KCET RESULT 2025:ಸಿಇಟಿ ಫಲಿತಾಂಶ ಲಭ್ಯವಾಗದ ವಿದ್ಯಾರ್ಥಿಗಳಿಗೆ ಕೆಇಎ(KEA) ಪ್ರಮುಖವಾದ ಮಾಹಿತಿಯನ್ನು ನೀಡಿದೆ.
KCET RESULT 2025:ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಾಧಿಕಾರ ಕೆಇಎ(KEA) ನಡೆಸಿದ್ದ ಸಿಇಟಿ ಪರೀಕ್ಷೆ (KCET RESULT 2025)ಇಂದು (ಮೆ 24) ಪ್ರಕಟವಾಗಿದೆ. ಆದರೆ ಕೆಲ ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಪ್ರಕಟ ಆಗಿಲ್ಲ. ಆದ್ದರಿಂದ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಈ ಬಾರಿ ಸುಮಾರು 3,30,000 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು, 3,11,000 91 ಹಾಜರಾಗಿದ್ದರು. ಈ ಪೈಕಿ ಸಿಇಟಿ(CET)ಯಲ್ಲಿ 2, 62,195 ಮಂದಿ ಇಂಜಿನಿಯರ್ ರ‍್ಯಾಂಕ್ ಪಡೆದಿದ್ದಾರೆ. ಇಂದು ಸಿಇಟಿ-2025ರ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇನ್ನೂ ಕೆಲವು ಅಭ್ಯರ್ಥಿಗಳು ಹಿಂದಿನ ವರ್ಷದಲ್ಲಿ ದ್ವಿತೀಯ ಪಿಯುಸಿ(2 PUC) ಪರೀಕ್ಷೆಗಳಲ್ಲಿ ತೇರ್ಗಡೆ ಆಗಿದ್ದಾರೆ. ಆದರೆ ಫಲಿತಾಂಶ ಪ್ರಕಟವಾಗಿಲ್ಲ ಎಂದು ಮನವಿಗಳನ್ನು ಸಲ್ಲಿಸುತ್ತಿರುತ್ತಾರೆ.
CET-2025ರ ಫಲಿತಾಂಶವನ್ನು ಪ್ರಕಟಿಸುವ ಮೊದಲು 2 ಪಿಯುಸಿ ಅಂಕಗಳನ್ನು ಆಯಾ ಮಂಡಳಿಗಳಿಂದಲೇ ಪಡೆಯಲಾಗುವುದು ಎಂದು ಸೂಚಿಸಲಾಗಿತ್ತು ಮತ್ತು ಅಭ್ಯರ್ಥಿಗಳು ಸರಿಯಾದ ನೊಂದಣಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದು ಸೂಚಿಸಲಾಗಿರುತ್ತದೆ.
ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸದ ಕಾರಣ ಸಿಇಟಿ-2025ರ ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳಿಗೆ ಅಂಕಗಳನ್ನು ದಾಖಲಿಸಲು ಅವಕಾಶ ನೀಡುವ ಸಲುವಾಗಿ, ಮೇ 26, 2025ರಿಂದ ಆನ್‌ಲೈನ್ ಲಿಂಕ್ ಅನ್ನು ತೆರೆಯಲಾಗುವುದು. ಆ ಲಿಂಕ್‌ನಲ್ಲಿ ಅಭ್ಯರ್ಥಿಗಳು ದ್ವಿತೀಯ ಪಿಯು ಅಂಕಗಳನ್ನು ನೋಂದಣಿ ಸಂಖ್ಯೆಯೊಂದಿಗೆ ದಾಖಲಿಸಬೇಕು ಹಾಗೂ ಅಂಕಪಟ್ಟಿಯನ್ನು ಅಪ್ಲೋಡ್ ಮಾಡಬೇಕು.
ಅಭ್ಯರ್ಥಿಗಳು ದಾಖಲಿಸುವ ಅಂಕಗಳನ್ನು ಆಯಾ ಪರೀಕ್ಷಾ ಮಂಡಳಿಯಿಂದ ಪರಿಶೀಲಿಸಿ ಧೃಡೀಕರಿಸಿದ ನಂತರವೇ ಸ್ಪಾಟ್ ರ‍್ಯಾಂಕ್ ಅನ್ನು ಮೇ 29 2025ರಿಂದ ನೀಡಲು ಕ್ರಮವಹಿಸಲಾಗುವುದು. ಸ್ಪಾಟ್ ರ‍್ಯಾಂಕ್ ಅನ್ನು ಪಡೆಯಲು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.