Karnataka State Child Protection Policy-2016:ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳಲ್ಲಿ NCPCR ಮಾರ್ಗಸೂಚಿಯಂತೆ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯ ಕುರಿತು ಕೈಗೊಂಡಿರುವ ಕ್ರಮದ ವರದಿಯ ಬಗ್ಗೆ.
Karnataka State Child Protection Policy-2016:ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016ಅನ್ನು ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿನ ಮಕ್ಕಳ ಸುರಕ್ಷತೆ ಕುರಿತಂತೆ ಪೋಷಕರು, ಶಾಲಾ ಆಡಳಿತ ಮಂಡಳಿ ಮತ್ತು ಸರ್ಕಾರವನ್ನು ಜವಾಬ್ದಾರರಾಗಿಸಲು ಹಾಗೂ ಸಕಾಲಕ್ಕೆ ಸ್ಪಂದಿಸುವ ಹಾಗೂ ದೂರು ನಿವಾರಣೆ ವ್ಯವಸ್ಥೆಯನ್ನು ಸಮನ್ವಯಾತ್ಮಕ ಕ್ರಮಗಳ ಮೂಲಕ ಜಾರಿಗೊಳಿಸಿ ಸುರಕ್ಷತಾ ಕ್ರಮವಹಿಸಲು ಉಲ್ಲೇಖ-1ರನ್ವಯ ಸೂಚಿಸಲಾಗಿರುತ್ತದೆ.
ಉಲ್ಲೇಖ-2ರ ಎನ್.ಸಿ.ಪಿ.ಸಿ.ಆರ್ ರವರು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ಮಾರ್ಗಸೂಚಿ-2021 ರಲ್ಲಿನ ಸೆಕ್ಷನ್-5ರಲ್ಲಿ ಸೂಚಿಸಿರುವಂತೆ ಆರ್.ಟಿ.ಇ ಕಾಯ್ದೆ-2009 ರ ಸೆಕ್ಷನ್-21 ರನ್ವಯ ಸರ್ಕಾರಿ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಹಾಗೂ NCPCR ಮಾರ್ಗಸೂಚಿಯಂತೆ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪಿ.ಟಿ.ಎ (Parent Teachers Association)ಯನ್ನು ರಚಿಸಿ. ಅವುಗಳ ಮೂಲಕ ಮಕ್ಕಳ ಸುರಕ್ಷತೆ ಕುರಿತಂತೆ ಕ್ರಮವಹಿಸಿರುವ ಬಗ್ಗೆ ಮೇಲ್ವಿಚಾರಣೆಯನ್ನು ನಡೆಸಲು ಚೆಕ್ಲೀಸ್ಟ್ನ್ನು ನಿಗದಿಪಡಿಸಲಾಗಿರುತ್ತದೆ. ಹಾಗೂ ಸದರಿ ಸಮಿತಿಗಳು ತ್ರೈಮಾಸಿಕವಾಗಿ ಚೆಕ್ಲೀಸ್ಟ್ನಂತೆ ಶಾಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಅನುಪಾಲನೆ ಮಾಡಲು ಸೂಚಿಸಲಾಗಿರುತ್ತದೆ.
-
Read more…
7th Pay Commission: 7ನೇ ವೇತನ ಆಯೋಗದ 2ನೇ ವರದಿ, ಭತ್ಯೆ ಪಾವತಿ ಬಗ್ಗೆ ಸರ್ಕಾರಿ ನೌಕರರ ಬೇಡಿಕೆ-2025.
ಉಲ್ಲೇಖ-3ರನ್ವಯ ಶಾಲೆಗಳಲ್ಲಿ ಶಾಲಾ ಸುರಕ್ಷತೆ ಮತ್ತು ಭದ್ರತೆ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಶಾಲಾ ಸುರಕ್ಷತಾ ಸಮಿತಿಯ ರಚನೆ, ಸಮಿತಿಯ ಜವಾಬ್ದಾರಿಗಳು ಮತ್ತು ಶಾಲೆಯಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ತಿಳಿಸಲಾಗಿರುತ್ತದೆ.
-
Read more…
IRCTC Recruitment 2025:ಭಾರತೀಯ ರೈಲ್ವೆಯ ಪ್ರವಾಸೋದ್ಯಮ ಮಾಸಿಕ ₹30,000 ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ.
