KREIS Teacher Recruitment 2026: ಕರ್ನಾಟಕ ವಸತಿ ಶಾಲೆಗಳಲ್ಲಿ 1,087 ಶಿಕ್ಷಕರ ನೇಮಕಾತಿ | ಅರ್ಜಿ ಆರಂಭ, TET ಕಡ್ಡಾಯ!

KREIS Teacher Recruitment 2026: ಕರ್ನಾಟಕ ವಸತಿ ಶಾಲೆಗಳಲ್ಲಿ 1,087 ಶಿಕ್ಷಕರ ನೇಮಕಾತಿ | ಅರ್ಜಿ ಆರಂಭ, TET ಕಡ್ಡಾಯ!

KREIS Teacher Recruitment 2026 Update News

ಕರ್ನಾಟಕ ರಾಜ್ಯದ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ಲಭ್ಯವಾಗಿದೆ. ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 1,087 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಗಣಕಯಂತ್ರ, ದೈಹಿಕ ಶಿಕ್ಷಣ ಮತ್ತು ಚಿತ್ರಕಲಾ ಶಿಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಉಳಿಕೆ ಮೂಲ ವೃಂದಕ್ಕೆ 767 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ 320 ಹುದ್ದೆಗಳು ಮೀಸಲಾಗಿವೆ.

KREIS Teacher Recruitment 2026 Highlights

  • ಸಂಸ್ಥೆ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)
  • ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
  • ಒಟ್ಟು ಹುದ್ದೆಗಳು: 1,087
  • ಉದ್ಯೋಗ ಸ್ಥಳ: ಕರ್ನಾಟಕ
  • ಅರ್ಜಿ ವಿಧಾನ: ಆನ್‌ಲೈನ್
  • ಉದ್ಯೋಗ ಪ್ರಕಾರ: ರಾಜ್ಯ ಸರ್ಕಾರಿ ಉದ್ಯೋಗ

ಒಟ್ಟು ಹುದ್ದೆಗಳ ವಿವರ

  • ಉಳಿಕೆ ಮೂಲ ವೃಂದ – 767
  • ಕಲ್ಯಾಣ ಕರ್ನಾಟಕ ವೃಂದ – 320

ಒಟ್ಟು ಹುದ್ದೆಗಳು – 1,087

ವಿಷಯವಾರು ಹುದ್ದೆಗಳು

ಉಳಿಕೆ ಮೂಲ ವೃಂದ

  • ಕನ್ನಡ ಶಿಕ್ಷಕರು – 103
  • ಇಂಗ್ಲಿಷ್ ಶಿಕ್ಷಕರು – 108
  • ಹಿಂದಿ ಶಿಕ್ಷಕರು – 55
  • ಗಣಿತ ಶಿಕ್ಷಕರು – 35
  • ವಿಜ್ಞಾನ ಶಿಕ್ಷಕರು – 32
  • ಸಮಾಜ ವಿಜ್ಞಾನ ಶಿಕ್ಷಕರು – 24
  • ದೈಹಿಕ ಶಿಕ್ಷಣ ಶಿಕ್ಷಕರು – 33
  • ಪದವೀಧರ ಚಿತ್ರಕಲಾ ಶಿಕ್ಷಕರು – 17
  • ಡಿಪ್ಲೊಮಾ ಚಿತ್ರಕಲಾ ಶಿಕ್ಷಕರು – 17

ಕಲ್ಯಾಣ ಕರ್ನಾಟಕ ವೃಂದ

  • ಕನ್ನಡ – 62
  • ಇಂಗ್ಲಿಷ್ – 69
  • ಹಿಂದಿ – 31
  • ಗಣಿತ – 103
  • ವಿಜ್ಞಾನ – 106
  • ಸಮಾಜ ವಿಜ್ಞಾನ – 154
  • ಗಣಕಯಂತ್ರ ಶಿಕ್ಷಕರು – 57
  • ದೈಹಿಕ ಶಿಕ್ಷಣ ಶಿಕ್ಷಕರು – 81

• KREIS Teacher Recruitment 2026 Notification Link – Click Here Download

ಶೈಕ್ಷಣಿಕ ಅರ್ಹತೆ

ಹುದ್ದೆಗೆ ಅನುಗುಣವಾಗಿ ಕೆಳಗಿನ ವಿದ್ಯಾರ್ಹತೆ ಅಗತ್ಯ.

