ರಿಯೆ ಇನ್ನೇನು ಆರಂಭಿಸಲಿದೆ. ಒಟ್ಟು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳು 600ಕ್ಕೂ ಅಧಿಕ ಖಾಲಿ ಇವೆ. ಮತ್ತು 4000ಕ್ಕೂ ಅಧಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇವೆ. ಇವುಗಳ ನೇಮಕಾತಿಗೆ ಶೀಘ್ರವೇ ಪೊಲೀಸ್ ಇಲಾಖೆ ಅಧಿಸೂಚನೆ ಬಿಡುಗಡೆ ಮಾಡಲಿದೆ.

ಕರ್ನಾಟಕ ಪೊಲೀಸ್ ಉದ್ಯೋಗಗಳಿಗೆ ಅರ್ಹತೆ ಏನಿರಬೇಕು, ಅರ್ಜಿ ಸಲ್ಲಿಕೆ ಹೇಗೆ, ಪ್ರಮುಖ ದಿನಾಂಕ ಇತರ ಮಾಹಿತಿ ಇಲ್ಲಿದೆ. KSP Recruitment 2025 ಬೃಹತ್ ನೇಮಕಾತಿ ಅಭಿಯಾನ ನಡೆಯಲಿದೆ. ಕರ್ನಾಟಕ ಪೊಲೀಸ್(Karnataka Police) ಇಲಾಖೆ ವಿವಿಧ 4,800 ಕ್ಕೂ ಹೆಚ್ಚು ಅತ್ಯಾಕರ್ಷಕ ಹುದ್ದೆಗಳ ಭರ್ತಿ ಮಾಡಿಕೊಳ್ಳಲಿದೆ.

ಹುದ್ದೆಗಳ ಮಾಹಿತಿ ಇನ್ನಷ್ಟು ವಿವರವಾಗಿ ನೋಡುವುದಾದರೆ, ಒಟ್ಟು ಹುದ್ದೆಗಳಲ್ಲಿ 1,000 ಕ್ಕೂ ಹೆಚ್ಚು ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿವೆ. 2,000 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ಗಳು, 1,500 ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್‌ಗಳು (SRPC – KSRP),  ಹಾಗೂ 300 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಹುದ್ದೆಗಳು ಇವೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಸಾರ್ವಜನಿಕರಿಗೆ ಸೇವಾ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಇಚ್ಛಿಸಿದರೆ, ಪೊಲೀಸ್ ಪಡೆಗಳಲ್ಲಿ ಸೇವೆ ಮಾಡಲು ಬಯಸಿದ್ದರೆ ನೇಮಕಾತಿ ಅಧಿಸೂಚನೆ ಬಿಡುಗಡೆ ಆಗುತ್ತಿದ್ದಂತೆ ಅರ್ಜಿ ಸಲ್ಲಿಸಿ

Karnataka Police: ವಿದ್ಯಾರ್ಹತೆ.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವವರು CBSE, ICSE,  ಹಾಗೂ SSE ಸೇರಿದಂತೆ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 2 PUC ಉತ್ತೀರ್ಣವಾಗಿರಬೇಕು.

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಸೇರಬಯಸುವವರು SSLC ( ಹತ್ತನೇ ತರಗತಿ) ಯಲ್ಲಿ ಉತ್ತೀರ್ಣವಾಗಿರಬೇಕು.

• ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (SRPC-KSRP) ಹುದ್ದೆಗೆ ಅರ್ಜಿ ಹಾಕುವವರು SSLC ಅಥವಾ 2 puc ಅರ್ಹತೆ ಪಡೆದಿರಬೇಕು.
• ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಹುದ್ದೆಗೆ ಯಾವುದೇ ವಿಶ್ವ ವಿದ್ಯಾಲಯ ಹಾಗೂ ಮಾನ್ಯತೆ ಪಡೆದ ಮಂಡಳಿಯಿಂದ ಪದವಿ ಪಡೆದಿರಬೇಕು. ಅಂಥವರು ಅರ್ಜಿ ಸಲ್ಲಿಸಬಹುದು.

Karnataka Police:ಆಯ್ಕೆ ಹೇಗೆ?

ಈ ಪೊಲೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ  ಮತ್ತು ಸಂದರ್ಶನ ಮೂಲಕ ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Karnataka Police: ವಯೋಮಿತಿ ಸಡಿಲಿಕೆ.

ಪೊಲೀಸ್ ಇಲಾಖೆಗಳ ನಿಯಮದಂತೆ ಅಭ್ಯರ್ಥಿಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯಸ್ಸು ಇರಬೇಕು. ಜಾತಿ ಆಧಾರದಲ್ಲಿ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಬಹುದು. ಕರ್ನಾಟಕ ಯಾವುದೇ ಭಾಗದಲ್ಲಿ ಆದರು ಉದ್ಯೋಗ ನೀಡಬಹುದು ಎಂದು ನೇಮಕಾತಿ ಇಲಾಖೆ ಮೂಲಗಳೂ ಮಾಹಿತಿ ನೀಡಿವೆ.

ಶೀಘ್ರವೇ ನೇಮಕಾತಿ ಕುರಿತು ಮಹತ್ವದ ಆದೇಶ ಆಗುವ ಸಾಧ್ಯತೆ ಇದೆ. ದಿನಾಂಕಗಳು, ನೇಮಕಾತಿ ಪ್ರಕ್ರಿಯೆ ಆರಂಭ, ಹಾಗೂ ಅರ್ಜಿ ಸಲ್ಲಿಕೆ, ಶುಲ್ಕ ವಿನಾಯಿತಿ, ಇನ್ನಿತರ ಅಂಶಗಳು ಶೀಘ್ರವೇ ಗೊತ್ತಾಗಲಿದೆ.

Karnataka Police:ನೇಮಕಾತಿ ಸಂಕ್ಷಿಪ್ತ ಮಾಹಿತಿ.

ನೇಮಕಾತಿ ಸಂಸ್ಥೆ: ಕರ್ನಾಟಕ ಪೊಲೀಸ್ ಇಲಾಖೆ
ಒಟ್ಟು ಹುದ್ದೆಗಳು: 4,800 ಕ್ಕೂ ಅಧಿಕ
  ಉದ್ಯೋಗ ಸ್ಥಳ: ಕರ್ನಾಟಕ
• ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
• ವಯೋಮಿತಿ: ನಿಯಮಾನುಸಾರ
• ಅಧಿಸೂಚನೆ: ಶೀಘ್ರವೇ ಬಿಡುಗಡೆ

WhatsApp Group Join Now
Telegram Group Join Now

Leave a Comment