Karnataka State Child Protection Policy-2016: ಈ ಸುತ್ತೋಲೆಯೊಂದಿಗೆ ಅನುಬಂಧಿಸಿರುವ ಎನ್.ಸಿ.ಪಿ.ಸಿ.ಆರ್. ಮಾರ್ಗನೂಚಿಯನ್ವಯ ಶಾಲೆಗಳಲ್ಲಿ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
1. ಎಸ್.ಡಿ.ಎಂ.ಸಿ ಸಭೆ/ಪೋಷಕರ ಸಭೆಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಶಾಲೆ/ಸಂಸ್ಥೆಯವರು ತೆಗೆದುಕೊಂಡಿರುವ ಕ್ರಮಗಳ ಕುರಿತು ಅರಿವು ಮೂಡಿಸುವುದು.
2. ಎನ್.ಸಿ.ಪಿ.ಸಿ.ಆರ್. ಚೆಕ್ಲೀಸ್ಟ್ನಂತೆ ಶಾಲೆಯ ಸುರಕ್ಷತಾ ಅಂಶಗಳನ್ನು ಪರಿಶೀಲಿಸಿ, ಅಂಶವಾರು ಸ್ಥಿತಿ ದಾಖಲಿಸಿ ವರದಿಯನ್ನು ಸಮಿತಿಯು ದೃಢೀಕರಿಸುವುದು.
3. ಶಾಲಾ ಮುಖ್ಯಸ್ಥರು ವರದಿಯನ್ನಾಧರಿಸಿ ಶಾಲಾ ಮಕ್ಕಳ ಸುರಕ್ಷತೆ ನಿಯಮಗಳನ್ನು ಅನುಷ್ಠಾನಗೊಳಿಸಲು ತ್ವರಿತವಾಗಿ ಅನುಷ್ಠಾನಗೊಳಿಸಬೇಕಾದ ಯೋಜನೆಯನ್ನು ಸಿದ್ಧಪಡಿಸುವುದು. ಸಮಿತಿಯ ಸಹಕಾರದೊಂದಿಗೆ
4. ಶಾಲಾ ಮಕ್ಕಳ ಸುರಕ್ಷತೆಗಾಗಿ ಅನುಷ್ಠಾನಗೊಳಿಸಬೇಕಾದ ಅಂಶಗಳನ್ನು ನಿಗದಿತ ಕಾಲಮಿತಿಯನ್ನು ದಾಖಲಿಸಿ ಯೋಜನೆ ಸಿದ್ಧಪಡಿಸುವುದು.
5. ಯೋಜನೆಯಂತೆ ನಿಗದಿತ ಕಾಲಮಿತಿಯೊಳಗೆ ಖಾತ್ರಿಪಡಿಸಿಕೊಳ್ಳುವುದು, ಅನುಷ್ಠಾನಗೊಳಿಸಿರುವುದನ್ನು ಸಮಿತಿಯು
ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಶಾಲಾ ಸುರಕ್ಷತಾ ಸಮಿತಿಯು ಎಸ್.ಡಿ.ಎಂ.ಸಿ / ಪಿ.ಟಿ.ಎ (Parent Teachers Association) ಮೂಲಕ ಉಲ್ಲೇಖ 2ರಲ್ಲಿ ನಿಗದಿಪಡಿಸಿರುವ ಚೆಕ್ಲೀನ್ಟ್ನಂತೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿರುವ ಬಗ್ಗೆ. ಪ್ರತಿ 03 ತಿಂಗಳಿಗೊಮ್ಮೆ ಪರಿಶೀಲಿಸಿರುವ ಮತ್ತು ಮೇಲ್ವಿಚಾರಣೆಯನ್ನು ನಡೆಸಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಂದ ಮಾಹಿತಿ ಮತ್ತು ದೃಢೀಕರಿಸಿದ ಚೆಕ್ ಲಿಸ್ಟ್ ಅನ್ನು ಪಡೆದು ಸಂರಕ್ಷಿಸಿಡುವುದು:
ಪ್ರತಿ ಶೈಕ್ಷಣಿಕ ವರ್ಷದ ಆಗಸ್ಟ್, ನವೆಂಬರ್ ಮತ್ತು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಶಾಲೆಗಳಿಂದ ಪರಿಶೀಲನಾ ವರದಿಯನ್ನು ನಡೆದು ಕ್ರೋಢೀಕೃತ ಮಾಹಿತಿಯನ್ನು ಈ ಕೆಳಕಂಡ ನಮೂನೆಯಲ್ಲಿ ರಾಜ್ಯ ಕಚೇರಿಗೆ ತಪ್ಪದೇ ಸಲ್ಲಿಸಲು ಸೂಚಿಸಿದೆ.