KKRTC Job Recruitment: SSLC ಪಾಸಾದವರಿಗೂ ಚಾಲಕ/ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರಿಗೆ ಹೆಚ್ಚಿನ ಮಾಹಿತಿ ಇಲ್ಲಿದೆ 2024-25.
KKRTC Job Recruitment: ಶಕ್ತಿ ಯೋಜನೆ ಬಳಿಕ ವಿವಿಧ ನಿಗಮಗಳಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿವ ಸಾರಿಗೆ ನಿಗಮಗಳ ಪೈಕಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (KKRTC) ಹೊಸದಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ. 10ನೇ ತರಗತಿ ಉತ್ತೀಣ ಆದವರೂ ಸಹ ಸರ್ಕಾರಿ ಹುದ್ದೆ ಪಡೆಯಬಹುದು. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಕೆಕೆಆರ್‌ಟಿಸಿ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (KKRTC) ಒಟ್ಟು 150 ಬಸ್ ಚಾಲಕ ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಉದ್ಯೋಗದಲ್ಲಿ ಆಸಕ್ತಿ ಇರುವ ಕನಿಷ್ಠ ವಿದ್ಯಾರ್ಹತೆ ಇರುವವರು ಕೂಡ ಈ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನಾಂಕವಾಗಿದೆ. ಮಾಸಿಕ ವೇತನ, ವಯಸ್ಸು ಸೇರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
KKRTC ನೇಮಕಾತಿ ಪೂರ್ಣ ವಿವರ.
• ನೇಮಕಾತಿ ಸಂಸ್ಥೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (KKRTC)
• ನೇಮಕಾತಿ ಹುದ್ದೆಗಳು: ಬಸ್ ಚಾಲಕ, ತಾಂತ್ರಿಕ ಸಹಾಯಕ
• ಬಸ್ ಚಾಲಕ ಹುದ್ದೆ: 100
• ತಾಂತ್ರಿಕ ಸಹಾಯಕ ಹುದ್ದೆ: 50
• ಒಟ್ಟು ಹುದ್ದೆಗಳು: 150
• ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್
• ಶೈಕ್ಷಣಿ ವಿದ್ಯಾರ್ಹತೆ: ಹತ್ತನೇ ತರಗತಿ ಪಾಸ್ ಕಡ್ಡಾಯ
• ಅರ್ಜಿ ಸಲ್ಲಿಕೆ ಕೊನೆ ದಿನ: ಡಿಸೆಂಬರ್ 04
• ಉದ್ಯೋಗ ಸ್ಥಳ: ಬೀದರ್ (ಕಲ್ಯಾಣ ಕರ್ನಾಟಕ)
ಆಯ್ಕೆಯ ವಿಧಾನ:
ನೇರ ಸಂದರ್ಶನ
ವಿದ್ಯಾರ್ಹತೆ: ಚಾಲಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. ಮುಕ್ತ ವಿವಿಯಿಂದ ಪಡೆದ ಎಸ್‌ಎಸ್‌ಸಿ 500 ಅಂಕಗಳ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ. ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ ಚಾಲನಾ ಪರವಾನಿಗೆ ಪಡೆದು ಕನಿಷ್ಠ 2 ವರ್ಷಗಳಾಗಿರಬೇಕು. ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್ ಹೊಂದಿರಬೇಕು.
ಅಭ್ಯರ್ಥಿಗಳ ವಯೋಮಿತಿ.
ಈ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳ ಕನಿಷ್ಠ 18 ಹಾಗೂ ಗರಿಷ್ಠ ವಯಸ್ಸು 24 ವರ್ಷವೆಂದು ನಿಗದಿಪಡಿಸಲಾಗಿದೆ. ಜಾತಿ ಮೀಸಲಾತಿ ಆಧಾರದಲ್ಲಿ ತುಸು ವಯೋಮಿತಿಯಲ್ಲಿ ಸಡಿಲಿಕೆ ಸಿಗಬಹದು. ಒಮ್ಮೆ ಅಧಿಸೂಚನೆ ಪರಿಶೀಲಿಸಿಕೊಳ್ಳಿ.
ತಾಂತ್ರಿಕ ಸಹಾಯಕರ ಹುದ್ದೆಗೆ
ಅರ್ಹತೆ: ಐಟಿಐ ಅಥವಾ ಡಿಪ್ಲೊಮಾ ಶಿಕ್ಷಣವನ್ನು ಮೆಕ್ಯಾನಿಕಲ್ ಬ್ಯಾಂಚ್ ನಲ್ಲಿ ಪಡೆದಿದ್ದು, ಮೆಕ್ಯಾನಿಕ್ ಕೆಲಸದ ಅನುಭವವಿರಬೇಕು.
ವೇತನ ಶ್ರೇಣಿ:
ಇವು ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು, ಕರ್ತವ್ಯದ ಗಂಟೆ ಹಾಗೂ ದಿನಗಳ ಆಧಾರದ ಮೇಲೆ ವೇತನವನ್ನು ಕೆಕೆಆರ್‌ಟಿಸಿ ಆಯ್ಕೆ ಸಮಿತಿಯು ನಿಗದಿ ಮಾಡಲಿದೆ.
ಚಾಲಕ ಹುದ್ದೆಯ ನೇರ ಸಂದರ್ಶನ:
02-12-202400 04-12-2024 ತಾಂತ್ರಿಕ ಸಹಾಯಕ ಹುದ್ದೆಗೆ ನೇರ ಸಂದರ್ಶನ: 06-12-202400 07-12-2024 หู & ತಿಗಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕೃತ ವೆಬ್‌ಸೈಟ್ ವಿಳಾಸ:https://kkrtc. karnataka.gov.in ಗೆ ಭೇಟಿ ನೀಡಬಹುದು.
- Website link – Click here..