KPSC SDA Select List: ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ 2ನೇ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆ ಪಟ್ಟಿಗಳನ್ನು ಇದೀಗ ಪ್ರಕಟಿಸಲಾಗಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
KPSC SDA Select List: 2018ನೇ ಸಾಲಿನ ವಿವಿಧ ನ್ಯಾಯಾಂಗ ಘಟಕಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರ (SDA ) ವೃಂದದ ಹುದ್ದೆಗಳ 2ನೇ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆ ಪಟ್ಟಿ (Additional List & Additional Select List) ಗಳನ್ನು ಇದೀಗ ಪ್ರಕಟಿಸಲಾಗಿದೆ.
• Additional Select List 1- Click Here
• Additional Select List 2 – Click Here
• Additional Select List 3 – Click Here
ಆಯೋಗದ ಅಧಿಸೂಚನೆ ಸಂಖ್ಯೆ:ಇ(2)7271/2018-19/ಪಿಎಸ್‌ಸಿ, ಇ(2)7272/2018-19/ಪಿಎಸ್‌ಸಿ, ದಿನಾಂಕ:11.02.2019 ಹಾಗೂ ತಿದ್ದುಪಡಿ ಅಧಿಸೂಚನೆ ಸಂಖ್ಯೆ:ಇ(3)777/2019-20/ಪಿಎಸ್‌ಸಿ, ದಿನಾಂಕ:23.01.2020ರಲ್ಲಿ ಅಧಿಸೂಚಿಸಿರುವ 2018ನೇ ಸಾಲಿನ ವಿವಿಧ ನ್ಯಾಯಾಂಗ ಘಟಕಗಳ ಹೈದ್ರಾಬಾದ್-ಕರ್ನಾಟಕ ವೃಂದದ-81 ಹಾಗೂ ಉಳಿಕೆ ಮೂಲ ವೃಂದದ 494 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ:02.03.2021ರಂದು ಹಾಗೂ ಉಳಿಕೆ ಮೂಲ ವೃಂದದ ಹುದ್ದೆಗಳ ಹೆಚ್ಚುವರಿ ಪಟ್ಟಿಯನ್ನು ದಿನಾಂಕ:11.08.2023ರಂದು ಹಾಗೂ ಹೆಚ್ಚುವರಿ ಆಯ್ಕೆಪಟ್ಟಿಯನ್ನು ದಿನಾಂಕ:26.09.2022ರಂದು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ, ಸದರಿ ಹುದ್ದೆಗಳ ಶೇಕಡ 10ರಷ್ಟು ವರ್ಗೀಕರಣಕ್ಕೆ ಸೀಮಿತಗೊಳಿಸಿ, ಹೆಚ್ಚುವರಿ ಆಯ್ಕೆಪಟ್ಟಿಗಾಗಿ ಇಲಾಖೆಗಳಿಂದ ಸ್ವೀಕೃತವಾದ ಬೇಡಿಕೆ ಪತ್ರಗಳ ಕಾಲಾನುಕ್ರಮದನುಸಾರ ಉಳಿಕೆ ಮೂಲ ವೃಂದದ 64 ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಹಾಗೂ ಕಟ್‌ಆಫ್ ಅಂಕಗಳ ಪಟ್ಟಿಯನ್ನು ಮತ್ತು ಹೈ.ಕ ವೃಂದದ ಹುದ್ದೆಗಳ ಶೇಕಡ 10ರಷ್ಟು ವರ್ಗೀಕರಣಕ್ಕೆ ಸಿದ್ಧಪಡಿಸಲಾದ ಹೆಚ್ಚುವರಿ ಪಟ್ಟಿ ಹಾಗೂ 14 ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಮತ್ತು ಕಟ್‌ಆಫ್ ಅಂಕಗಳ ಪಟ್ಟಿಯನ್ನು ದಿನಾಂಕ:04.08.2025ರಂದು ಆಯೋಗದ ವೆಬ್‌ಸೈಟ್ http://kpsc.kar.nic.in ರಡಿಯಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
• Read more…