  • ಸಂಬಂಧಿತ ವಿಷಯದಲ್ಲಿ ಪದವಿ
  • ಸ್ನಾತಕೋತ್ತರ ಪದವಿ (ಅಗತ್ಯವಿರುವ ಹುದ್ದೆಗಳಿಗೆ)
  • B.Ed
  • B.E / B.Tech
  • BCA
  • B.Sc
  • B.P.Ed
  • BFA
  • ಡಿಪ್ಲೊಮಾ (ಚಿತ್ರಕಲಾ ಹುದ್ದೆಗಳಿಗೆ)
TET/CTET ಕಡ್ಡಾಯವೇ?

ಹೌದು.

ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳು Karnataka TET Paper-2 ಅಥವಾ CTET Paper-2 ಉತ್ತೀರ್ಣರಾಗಿರಬೇಕು.

  • ಕನ್ನಡ
  • ಇಂಗ್ಲಿಷ್
  • ಹಿಂದಿ
  • ಗಣಿತ
  • ವಿಜ್ಞಾನ
  • ಸಮಾಜ ವಿಜ್ಞಾನ
ವಯೋಮಿತಿ
  • ಕನಿಷ್ಠ – 18 ವರ್ಷ
  • ಗರಿಷ್ಠ – 45 ವರ್ಷ

ಸರ್ಕಾರದ ನಿಯಮಾನುಸಾರ ವಿವಿಧ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಲಭ್ಯ.

ಅರ್ಜಿ ಶುಲ್ಕ
  • ಸಾಮಾನ್ಯ / OBC – ₹750
  • SC / ST / ಪ್ರವರ್ಗ-1 / ಮಾಜಿ ಸೈನಿಕರು – ₹500
  • ವಿಶೇಷ ಚೇತನ ಅಭ್ಯರ್ಥಿಗಳು – ₹250
ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆ ಈ ಹಂತಗಳ ಮೂಲಕ ನಡೆಯಲಿದೆ.

  • Offline OMR ಪರೀಕ್ಷೆ
  • ಕನ್ನಡ ಭಾಷಾ ಅರ್ಹತಾ ಪರೀಕ್ಷೆ
  • ದಾಖಲೆ ಪರಿಶೀಲನೆ
  • ಮೆರಿಟ್ ಪಟ್ಟಿ
ಪ್ರಮುಖ ದಿನಾಂಕಗಳು
  • ಅಧಿಸೂಚನೆ ಪ್ರಕಟಣೆ – 10 ಜುಲೈ 2026
  • ಅರ್ಜಿ ಆರಂಭ – 15 ಜುಲೈ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನ – 13 ಆಗಸ್ಟ್ 2026
  • ಶುಲ್ಕ ಪಾವತಿಸಲು ಕೊನೆಯ ದಿನ – 14 ಆಗಸ್ಟ್ 2026
ಅರ್ಜಿ ಸಲ್ಲಿಸುವ ವಿಧಾನ(How to apply)

ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ವಿದ್ಯಾರ್ಹತೆ, ವಿಷಯ ಸಂಯೋಜನೆ, ಮೀಸಲಾತಿ, ವಯೋಮಿತಿ ಮತ್ತು ಪರೀಕ್ಷಾ ನಿಯಮಗಳನ್ನು ಪರಿಶೀಲಿಸುವುದು ಕಡ್ಡಾಯ.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ

ಈ ಮಾಹಿತಿಯೂ ತ್ವರಿತ ಮಾಹಿತಿ ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಅಂತಿಮ ಅರ್ಹತೆ, ಮೀಸಲಾತಿ, ಪರೀಕ್ಷಾ ಪಠ್ಯಕ್ರಮ, ಕನ್ನಡ ಭಾಷಾ ಅರ್ಹತೆ ಹಾಗೂ ಇತರೆ ಎಲ್ಲಾ ನಿಯಮಗಳಿಗೆ ಅಧಿಕೃತ ಅಧಿಸೂಚನೆಯೇ ಅಂತಿಮವಾಗಿರುತ್ತದೆ.

WhatsApp Group Join Now
Telegram Group Join Now