Karnataka SSLC Results 2025: SSLC ಫಲಿತಾಂಶದ ಬಗ್ಗೆ ಶಿಕ್ಷಣ ಇಲಾಖೆಯಿಂದ ಪ್ರಮುಖವಾದ ಮಾಹಿತಿ ನೀಡಿದೆ.
Karnataka SSLC Results 2025:ಮಾರ್ಚ್ 21ರಿಂದ ಏ.4ರವರೆಗೆ ನಡೆದ SSLC ಪರೀಕ್ಷೆ-1ರ ಫಲಿತಾಂಶವು ಇದೇ ಮೇ ತಿಂಗಳ ದಿನಾಂಕ 2ರಂದು ಪ್ರಕಟವಾಗುವ ಸಾಧ್ಯತೆಗಳಿವೆ. ಈಗಾಗಲೇ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಕೆಲವು ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಒಂದೆರಡು ದಿನಗಳಲ್ಲಿ ಆ ಕೆಲಸ ಕೂಡ ಮುಗಿಯಲಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಗಳು ತಿಳಿಸಿವೆ.
ಮೇ 1ರಂದು ಇವತ್ತು ಕಾರ್ಮಿಕರ ದಿನದ ಅಂಗವಾಗಿ ಸಾರ್ವತ್ರಿಕ ರಜೆ ಇರಲಿದೆ. ಹೀಗಾಗಿ ಮೇ 2 ಅಥವಾ 3ರಂದು ಫಲಿತಾಂಶ ಪ್ರಕಟವಾಗಬಹುದು. ಈ ಸಂಬಂಧ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಂದು ತಿಳಿಸಿದ್ದಾರೆ. ಮಾ.21ರಿಂದ ಏ.4ರವರೆಗೆ ನಡೆದಿದ್ದ ಪರೀಕ್ಷೆಗೆ ದಾಖಲೆಯ 8.93 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.